ಸಿಡಿಎಂ
ಕಾಲ ಒಂದಿತ್ತು. ಎಲ್ಲೇ ಹೋಗುವುದಿದ್ದರೂ ಖರ್ಚಿಗೆ ಬೇಕಾದ ಹಣವನ್ನು ಜೊತೆಯಲ್ಲೇ ತೆಗೆದುಕೊಂಡು ರಿಸ್ಕ್ ಅನ್ನು ಮೈಮೇಲೆಳೆದುಕೊಳ್ಳುವಂಥದ್ದು...

ಕಾಲ ಒಂದಿತ್ತು. ಎಲ್ಲೇ ಹೋಗುವುದಿದ್ದರೂ ಖರ್ಚಿಗೆ ಬೇಕಾದ ಹಣವನ್ನು ಜೊತೆಯಲ್ಲೇ ತೆಗೆದುಕೊಂಡು ರಿಸ್ಕ್ ಅನ್ನು ಮೈಮೇಲೆಳೆದುಕೊಳ್ಳುವಂಥದ್ದು. ಆದರೆ, ಇಂದು ಗಲ್ಲಿಗಲ್ಲಿಗಳಲ್ಲಿ ಇರುವ ಎಟಿಎಂಗಳು ಇಂಥ ಕ್ರಮಗಳಿಗೆ ತಿಲಾಂಜಲಿ ಇಟ್ಟಿವೆ.
ಎಟಿಎಂ ಕಾರ್ಡ್ ಮತ್ತು ಅಕೌಂಟ್‌ನಲ್ಲಿ ಹಣವಿದ್ದರೆ, ಕರೆನ್ಸಿ ನೋಟುಗಳನ್ನು ಹಿಡಿದು ಸಾಗುವ ಪ್ರಮೇಯವಂತೂ ಇಲ್ಲವೇ ಇಲ್ಲ, ಹಣ ಖರ್ಚು ಮಾಡಲು! ಆದರೆ ಬೇರೆಯವರಿಂದ ಪಡೆದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಹಣದ ರಿಸ್ಕ್ ಅಂತೂ ವ್ಯಾಪಾರಸ್ಥರಿಗೆ ಇದ್ದೇ ಇದೆ. ಸಾಮಾನ್ಯ ಜನರಿಗೂ ತಮ್ಮ ಖಾತೆಗೆ ಹಣ ತುಂಬಿಸಬೇಕಾದ ಅನಿವಾರ್ಯ ಒದಗಬಹುದು. ಆದರೆ, ಈಗ ಈ ರೀತಿಯ ಕೆಲಸವನ್ನು ಸುಲಭಗೊಳಿಸಲು ಬಂದಿವೆ ಕ್ಯಾಶ್ ಡೆಪಾಸಿಟ್ ಮಷಿನ್‌ಗಳು.
ಸದ್ಯಕ್ಕಂತೂ, ಭಾರತದ ಬ್ಯಾಂಕ್ ಕ್ಷೇತ್ರದ ದಿಗ್ಗಜ ಎಸ್‌ಬಿಐ ದೊಡ್ಡ ನಗರಗಳಲ್ಲಿ ಅಲ್ಲಲ್ಲಿ ಇಂಥ ಸಿಡಿಎಂಗಳನ್ನು ಪ್ರತಿಷ್ಠಾಪಿಸಿದೆ. ಇನ್ನು ಕೆಲವು ವರ್ಷಗಳಲ್ಲಿ ಎಟಿಎಂಗಳಂತೆ ಸಿಡಿಎಂಗಳ ಜನಪ್ರಿಯತೆಯೂ ಹೆಚ್ಚಿ, ಸಂಪೂರ್ಣ ಬ್ಯಾಂಕ್ ವ್ಯವಹಾರಗಳೇ ಯಾಂತ್ರಿಕವಾದರೂ ಅಚ್ಚರಿಯಿಲ್ಲ. ಎಟಿಎಂಗಳಿಗೆ ಬಳಸುವ ಡೆಬಿಟ್ ಕಾರ್ಡ್‌ಗಳನ್ನೇ ಬಳಸಿ ಈ ಸಿಡಿಎಂಗಳನ್ನು ಉಪಯೋಗಿಸಬಹುದಾಗಿದೆ. ಅಥವಾ ಇದೇ ಉದ್ದೇಶಕ್ಕಾಗಿ ವ್ಯಾಪಾರಸ್ಥರಿಗೆ, ಎಸ್‌ಎಂಇ ಇನ್‌ಸ್ಟಾ ಡಿಪಾಸಿಟ್ ಕಾರ್ಡ್ ಸಹ ಲಭ್ಯವಿದೆ. ಸದ್ಯದ ಸಿಡಿಎಂಗಳು ಒಂದು ವ್ಯವಹಾರಕ್ಕೆ ಗರಿಷ್ಠ 49,900 ರು.ಗಳನ್ನು ನುಂಗಬಲ್ಲವು. ಸಿಡಿಎಂಗಳು ರು. 100, 500, 1000- ಮುಖಬೆಲೆಯ ನೋಟುಗಳನ್ನು ಗುರುತಿಸಿ ಒಟ್ಟು ಮೊತ್ತವನ್ನು ಸೀದಾ ಖಾತೆಗೆ ಜಮಾ ಮಾಡಬಲ್ಲವು.
