ಡಿಜಿಟಲ್ ಆಡ್
ಬೃಹತ್ ಹಾಗೂ ಮಾರ್ಕೆಟಿಂಗ್ ಕಂಪನಿಗಳು ಈಗ ಡಿಜಿಟಲ್ ಜಾಹೀರಾತಿನ ಮೇಲೆ ತಮ್ಮ ದೃಷ್ಟಿ ಕೇಂದ್ರೀಕರಿಸಿವೆ.

ಸ್ಮಾರ್ಟ್‌ಫೋನ್, ಐಫೋನ್, ಐಪ್ಯಾಡ್, ಟ್ಯಾಬ್ಲೆಟ್ ಯುಗ ಇದು. ಸಾಮಾನ್ಯ ಮೊಬೈಲ್ ಸೆಟ್‌ನಿಂದ ಈಗ ಜನರು ಸ್ಮಾರ್ಟ್‌ಫೋನ್, ಐಫೋನ್‌ಗಳ ಮೊರೆ ಹೋಗುತ್ತಿದ್ದಾರೆ. ಹೊಸತರಲ್ಲಿ ತೀರಾ ದುಬಾರಿ ಎನಿಸಿದ ಸ್ಮಾರ್ಟ್‌ಫೋನ್, ಐಫೋನ್‌ಗಳು ಈಗ ಬಹುತೇಕರ ಕಿಸೆಯಲ್ಲಿವೆ. ಇವುಗಳ ಮಾರುಕಟ್ಟೆ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಇದೆ. ಇದು ಕೇವಲ ಟೆಲಿಕಾಂ ಕ್ಷೇತ್ರದ ಕಂಪನಿಗಳಿಗೆ ಮಾತ್ರವಲ್ಲದೇ ಇಡೀ ಆರ್ಥಿಕ ವ್ಯವಸ್ಥೆ ಹಾಗೂ ಕೈಗಾರಿಕೋದ್ಯಮ ಮೇಲೆ ಪರಿಣಾಮ ಬೀರಿದೆ.
ಬೃಹತ್ ಹಾಗೂ ಮಾರ್ಕೆಟಿಂಗ್ ಕಂಪನಿಗಳು ಈಗ ಡಿಜಿಟಲ್ ಜಾಹೀರಾತಿನ ಮೇಲೆ ತಮ್ಮ ದೃಷ್ಟಿ ಕೇಂದ್ರೀಕರಿಸಿವೆ. ಅಂತರ್ಜಾಲ ಈಗ ಎಲ್ಲರ ಕೈಗೆಟುವಂತಾಗಿದ್ದು, ಮೊಬೈಲ್‌ಗಳ ಮೂಲವೇ ಜನರು ಈ ಸೌಲಭ್ಯ ಪಡೆಯುತ್ತಿದ್ದಾರೆ. ಸಾಮಾಜಿಕ ತಾಣಗಳಲ್ಲಿ, ಪ್ರಸಿದ್ದ ವೆಬ್‌ಸೈಟ್‌ಗಳಲ್ಲಿ, ಹೆಚ್ಚು ಚಾಲ್ತಿಯಲ್ಲಿರುವ ಬ್ಲಾಗ್, ಯು ಟ್ಯೂಬ್... ಹೀಗೆ ಎಲ್ಲೆಲ್ಲೂ ಜಾಹೀರಾತುಗಳದ್ದೇ ದರ್ಬಾರು.
ಆನ್‌ಲೈನ್ ಬ್ರ್ಯಾಂಡ್ ಮಾರ್ಕೆಟಿಂಗ್ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯೂ ಆಗಿವೆ. ಎಲ್‌ಜಿ, ಮಾರುತಿ ಸುಝುಕಿ, ಹ್ಯುಂಡೈ, ಹಿಂದುಸ್ತಾನ್ ಯುನಿಲಿವರ್ ಮತ್ತಿತರ ಕಂಪನಿಗಳು ಡಿಜಿಟಲ್ ಜಾಹೀರಾತಿಗಾಗಿ ಮಾಡುತ್ತಿರುವ ವೆಚ್ಚವನ್ನು ಹೆಚ್ಚಿಸಿವೆ.
