ಬಿಎಚ್‌ಇಎಲ್‌ನಿಂದ 3360 ಕೋಟಿ ವಹಿವಾಟು
ಭಾರತ್ ಹೆವಿ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಎಚ್‌ಇಎಲ್) 2012-13ನೇ ಸಾಲಿನ ಹಣಕಾಸು ವರ್ಷದಲ್ಲಿ ರು. 3360 ಕೋಟಿ ವಹಿವಾಟು ನಡೆಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ಏ.10-
ಭಾರತ್ ಹೆವಿ ಎಲೆಕ್ಟ್ರಾನಿಕ್ ಲಿಮಿಟೆಡ್ (ಬಿಎಚ್‌ಇಎಲ್) 2012-13ನೇ ಸಾಲಿನ ಹಣಕಾಸು ವರ್ಷದಲ್ಲಿ ರು. 3360 ಕೋಟಿ ವಹಿವಾಟು ನಡೆಸಿದೆ.
ಖಾಸಗಿ ಹೊಟೇಲ್‌ನಲ್ಲಿ ನಡೆದ ಬಿಎಚ್‌ಇಎಲ್ ವಾರ್ಷಿಕ ಸಭೆಯಲ್ಲಿ ಬಿಎಚ್‌ಇಎಲ್ ವಿದ್ಯುನ್ಮಾನ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ಸಿ. ರಾಮಮೂರ್ತಿ ಈ ಬಗ್ಗೆ ಮಾಹಿತಿ ನೀಡಿದರು.
2012- 13ನೇ ಸಾಲಿನಲ್ಲಿ ಬಿಎಚ್‌ಇಎಲ್ ಒಟ್ಟು ರು. 3360 ಕೋಟಿ ವಹಿವಾಟು ನಡೆಸಿದ್ದು ತೆರಿಗೆ ಪೂರ್ವ ರು. 522 ಕೋಟಿ ಲಾಭ ಗಳಿಸಿದೆ. ಬೇಡಿಕೆಗಳ ಸಂಗ್ರಹ ರು. 3390 ಕೋಟಿಯಾಗಿದೆ. ಇನ್ನು ಬಾಕಿ ಇರುವ
ಬೇಡಿಕೆಗಳ ಸಂಗ್ರಹ ಏಪ್ರಿಲ್ 2013ರ ವೆರೆಗೆ ರು. 7975 ಕೋಟಿಯಷ್ಟಿದೆ. ಒಂದು ವರ್ಷದಲ್ಲಿ ಒಟ್ಟು ರಫ್ತು ವಹಿವಾಟು ರು. 1062 ಕೋಟಿಯಾಗಿದೆ ಎಂದು ಹೇಳಿದರು.
ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.16ರಷ್ಟು ವಹಿವಾಟು ಕುಂಠಿತಗೊಂಡಿದೆ ಎಂದು ಹೇಳಿದ ಅವರು, ಮೂಲಸೌಕರ್ಯಗಳ ಕೊರತೆ ಹಾಗೂ ಖಾಸಗಿ ಕಂಪನಿಗಳಿಂದ ವಿದ್ಯುತ್ ಸಂಬಂಧಿ ಉತ್ಪನ್ನಗಳ ಬೇಡಿಕೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ವಹಿವಾಟು ಕಡಿಮೆಯಾಗಿದೆ ಎಂದು ವಿವರಿಸಿದರು.
ಅಲ್ಲದೆ, ವಿದ್ಯುತ್ ವಲಯದಲ್ಲಿ ಆರ್ಥಿಕ ಕುಸಿತವು ಬಿಎಚ್‌ಎಎಲ್ ವಹಿವಾಟಿನ ಪರಿಣಾಮ ಬೀರಿದೆ. ಇಂತಹ ಸಂಕಷ್ಟ ಸ್ಥಿತಿಯ ನಡುವೆಯೂ ಬಿಎಚ್‌ಇಎಲ್ ಉತ್ತಮ ಸಾಧನೆ ಮಾಡಿದೆ ಎಂದು ರಾಮಮೂರ್ತಿ ಹೇಳಿದರು.
