ವಾಣಿಜ್ಯ

ಕಾರು ಸಾಲ

ಕಾರು ಖರೀದಿಗಾಗಿ ಬ್ಯಾಂಕ್‌ನಿಂದ ಸಾಲ ಪಡೆದಿರುತ್ತೀರಿ. ಒಪ್ಪಿಕೊಂಡ ಸಾಲದ ಕಂತನ್ನು ಪಾವತಿಸಲು ಪದೇ ಪದೆ ವಿಫಲರಾದಾಗ ನೀವು ಸುಸ್ತಿದಾರರಾಗುತ್ತೀರಿ.

ಕಾರು ಸಾಲ
Published On :

ಸುಸ್ತಿದಾರನಾಗುವುದು ಹೇಗೆ?
ಕಾರು ಖರೀದಿಗಾಗಿ ಬ್ಯಾಂಕ್‌ನಿಂದ ಸಾಲ ಪಡೆದಿರುತ್ತೀರಿ. ಒಪ್ಪಿಕೊಂಡ ಸಾಲದ ಕಂತನ್ನು ಪಾವತಿಸಲು ಪದೇ ಪದೆ ವಿಫಲರಾದಾಗ ನೀವು ಸುಸ್ತಿದಾರರಾಗುತ್ತೀರಿ. ಕಾರು ಸಾಲ, ಅದರ ಮರುಪಾವತಿ ಹೊಣೆ, ಸುಸ್ತಿದಾರರಾಗಲು ಕಾರಣವಾಗುವ ಅಂಶಗಳು, ಅದರಿಂದಾಗುವ ಸಮಸ್ಯೆಗಳು, ಪರಿಹಾರಗಳು ಎಲ್ಲವನ್ನೂ ಒಪ್ಪಂದದಲ್ಲಿ ನಮೂದಿಸಿರಲಾಗಿರುತ್ತದೆ. ನೀವು ಸಾಲದ ಕಂತನ್ನು ಪಾವತಿಸಲು 30, 60 ಅಥವಾ 90 ದಿನಗಳು ವಿಳಂಬ ಮಾಡಿದರೆ ಕೊನೆಗೆ ಸುಸ್ತಿದಾರರಾಗುತ್ತೀರಿ.

ಸಂಕಷ್ಟ ಆರಂಭ ಎಲ್ಲಿ?
ಸಾಲ ಮರುಪಾವತಿಸಲು ಆಗಲಿಲ್ಲ ಎಂದು ಬ್ಯಾಂಕ್ ಅಥವಾ ಸಾಲ ನೀಡಿದವರನ್ನು ಕಂಡೊಡನೆ ತಪ್ಪಿಸಿಕೊಳ್ಳುವುದರಿಂದ ಸಂಕಷ್ಟ ಆರಂಭವಾಗುತ್ತದೆ. ಮರುಪಾವತಿ ಸಮಸ್ಯೆ ಎದುರಾದೊಡನೆ, ನೇರವಾಗಿ ಬ್ಯಾಂಕ್‌ಗೆ ಕರೆ ಮಾಡಿ, ವಿಳಂಬಕ್ಕೆ ಕಾರಣವೇನೆಂದು ಪ್ರಾಮಾಣಿಕವಾಗಿ ತಿಳಿಸಿ.