ಕುಸಿತವಾಯ್ತು ವರ
2008ರಲ್ಲಿ ಸಂಭವಿಸಿದ ಆರ್ಥಿಕ ಕುಸಿತ ಡಿಜಿಟಲ್ ಜಾಹೀರಾತುಗಳಿಗೆ ವರವಾಗಿ ಪರಿಣಮಿಸಿತು. ಈ ಸಂದರ್ಭದಲ್ಲಿ ಕಂಪನಿಗಳ ಆರ್ಥಿಕ ಚಟುವಟಿಕೆ ಹಾಗೂ ಲಾಭಾಂಶದಲ್ಲಿ ಭಾರಿ ಕುಸಿತ ಕಂಡು ಕಂಪನಿಗಳು ಸಾಂಪ್ರದಾಯಿಕ ಜಾಹೀರಾತಿನ ಹೊರತಾಗಿ ಬೇರೆ ಮಾದ್ಯಮಗಳನ್ನು ಕಂಡುಕೊಳ್ಳಲು ಮುಂದಾದವು. ಆಗ ಡಿಜಿಟಲ್ ಜಾಹೀರಾತು ಇಂಥ ಕಂಪನಿಗಳಿಗೆ ಉತ್ತಮ ವೇದಿಕೆ ಆಗಿ ಮಾರ್ಪಟ್ಟಿತು. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಜನರನ್ನು ತಲುಪಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ಸಹಾಯವಾಯಿತು.
ಹೆಚ್ಚಿದೆ ಐದು ಪಟ್ಟು
2008ಕ್ಕೆ ಹೋಲಿಸಿದರೆ ಡಿಜಿಟಲ್ ಜಾಹೀರಾತುಗಳ ವೆಚ್ಚ ಸುಮಾರು 5 ಪಟ್ಟು ಹೆಚ್ಚಾಗಿದೆ. ಆದರೂ ಬಹುತೇಕ ಕಂಪನಿಗಳು ಡಿಜಿಟಲ್ ಜಾಹೀರಾತಿಗೇ ಹೆಚ್ಚಿನ ಮಹತ್ವ ನೀಡುತ್ತಿವೆ. ಹಣಕಾಸು ಕ್ಷೇತ್ರದ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಡಿಜಿಟಲ್ ಜಾಹೀರಾತುಗಳು ಬರುತ್ತವೆ. ಹೂಡಿಕೆದಾರರು ಹಾಗೂ ಗ್ರಾಹಕರು ಆನ್ ಲೈನ್ ಸೌಲಭ್ಯ ಹೆಚ್ಚಾಗಿ ಬಳಸುತ್ತಿರುವುದು ಇದಕ್ಕೆ ಕಾರಣ.
ಶೇ.45ರಷ್ಟು ಹೆಚ್ಚಳ
ಸರ್ವೇಯೊಂದರ ಪ್ರಕಾರ 2011ರಲ್ಲಿ ಡಿಜಿಟಲ್ ಜಾಹೀರಾತುಗಳ ಒಟ್ಟು ವೆಚ್ಚ ಸುಮಾರು
ರು. 1, 1535 ಕೋಟಿ. 2012ರಲ್ಲಿ ಇದು ಶೇ.45ರಷ್ಟು ಏರಿಕೆಯಾಗಿದೆ. 2011ರಲ್ಲಿ ಎಲ್ಲ ಮಾದ್ಯಮಗಳ ಜಾಹೀರಾತಿನ ಒಟ್ಟು ವೆಚ್ಚ ರು. 30 ಸಾವಿರ ಕೋಟಿ. ಇದರಲ್ಲಿ ಡಿಜಿಟಲ್ ಜಾಹೀರಾತುಗಳ ಪಾಲು ರು. 1,540 ಕೋಟಿ. 2016ರ ವೇಳೆಗೆ ಎಲ್ಲ ಮಾದ್ಯಮಗಳ ಜಾಹೀರಾತಿನ ಒಟ್ಟು ವೆಚ್ಚ ರು. 58 ಸಾವಿರ ಕೋಟಿ ಆಗುವ ನಿರೀಕ್ಷೆಯಿದ್ದು, ಇದರಲ್ಲಿ ಡಿಜಿಟಲ್ ಜಾಹೀರಾತುಗಳ ಪಾಲು 5,700 ಕೋಟಿ ಆಗಲಿದೆ.