ವಿದ್ಯುನ್ಮಾನ ವಿಭಾಗದಿಂದ ವಿವಿಧ ಯೋಜನೆಗಳಿಗೆ ಸುಮಾರು 5,500 ಕಂಟ್ರೋಲ್ ಪ್ಯಾನಲ್‌ಗಳು ಮತ್ತು 1.20 ಲಕ್ಷಕ್ಕೂ ಹೆಚ್ಚು ವಿದ್ಯುನ್ಮಾನ ಮಾಡ್ಯೂಲ್‌ಗಳನ್ನು ತಯಾರಿಸಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಹೆಚ್ಚುವರಿ ಸಂಪನ್ಮೂಲ ಮತ್ತು ಅತ್ಯಾಧುನಿಕ ಸೌಲಭ್ಯಗಳ ಸ್ಥಾಪನೆಗಾಗಿ ರು. 137 ಕೋಟಿ ಹೂಡಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಬಿಎಚ್‌ಇಎಲ್ ಇಂಡಸ್ಟ್ರೀಯಲ್ ಸಿಸ್ಟಮ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಅತುಲ್ ಸೋಬ್ತಿ, ಐಎಸ್‌ಜಿ ವಿಭಾಗವೂ ರು. 1161 ಕೋಟಿ ವಹಿವಾಟು ನಡೆಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.16ರಷ್ಟು ಪ್ರಗತಿ ಕಂಡಿದೆ ಎಂದು ತಿಳಿಸಿದರು.
ದೇಶದ ವಿವಿದೆಡೆ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ಮತ್ತು ಬೂದಿ ನಿರ್ವಹಣಾ ಘಟಕಗಳ ನಿರ್ಮಾಣದ ಬೇಡಿಕೆಯನ್ನು ಪಡೆದುಕೊಳ್ಳಲಾಗಿದೆ. ಕೈಗಾರಿಕೇತರ ವಲಯದಲ್ಲಿ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ಗಾಗಿ ಸುಲಭವಾಗಿ ಮತ್ತು ತ್ವರಿತವಾಗಿ ಲಡ್ಡುಗಳನ್ನು ಗೋದಾಮಿನಿಂದ ಮಾರಾಟ ಮಳಿಗೆಯವರೆಗೆ ಸಾಗಿಸುವ ಸೌಲಭ್ಯಕ್ಕಾಗಿ ಪರಿಸರ ಸ್ನೇಹಿ ಪೆಲೆಟ್ ಟ್ರಕ್ ಸಾಗಾಣಿಕಾ ವಿಧಾನದ ಬೇಡಿಕೆಯನ್ನು ಬಿಎಚ್‌ಇಎಲ್ ಪಡೆದುಕೊಂಡಿದೆ ಎಂದು ಹೇಳಿದರು.
ಬಿಎಚ್‌ಇಎಲ್ ಪಿಂಗಾಣಿ ವ್ಯವಹಾರ ಘಟಕದ ಕಾರ್ಯಪಾಲಕ ನಿರ್ದೇಶಕ ಎ.ಎಸ್.ನಾಗರಾಜ ಮಾತನಾಡಿ, ಈ ಸಾಲಿನಲ್ಲಿ ಸಿಬಿಯು ರು. 491 ಕೋಟಿ ವ್ಯವಹಾರ ನಡೆಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 13ರಷ್ಟು ಅಂದರೆ ರು. 57 ಕೋಟಿ ಹೆಚ್ಚು ವಹಿವಾಟು ನಡೆಸಿದೆ ಎಂದು ತಿಳಿಸಿದರು. ಸಭೆಯಲ್ಲಿ ಬಿಎಚ್‌ಇಎಲ್‌ನ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