ನೀವೇನು ಮಾಡಬೇಕು?
 ಕಾರು ಸಾಲದ ಮರುಪಾವತಿ ಅವಧಿಯನ್ನು ವಿಸ್ತರಿಸುವಂತೆ ಬ್ಯಾಂಕ್/ಸಾಲ ನೀಡಿದಾತನೊಂದಿಗೆ ಕೋರಬಹುದು. ಅಂದರೆ, 36 ತಿಂಗಳಿದ್ದ ಮರುಪಾವತಿ ಅವಧಿಯನ್ನು 48 ತಿಂಗಳಿಗೆ ವಿಸ್ತರಿಸುವಂತೆ ಮನವಿ ಸಲ್ಲಿಸುವುದು. ಆಗ ಪ್ರತಿ ತಿಂಗಳು ಪಾವತಿಸಬೇಕಾದ ಕಂತಿನ ಮೊತ್ತ ಕಡಿಮೆಯಾಗುತ್ತದೆ.
 ಪಾವತಿಯನ್ನು ಮುಂದೂಡುವಂತೆ ಬ್ಯಾಂಕ್ ಬಳಿ ಕೋರಬಹುದು. ಅಂದರೆ ಪ್ರಸ್ತುತ ತಿಂಗಳ ಕಂತನ್ನು ಮುಂದೂಡಿ, ಕೆಲ ದಿನಗಳ ಬಳಿಕ ಪಾವತಿಸಲು ಅವಕಾಶ ಕೇಳಬಹುದು.
 ಮರುಪಾವತಿ ಕಂತನ್ನು ಪಾವತಿಸಲು ಒಂದು ತಿಂಗಳ ಕಾಲಾವಕಾಶ ಕೋರಬಹುದು.
 ಕಂತು ಪಾವತಿ ಕೊನೇ ದಿನಾಂಕವನ್ನು ಶಾಶ್ವತವಾಗಿ ಬದಲಾಯಿಸುವಂತೆ ಕೇಳಿಕೊಂಡು, ನಿಮಗೆ ಸುಲಭವಾಗುವ ದಿನದಂದು ಪಾವತಿಸುತ್ತೇನೆಂದು ಹೇಳಬಹುದು.

ಕಾರು ಹರಾಜು
ಸಾಲ ಮರುಪಾವತಿಸುವಲ್ಲಿ ನೀವು ವಿಫಲರಾದರೆ ಕಾರನ್ನು ಸ್ವಾಧೀನಪಡಿಸಿಕೊಳ್ಳುವ ಅಧಿಕಾರ ಬ್ಯಾಂಕ್‌ಗೆ ಇರುತ್ತದೆ. ನಿಗದಿತ ಅವಧಿಯೊಳಗೆ ಕಂತು ಪಾವತಿಸಿ, ಇಲ್ಲದಿದ್ದರೆ ಕಾರು ಸ್ವಾಧೀನಪಡಿಸಿಕೊಳ್ಳಲಾಗುವುದು ಎಂದು ಬ್ಯಾಂಕ್ ನಿಮಗೆ ನೋಟಿಸ್ ಜಾರಿ ಮಾಡುತ್ತದೆ. ಆದರೂ ನೀವು ಮರುಪಾವತಿ ಮಾಡದಿದ್ದರೆ ಅದನ್ನು ಹರಾಜು ಮಾಡಲಾಗುತ್ತದೆ.

ಹರಾಜಿನಲ್ಲಿ ಖರೀದಿ
ಯಾವುದೇ ಕಾರು ಹರಾಜುಗೊಂಡಾಗ ಅದನ್ನು ಖರೀದಿಸುವ ಅವಕಾಶ ಎಲ್ಲರಿಗೂ ಇರುತ್ತದೆ. ತಾಂತ್ರಿಕವಾಗಿ ಅದು ಹೊಸ ಕಾರು ಆಗಿರುವುದಿಲ್ಲ. ಹಾಗಾಗಿ ಹರಾಜಿನ ವೇಳೆ ಕಾರನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಹರಾಜಿಗೂ ಮುನ್ನ ಹರಾಜು ನಡೆಯುವ ದಿನಾಂಕ, ಸ್ಥಳ, ಇತರ ವಿವರಗಳನ್ನು ಜಾಹೀರಾತಿನಲ್ಲಿ ಪ್ರಕಟಿಸಲಾಗುತ್ತದೆ. ಆದರೂ, ಹರಾಜಿನಲ್ಲಿ ಕಾರು ಕೊಳ್ಳುವ ಮೊದಲು ಅದನ್ನು ಪರೀಕ್ಷಿಸಿಕೊಂಡು, ಟೆಸ್ಟ್ ಡ್ರೈವ್ ಮಾಡಿಯೇ ಖರೀದಿಸುವುದು ಉತ್ತಮ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.