ಅವಾರಿ ಸವಾರಿ

ದುಬೈ. ಅದೊಂದು ಮಿನಿ ಸ್ವರ್ಗ. ಭಾರತದವರಿಗೆ ಮಾತ್ರವಲ್ಲ, ಪ್ರಪಂಚದಾದ್ಯಂತ ಎಲ್ಲರಿಗೂ ಥ್ರಿಲ್ ನೀಡಬಲ್ಲ ಏಕೈಕ ಸ್ಥಳ ದುಬೈ. ಈಗ ಟ್ರಿಪ್ಪು, ಟೂರು ಅನ್ನೋ ಮಾತು ಬಂದರೆ ಅದು ಕಡಲಾಚೆಯೇ. ಹಾಗೆ ಹಾರಬೇಕಾದಾಗ ಮೊದಲು ತಲೆಗೆ ಬರುವುದೇ ದುಬೈ. ತುಂಬಾ ತುಂಬಾ ದೊಡ್ಡ ಬಜೆಟ್ಟೂ ಬೇಕಿಲ್ಲ, ಸಿಗುವ ಖುಷಿ, ಸುಖ ಸೌಕರ್ಯಕ್ಕೇನೂ ಕೊರತೆಯಿಲ್ಲ. ಅದೇ ಅಲ್ಲಿನ ಸ್ಪೆಷಾಲಿಟಿ. ನಿಮ್ಮೂರಲ್ಲೇ ಇದ್ದೀರೋ ಎಂಬಂತೆ ಹೋಮ್ಲಿ ಫೀಲ್ ಕೊಡುತ್ತದೆ. ಶಾಪಿಂಗಿಗೂ, ತಿರುಗಾಟಕ್ಕೂ , ಬ್ಯುಸಿನೆಸ್ ಮೀಟಿಂಗುಗಳಿಗೂ, ಪಾರ್ಟಿ ಇತ್ಯಾದಿಗಳಿಗೂ ಒನ್‌ಸ್ಟಾಪ್ ಎಂಟರ್ಟೈನ್‌ಮೆಂಟ್ ಜಾಗ ದುಬೈ.
ಈ ಬಾರಿ ದುಬೈಗೆ ಹೋಗುವ ಪ್ರವಾಸಿಗರಿಗೆ ಬಂಪರ್ ಆಫರ್ ಇದೆ. ದುಬೈಗೆ ಹೊರಡುವವರಿಗೆ 'ಅವಾರಿ ದುಬೈ ಹೋಟೆಲ್' ಬಗ್ಗೆ ಪರಿಚಯಿಸುವ ಅಗತ್ಯ ಇಲ್ಲ. ದುಬೈನ ನಟ್ಟನಡುವೆ ಇರುವ ಅವಾರಿ ದುಬೈ ಎಲ್ಲರಿಗೂ, ಎಲ್ಲ ಜಾಗಕ್ಕೂ ಸಮೀಪ. ಜೊತೆಗೆ ದುಬೈನ ಪ್ರಸಿದ್ಧ 'ಡೀರಾ ಕ್ಲಾಕ್ ಟವರ್' ಬಳಿಯೇ ಇರುವುದು ಇನ್ನೊಂದು ವಿಶೇಷ.
ಏಳಂತಸ್ತಿನ ಬೃಹದಾಕಾರದ ಅವಾರಿ ದುಬೈ ಹೋಟೆಲ್ ಅಲ್ಲಿನ ಕೆಲವೇ ಹೈಕ್ಲಾಸ್ ಪಂಚತಾರಾ ಹೋಟೆಲ್ ಗಳಲ್ಲೊಂದು. 167 ರೂಂಗಳು; ಆಲಿವ್ ಟ್ರೀ ಮತ್ತು ಸಿನ್ನಮೊನ್ ಎಂಬ ಎಲ್ಲರ ರುಚಿಗೆ ಹೊಂದುವ ಎರಡು ಡೈನಿಂಗ್ ರೆಸ್ಟೋರೆಂಟ್‌ಗಳು; ಕಾಫಿಬಾರ್‌ಗಳು; ಮೂರು ಸುಸಜ್ಜಿತ ಮೀಟಿಂಗ್ ಹಾಲ್‌ಗಳು; ಚಿಂಗಾರಿ ಮತ್ತು ವನಾಸ ಎಂಬ ಭಾರತೀಯ ಹಾಗೂ ಅರೇಬಿಯನ್ ಮಾದರಿ ನೈಟ್ ಕ್ಲಬ್‌ಗಳು; ಮಸಾಜ್ ಥೆರಪಿ ಸೆಂಟರ್‌ಗಳು; ರೂಫ್ ಟಾಪ್ ಈಜುಕೊಳಗಳು... ಏನಿದೆ, ಏನಿಲ್ಲ! ಯಾವ ಅರಮನೆಗೂ ಕಮ್ಮಿ ಎನ್ನುವಂತಿಲ್ಲ.
