ವಿಜಯಾ ಬ್ಯಾಂಕ್‌ಗೆ ಶೇ.23.82 ಹೆಚ್ಚುವರಿ ಲಾಭ
ಕೇಂದ್ರ ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್ 2012-13ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಶೇ.23.82 ಹೆಚ್ಚುವರಿ ಲಾಭಗಳಿಸಿದೆ.
ಕ.ಪ್ರ. ವಾರ್ತೆ, ಬೆಂಗಳೂರು, ಏ.26
ಕೇಂದ್ರ ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್ 2012-13ನೇ ಸಾಲಿನ ಕೊನೆಯ ತ್ರೈಮಾಸಿಕದಲ್ಲಿ ಶೇ.23.82 ಹೆಚ್ಚುವರಿ ಲಾಭಗಳಿಸಿದೆ. 3ನೇ ತ್ರೈಮಾಸಿಕದಲ್ಲಿ ಬ್ಯಾಂಕ್ 181 ಕೋಟಿ ಲಾಭಗಳಿಸಿತ್ತು. 4ನೇ ತ್ರೈಮಾಸಿಕದಲ್ಲಿ ಇದು 224 ಕೋಟಿಗೆ ಏರಿದೆ. ಇದರೊಂದಿಗೆ ವಾರ್ಷಿಕ ಲಾಭವು 585 ಕೋಟಿಯಾಗಿದೆ. ಒಟ್ಟು ವ್ಯವಹಾರದಲ್ಲಿ ಶೇ.17ರಷ್ಟು ವೃದ್ಧಿಯಾಗಿದೆ ಎಂದು ವಿಜಯಾ ಬ್ಯಾಂಕ್ ಅಧ್ಯಕ್ಷ ಎಚ್.ಎಸ್.ಉಪೇಂದ್ರ ಕಾಮತ್ ತಿಳಿಸಿದ್ದಾರೆ. ಮಾ.31ಕ್ಕೆ ಕೊನೆಯಾದ ಆರ್ಥಿಕ ವರ್ಷಕ್ಕೆ ಬ್ಯಾಂಕ್‌ನ ಒಟ್ಟು ವ್ಯವಹಾರ 1.67 ಲಕ್ಷ ಕೋಟಿಗೆ ಏರಿಕೆಯಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದ ಅಂತ್ಯಕ್ಕೆ ಇದನ್ನು 2.10 ಲಕ್ಷ ಕೋಟಿಗೆ ಕೊಂಡೊಯ್ಯಲಾಗುವುದು. ಈ ಸಂಬಂಧ ಹೆಚ್ಚುವರಿಯಾಗಿ 150 ಶಾಖೆಗಳನ್ನು ತೆರೆಯಲಾಗುವುದು ಎಂದು ಅವರು ನಗರದಲ್ಲಿ ಬ್ಯಾಂಕಿನ ವಾರ್ಷಿಕ ವರದಿಯನ್ನು ಶುಕ್ರವಾರ ಅವರು ಬಿಡುಗಡೆ ಮಾಡಿ ಹೇಳಿದರು.
ಬ್ಯಾಂಕ್‌ನ ಕೃಷಿ ಸಾಲ ನೀಡಿಕೆಯಲ್ಲಿ ಶೇ.26ರಷ್ಟು ಏರಿಕೆಯಾಗಿದೆ. ಶೈಕ್ಷಣಿಕ ಸಾಲದಲ್ಲಿ ನಿರೀಕ್ಷಿತ ಏರಿಕೆಯಾಗದೇ ಶೇ.4ರ ಏರಿಕೆಗೆ ನಿಂತಿದೆ. ಮುಂದಿನ ಆರ್ಥಿಕ ವರ್ಷಗಳಲ್ಲಿ ಈ ಬಗ್ಗೆ ಗಮನ ನೀಡಲಾಗುವುದು. ಬ್ಯಾಂಕ್‌ನ ಠೇವಣಿ ಪ್ರಮಾಣವು ಶೇ.17ರ ಬೆಳವಣಿಗೆಯಲ್ಲಿ 97 ಸಾವಿರ ಕೋಟಿಗೆ ಏರಿದೆ. ಮುಂಗಡ ಹಣದಲ್ಲಿಯೂ ಶೇ.20ರ ಏರಿಕೆಯಲ್ಲಿ 70 ಸಾವಿರ ಕೋಟಿ ದಾಟಿದೆ. ಇದಲ್ಲದೇ ಶಾಖೆ ಹಾಗೂ ನೌಕರರ ಮಟ್ಟದ ಲಾಭ ಗಳಿಕೆಯಲ್ಲೂ ಸಣ್ಣ ಪ್ರಮಾಣದ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರದಿಂದ ವಿಜಯಾ ಬ್ಯಾಂಕ್ ಹೆಚ್ಚುವರಿಯಾಗಿ 9200 ಕೋಟಿ ಬಂಡವಾಳ ನಿರೀಕ್ಷಿಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಇದರ ಅರ್ಧ ಅನುದಾನದ ನಿರೀಕ್ಷೆಯನ್ನಿರಿಸಿಕೊಳ್ಳಲಾಗಿದೆ. ಇನ್ನು ಬ್ಯಾಂಕ್‌ನ ನೂತನ ಬಡ್ಡಿದರ ಪಟ್ಟಿಯನ್ನು ರಿಸರ್ವ್ ಬ್ಯಾಂಕ್‌ನ ಮೇ.3ರ ವಾರ್ಷಿಕ ಸಭೆಯ ಬಳಿಕ ನಿರ್ಧರಿಸಲಾಗುತ್ತದೆ ಎಂದು ಕಾಮತ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

