ಟಾಟಾ ಸನ್ಸ್ ಅಧ್ಯಕ್ಷರಾಗಿ ಎನ್ ಚಂದ್ರಶೇಖರನ್ ಮರುನೇಮಕ ಪ್ರಶ್ನಿಸಿದ ಟಾಟಾ ಟ್ರಸ್ಟ್ಸ್!
ಕಂಪನಿಯ ಸಂಘಟನಾ ನಿಯಮಾವಳಿ ಪ್ರಕಾರ, ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ನಿರ್ದೇಶಕರ ಪೈಕಿ ಹೆಚ್ಚಿನವರ ಬೆಂಬಲ ಅಗತ್ಯವಿದೆ.

ಮುಂಬೈ: ದೇಶದ ಪ್ರತಿಷ್ಠಿತ ಉದ್ಯಮ ಸಮೂಹ ಟಾಟಾ ಸನ್ಸ್‌ನ ಕಾರ್ಯಕಾರಿ ಅಧ್ಯಕ್ಷರಾಗಿ ಎನ್. ಚಂದ್ರಶೇಖರನ್ ಅವರನ್ನು ಮುಂದಿನ 5 ವರ್ಷಗಳ ಅವಧಿಗೆ ಮರುನೇಮಕ ಮಾಡುವ ಸಂಬಂಧ ಸೆಪ್ಟೆಂಬರ್ 17 ರಂದು ಕೈಗೊಂಡ ನಿರ್ಧಾರವನ್ನು ಟಾಟಾ ಟ್ರಸ್ಟ್‌ಗಳು ಪ್ರಶ್ನಿಸಿವೆ.
ಕಂಪನಿಯ ಸಂಘಟನಾ ನಿಯಮಾವಳಿ ಪ್ರಕಾರ, ಟ್ರಸ್ಟ್‌ನಿಂದ ನಾಮನಿರ್ದೇಶನಗೊಂಡ ನಿರ್ದೇಶಕರ ಪೈಕಿ ಹೆಚ್ಚಿನವರ ಬೆಂಬಲ ಅಗತ್ಯವಿದೆ. ಅಧ್ಯಕ್ಷರ ನಿರ್ಣಾಯಕ ಮತವು ಸಂಘದ ನಿಯಮಾವಳಿಗಳನ್ನು (AoA) ಮೀರುವಂತಿಲ್ಲ ಎಂದು ವಾದಿಸಿವೆ.
ಕಳೆದ ಮಂಡಳಿಯ ಬಹುತೇಕ ಎಲ್ಲಾ ಸದಸ್ಯರು ಚಂದ್ರಶೇಖರನ್ ಅವರ ಮರುನೇಮಕದ ಪರವಾಗಿ ಮತ ಚಲಾಯಿಸಿದರೆ, ಹಿರಿಯ ಸದಸ್ಯ ನೋಯೆಲ್ ಟಾಟಾ ಅವರು ಮಾತ್ರ ಈ ನಿರ್ಣಯವನ್ನು ಬಲವಾಗಿ ವಿರೋಧಿಸಿ ಮತ ಹಾಕಿದ್ದಾರೆ. ಇದರೊಂದಿಗೆ, ಟಾಟಾ ಸನ್ಸ್ ಮಂಡಳಿಯಲ್ಲಿ ಅಸಮಾಧಾನ ಉಲ್ಬಣಗೊಂಡಿತು.
ಮಂಡಳಿಯ ಸಭೆಯಲ್ಲಿ ಯಾವುದೇ ಬಿಕ್ಕಟ್ಟು ಇರಲಿಲ್ಲ ಮತ್ತು ಟ್ರಸ್ಟ್ ನಾಮನಿರ್ದೇಶಿತ ಇಬ್ಬರು ನಿರ್ದೇಶಕರಲ್ಲಿ ಒಬ್ಬರು ಅದರ ವಿರುದ್ಧ ಮತ ಚಲಾಯಿಸಿದ ನಂತರ ನಿರ್ಣಯವನ್ನು ಮಾನ್ಯವಾಗಿ ಅಂಗೀಕರಿಸಲು ಸಾಧ್ಯವಿಲ್ಲ ಎಂದು ಟ್ರಸ್ಟ್‌ಗಳು ಹೇಳಿಕೆಯಲ್ಲಿ ತಿಳಿಸಿವೆ.