ಈ ಚಳಿಗಾಲದಲ್ಲಿ ನಿಮ್ಮ ದುಬೈ ಪ್ರವಾಸಕ್ಕೆ ಬೆಚ್ಚನೆ ಅನುಭವ ನೀಡಲು ಹೊಸದೊಂದಿಷ್ಟು ಕೊಡುಗೆಗಳೊಂದಿಗೆ ನಿಮ್ಮನ್ನು ಸ್ವಾಗತಿಸಲು ಅವಾರಿ ದುಬೈ ಹೋಟೆಲ್ ಸಜ್ಜಾಗಿದೆ. ಲಾಡ್ಜಿಂಗ್ ಮತ್ತು ಬೋರ್ಡಿಂಗ್ ದರದಲ್ಲಿ ಭಾರೀ ರಿಯಾಯಿತಿಯನ್ನು ಘೋಷಿಸಿರುವ ಹೋಟೆಲ್, 'ಹೆಚ್ಚು ದಿನವಿದ್ದಷ್ಟೂ ಹೆಚ್ಚು ಡಿಸ್ಕೌಂಟ್' ಎಂಬ ಆಕರ್ಷಕ ಆಫರ್‌ಗ್ರಾಹಕರ ಮುಂದಿಟ್ಟಿದೆ. 'ಸೂಪರ್ ಸೇವರ್ ಸೂಟ್' ಎಂಬ ಹೆಸರಿನ ಈ ಆಫರಿನಲ್ಲಿ ಎರಡು ದಿನ ತಂಗಿದಲ್ಲಿ ಬಿಲ್ ಮೇಲೆ ಹತ್ತು ಪರ್ಸೆಂಟ್ ರಿಯಾಯಿತಿ ಸಿಕ್ಕರೆ, ಮೂರು ದಿನ ಇರುವವರಿಗೆ ಇಪ್ಪತ್ತು ಪರ್ಸೆಂಟ್ ಹಾಗೂ ಏಳು ದಿನಗಳ ಬುಕಿಂಗ್‌ಗೆ ಒಟ್ಟು ಅರವತ್ತು ಪರ್ಸೆಂಟ್ ರಿಯಾಯಿತಿ ನೀಡಲು ಮುಂದಾಗಿದೆ. ದಿನಕ್ಕೆ ತೆರಿಗೆ ಹೊರತು ಪಡಿಸಿ ಕೇವಲ ಒಂಬೈನೂರು ಅರೇಬಿಯನ್ ದಿನಾರ್‌ಗಳಿಂದ ಶುರುವಾಗುವ ಈ ಕೊಡುಗೆ ದುಬೈನ ಎಲ್ಲಾ ಹೋಟೆಲ್‌ಗಳ ಆಫರ್‌ಗಿಂತ ಆಕರ್ಷಕ ಅನ್ನೋದ್ರಲ್ಲಿ ಮರುಮಾತಿಲ್ಲ.
ದುಬೈ ಮೆಟ್ರೋಗೂ, ವಿಮಾನ ನಿಲ್ದಾಣಕ್ಕೂ ತುಂಬಾ ಹತ್ತಿರದಲ್ಲಿರುವ ಹೋಟೆಲ್ ಅವಾರಿ ದುಬೈಯ ಇನ್ನೊಂದು ವಿಶೇಷ ಅಂದ್ರೆ, ಅಲ್ ರಿಕ್ಕಾ ಫುಡ್ ಸ್ಟ್ರೀಟ್‌ಗೆ ಬರೀ ಐದೇ ನಿಮಿಷದ ಪ್ರಯಾಣ.
ಈ ಬಾರಿಯ ಚಳಿಗಾಲದ ಪ್ರವಾಸವನ್ನು ದುಬೈಗೆ ಯೋಜಿಸಿದ್ದೇ ಆದರೆ ಅವಾರಿ ದುಬೈಗೆ ನಿಮ್ಮ ಸವಾರಿ ಸಾಗಲಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