ಒಂದು ವ್ಯವಹಾರದಲ್ಲಿ ಒಟ್ಟೂ ನೋಟುಗಳ ಸಂಖ್ಯೆಯನ್ನು 300ಕ್ಕೆ ಮಿತಿಗೊಳಿಸಲಾಗಿದೆ. ನೋಟು ನುಂಗುವುದರ ಜೊತೆ, ಖಾತೆಯಲ್ಲಿರುವ ಮೊತ್ತ, ಪಿನ್ ಬದಲಾವಣೆ, ಹಿಂದಿನ ವ್ಯವಹಾರಗಳ ಸಣ್ಣ ವಿವರ ಹೀಗೆ ಎಟಿಎಂಗಳಲ್ಲಿ ದೊರೆಯುವ ಉಳಿದ ಸೌಲಭ್ಯಗಳೂ (Mini statement)ಹೀಗೆ ಎಟಿಎಂಗಳಲ್ಲಿ ದೊರೆಯುವ ಉಳಿದ ಸೌಲಭ್ಯಗಳೂ ಇವೆ. ಎಟಿಎಂಗಳಲ್ಲಿ ವ್ಯವಹರಿಸುವಾಗ ಅನುಸರಿಸುವಂಥ ಶ್ರಮವೇ ಸಿಡಿಎಂಗಳಿಗೆ ಇರುವುದರಿಂದ, ಇದು ಕ್ಲಿಷ್ಟಕರವೇನೂ ಅಲ್ಲ. ಖಾತೆ ಇರುವ ಶಾಖೆಯನ್ನೇ ಅಥವಾ ಇನ್ಯಾವುದೋ ಬ್ಯಾಂಕ್ ಅನ್ನೋ ಹುಡುಕುವ ಗೋಜು ಇಲ್ಲ. ಬ್ಯಾಂಕ್‌ನ ಕ್ಯಾಷ್ ಕೌಂಟರ್‌ಗೆ ಉದ್ದನೆಯ ಕ್ಯೂನಲ್ಲಿ ನಿಲ್ಲುವುದೂ ಬೇಡ. ಅದಕ್ಕೂ ಮಿಗಿಲಾಗಿ ಜಮಾ ಅರ್ಜಿಗಳನ್ನೂ ತುಂಬುತ್ತ ಕೂರುವ ಪ್ರಮೇಯವೂ ಇಲ್ಲ. ಕರೆನ್ಸಿ ನೋಟುಗಳು ಕೈಯಲ್ಲಿ ಬೇಕಾದವೆಂದರೆ ಎಟಿಎಂಗಳು!
ಕರೆನ್ಸಿ ನೋಟುಗಳನ್ನು ಕೈಯಲ್ಲಿ ಬೇಡವಾಯಿತೆಂದರೆ ಸಿಡಿಎಂಗಳು!
- ವಿನಾಯಕ ಕಾಮತ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