"ಟಾಟಾ ಸನ್ಸ್ ಮಂಡಳಿಯಲ್ಲಿ ಟಾಟಾ ಟ್ರಸ್ಟ್ಸ್‌ನ ಇಬ್ಬರು ನಾಮನಿರ್ದೇಶಿತ ಸದಸ್ಯರಿದ್ದಾರೆ. ಆ ಇಬ್ಬರಲ್ಲಿ ಬಹುಮತ ಎಂದರೆ ಒಬ್ಬರಲ್ಲ, ಇಬ್ಬರೂ ಒಪ್ಪಿಗೆ ಸೂಚಿಸುವುದು ಎಂದರ್ಥ. "ಸೆಪ್ಟೆಂಬರ್ 17, 2026 ರಂದು, ಅಂತಹ ಒಬ್ಬ ನಿರ್ದೇಶಕರು ನಿರ್ಣಯದ ವಿರುದ್ಧ ಮತ ಚಲಾಯಿಸಿದರು. ಹೀಗಾಗಿ, 'ಆರ್ಟಿಕಲ್ಸ್ ಆಫ್ ಅಸೋಸಿಯೇಷನ್' (AoA) ಕಡ್ಡಾಯಗೊಳಿಸಿದಂತೆ ಟಾಟಾ ಟ್ರಸ್ಟ್ಸ್‌ನ ನಾಮನಿರ್ದೇಶಿತ ನಿರ್ದೇಶಕರ ಸಕಾರಾತ್ಮಕ ಬೆಂಬಲ ಸಿಗಲಿಲ್ಲ. ಆ ಷರತ್ತು ಪೂರೈಸಲ್ಪಡಲಿಲ್ಲ, ಪರಿಣಾಮವಾಗಿ ನಿರ್ಣಯವೂ ಅಂಗೀಕಾರವಾಗಲಿಲ್ಲ ಎಂದು ಟ್ರಸ್ಟ್ಸ್ ಹೇಳಿದೆ.
ಚಂದ್ರಶೇಖರನ್ ಅವರಿಗೆ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಮತ್ತೊಂದು ಐದು ವರ್ಷಗಳ ಅವಧಿಯನ್ನು ನೀಡುವ ಪರವಾಗಿ ಟಾಟಾ ಸನ್ಸ್ ಮಂಡಳಿಯಲ್ಲಿ 4-1 ಮತಗಳ ಬಂದಿತ್ತು. ಟಾಟಾ ಟ್ರಸ್ಟ್ಸ್ ಅಧ್ಯಕ್ಷ ನೋಯೆಲ್ ಟಾಟಾ ಈ ಪ್ರಸ್ತಾವನೆಯನ್ನು ವಿರೋಧಿಸಿದ್ದರು. ಆರಂಭದಲ್ಲಿ ಮತ್ತೊಂದು ಅವಧಿಯನ್ನು ಬಯಸುವುದಿಲ್ಲ ಎಂದು ಹೇಳಿದ್ದ ಚಂದ್ರಶೇಖರನ್, ಮಂಡಳಿಯು ಮರುಪರಿಶೀಲಿಸುವಂತೆ ಕೋರಿದ ನಂತರ ಮುಂದುವರಿಯಲು ಒಪ್ಪಿಕೊಂಡಿದ್ದರು.
ಟಾಟಾ ಸನ್ಸ್‌ನಲ್ಲಿ ಒಟ್ಟಾರೆಯಾಗಿ ಸುಮಾರು ಶೇ. 66 ರಷ್ಟು ಪಾಲನ್ನು ಹೊಂದಿರುವ ಟ್ರಸ್ಟ್, ಮಂಡಳಿಯ ಒಟ್ಟಾರೆ ಮತಗಳ ಲೆಕ್ಕಾಚಾರ ಇಲ್ಲಿ ಅಪ್ರಸ್ತುತ ಎಂದು ಹೇಳಿದೆ. ಏಕೆಂದರೆ 'ಆರ್ಟಿಕಲ್ಸ್' (ನಿಯಮಾವಳಿಗಳು) ಟ್ರಸ್ಟ್‌ನಿಂದ ನಾಮನಿರ್ದೇಶಿತರಾದ ನಿರ್ದೇಶಕರಿಗೆ ಸಂಬಂಧಿಸಿದಂತೆ ಪ್ರತ್ಯೇಕ ಅವಶ್ಯಕತೆಯನ್ನು ವಿಧಿಸುತ್ತವೆ. ಮತದ ಫಲಿತಾಂಶ 4:1 ಆಗಿರಲಿ ಅಥವಾ ಬೇರೆ ಯಾವುದೇ ಸಂಖ್ಯೆಯಾಗಿರಲಿ, ಅದು ಅಪ್ರಸ್ತುತ. ಒಂದು ಷರತ್ತು ಪೂರೈಸಲ್ಪಡುತ್ತದೆ ಅಥವಾ ಇಲ್ಲ ಅಷ್ಟೇ. ಈ ಪ್ರಕರಣದಲ್ಲಿ ಆ ಷರತ್ತು ಪೂರೈಸಲ್ಪಟ್ಟಿಲ್ಲ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