ಈಗ ಗ್ರಾಹಕರು ತಾವು ಖರೀದಿಸುವ ವಸ್ತುಗಳ ಬಗ್ಗೆ ಅಂತರ್ಜಾಲದಲ್ಲಿ ಮಾಹಿತಿ ಪಡೆದು, ವಿವಿಧ ಕಂಪನಿಗಳ ಉತ್ಪನ್ನ, ಬೆಲೆ, ಗುಣಮಟ್ಟದಕ್ಕೆ ಹೋಲಿಕೆ ಮಾಡಿ, ಉತ್ತಮ ಕಂಪನಿಗಳ ವಸ್ತುಗಳನ್ನೇ ಆಯ್ದುಕೊಳ್ಳುತ್ತಿದ್ದಾರೆ. ಹೀಗಾಗಿ ಗ್ರಾಹಕರ ಮೇಲೆ ಪ್ರಭಾವ ಬೀರುವುದು ಕಂಪನಿಗಳಿಗೆ ಅನಿವಾರ್ಯವಾಗಿದೆ.
2012ರಲ್ಲಿ ಡಿಜಿಟಲ್ ಜಾಹೀರಾತುಗಳ ಮೇಲಿನ ವೆಚ್ಚ
ಇಂಟರ್‌ನೆಟ್ ಮೂಲಕ
ರು. 1,840 ಕೋಟಿ.
ಮೊಬೈಲ್ ಮೂಲಕ ರು. 150
ಕೋಟಿ.
2013ರಲ್ಲಿ ಡಿಜಿಟಲ್ ಜಾಹೀರಾತುಗಳ ಮೇಲಿನ ವೆಚ್ಚ(ಅಂದಾಜು)
ಇಂಟರ್‌ನೆಟ್
ಮೂಲಕ
ರು. 2,360 ಕೋಟಿ.
ಮೊಬೈಲ್ ಮೂಲಕ ರು. 230
ಕೋಟಿ.
ಭಾರತದಲ್ಲಿ ಡಿಜಿಟಲ್ ಜಾಹೀರಾತುಗಳು
2012ರಲ್ಲಿ ಜಾಹೀರಾತಿನ ಮೇಲಿನ ಒಟ್ಟು ವೆಚ್ಚ ರು. 33,700 ಕೋಟಿ. ಇದರಲ್ಲಿ ಡಿಜಿಟಲ್ ಜಾಹೀರಾತುಗಳ ಪಾಲು ಶೇ.5.
2013ರಲ್ಲಿ ಜಾಹೀರಾತಿನ ಮೇಲಿನ ವೆಚ್ಚ ರು. 38,400 ಕೋಟಿ. ಇದರಲ್ಲಿ ಡಿಜಿಟಲ್ ಜಾಹೀರಾತುಗಳ ಪಾಲು ಶೇ.6 (ಅಂದಾಜು).
2014ರಲ್ಲಿ ಜಾಹೀರಾತಿನ ಮೇಲಿನ ವೆಚ್ಚ ರು. 44,000 ಕೋಟಿ ರು. ಇದರಲ್ಲಿ ಡಿಜಿಟಲ್ ಜಾಹೀರಾತುಗಳ ಪಾಲು ಶೇ.7 (ಅಂದಾಜು).
2014ರಲ್ಲಿ ಡಿಜಿಟಲ್ ಜಾಹೀರಾತುಗಳ ಮೇಲಿನ ವೆಚ್ಚ(ಅಂದಾಜು)
ಇಂಟರ್‌ನೆಟ್
ಮೂಲಕ
ರು. 3,010 ಕೋಟಿ.
ಮೊಬೈಲ್ ಮೂಲಕ ರು. 340
ಕೋಟಿ.
2015ರಲ್ಲಿ ಡಿಜಿಟಲ್ ಜಾಹೀರಾತುಗಳ ಮೇಲಿನ ವೆಚ್ಚ(ಅಂದಾಜು)
ಇಂಟರ್‌ನೆಟ್
ಮೂಲಕ
ರು. 3,860 ಕೋಟಿ.
ಮೊಬೈಲ್ ಮೂಲಕ ರು. 510
ಕೋಟಿ.
2013ರಲ್ಲಿ ಡಿಜಿಟಲ್ ಜಾಹೀರಾತುಗಳ ಮೇಲಿನ ವೆಚ್ಚ(ಅಂದಾಜು)
ಇಂಟರ್‌ನೆಟ್
ಮೂಲಕ
ರು. 5,700ಕೋಟಿ.
ಮೊಬೈಲ್ ಮೂಲಕ ರು. 710ಕೋಟಿ.
-ಗಣೇಶ ಹೆಗಡೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


