ಸ್ಪೈಸ್‌ನಿಂದ ಸ್ಟೇಲ್ಲರ್ ಪಿನಾಕಲ್ ಎಂಐ- 530 ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ
ಬೆಂಗಳೂರು: ಸ್ಪೈಸ್ ಕಂಪನಿ ಸ್ಟೇಲ್ಲರ್ ಪಿನಾಕಲ್ ಎಂಐ- 530 ಎಂಬ ನೂತನ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ನೂತನ ಸ್ಮಾರ್ಟ್‌ಫೋನ್ 5.3 ಎಚ್‌ಡಿ ಡಿಸ್‌ಪ್ಲೇ ಸ್ಕೀನ್, ಡ್ಯುಯೆಲ್ ಸಿಮ್ ಹೊಂದಿದ್ದು, 4.0 ಆ್ಯಡ್ರಾಯ್ಡ್ ಸಾಫ್ಟ್‌ವೇರ್, ಡ್ಯುಯೆಲ್ ಕೋರ್ ಫ್ರೊಸೆಸರ್ ಹೊಂದಿದೆ. 8 ಮೆಗಾ ಫಿಕ್ಸಲ್ ಕ್ಯಾಮೆರಾ ಸಾಮರ್ಥ್ಯ, 2250 ಪಾಲಿಮರ್ ಬ್ಯಾಟರಿ, 16 ಜಿಬಿ ರ್ಯಾಮ್, ಪೋನೋರಾಮ ಹೊಂದಿದೆ. ಡ್ಯುಯೆಲ್ ಮೈಕ್ ನಾಯ್ಸ್ ತಂತ್ರಜ್ಞಾನ ಅಳವಡಿಸಿದ್ದು, ಫೋನ್‌ನಲ್ಲಿ ಮಾತನಾಡುವ ಸ್ಪಷ್ಟವಾಗಿ ಧ್ವನಿ ಗ್ರಹಿಸಲು ಅನುಕೂಲ ಮಾಡಿಕೊಡಲಿದೆ. ಈ ಮೊಬೈಲ್ ಬಿಡುಗಡೆ ಮಾಡಿದ ಸ್ಪೈಸ್ ಕಂಪನಿ ಕಾರ್ಯಕಾರಿ ಮುಖ್ಯಸ್ಥ ಟಿ.ಎಂ. ರಾಮಕೃಷ್ಣನ್ ಮಾತನಾಡಿ, ಅತ್ಯಾಧುನಿಕ ಸೌಕರ್ಯ ಹೊಂದಿದರುವ ಈ ಮೊಬೈಲ್ ಯುವ ಪೀಳಿಗೆಗೆ ಇಷ್ಟವಾಗಲಿದೆ. ಹೈ ಕನೆಕ್ಟ್ ಇಂಟರ್‌ನೆಟ್ ಸೌಲಭ್ಯ ಸೇರಿದಂತೆ ಸಾಕಷ್ಟು ಅಪ್ಲಿಕೇಷನ್‌ಗಳನ್ನು ಹೊಂದಿದೆ ಎಂದರು. ಮಾರುಕಟ್ಟೆಯಲ್ಲಿ ಇದರ ಬೆಲೆ 13,999.
ಏಸರ್‌ನಿಂದ ಆಸ್ಪೈರ್ ಝಡ್ ಸೀರಿಸ್ ಕಂಪ್ಯೂಟರ್ ಬಿಡುಗಡೆ
ಏಸರ್ ಇಂಡಿಯಾ ನೂತನವಾಗಿ ಆಸ್ಪೈರ್ ಝಡ್ ಸೀರಿಸ್ ಆಲ್ ಇನ್ ವನ್ ಎಂಬ ಡೆಸ್ಕ್‌ಟಾಪ್ ಕಂಪ್ಯೂಟರ್ ಬಿಡುಗಡೆ ಮಾಡಿದೆ. ಆಸ್ಪೈರ್ ಝಡ್ ಸೀರಿಸ್ ಗ್ರಾಹಕರಿಗೆ ಸರಿಸಾಟಿಯಲ್ಲದ ಮನರಂಜನೆಯ ಅನುಭೂತಿ ನೀಡಲಿದೆ. ಮೂರನೇ ಪಿಳಿಗೆಯ ಇಂಟೆಲ್ ಪೆಂಟಿಯಮ್ ಪ್ರೊಸೆಸರ್‌ಗಳ ಬೆಂಬಲ ಹೊಂದಿರುವ ಮತ್ತು ಸುಧಾರಿತ ಗ್ರಾಫಿಕ್ ಲಕ್ಷಣದ ಜತೆಗೆ ವಿಂಡೋಸ್ 8 ಆಪರೇಟಿಂಗ್ ಸಿಸ್ಟಂನಿಂದ ಕಾರ್ಯನಿರ್ವಹಿಸುವಂತೆ ಇದನ್ನು ರೂಪುಗೊಳಿಸಲಾಗಿದೆ. ಕಂಪ್ಯೂಟರ್ ಬಿಡುಗಡೆ ಮಾಡಿದ ಏಸರ್ ಇಂಡಿಯಾ ಮುಖ್ಯ ಮಾರುಕಟ್ಟೆ ಅಧಿಕಾರಿ ಎಸ್. ರಾಜೇಂದ್ರನ್ ಮಾತನಾಡಿ, ಹೊಸ ಆಲ್-ಇನ್-ಒನ್ ಡೆಸ್ಕ್‌ಟಾಪ್ ಒಂದು ಶಕ್ತಿಶಾಲಿ, ಸ್ಥಳ ಉಳಿತಾಯ ಮಾಡಬಲ್ಲ ಸಾಧನವಾಗಿದೆ ಎಂದರು. 21.4 ಎಲ್‌ಇಡಿ ಎಚ್‌ಡಿ ವೈಲ್ಡ್ ಸ್ಕ್ರೀನ್ ಜತೆಗೆ 1920/1080 ರೆಸಲ್ಯೂಷನ್ ಹೊಂದಿದೆ. ಹ್ಯಾಂಡ್- ಗೆಸ್ಚರ್ ರೆಕಗ್ನಿಷನ್, ಯುಎಸ್‌ಬಿ 3.0, ವೈ-ಫೈ ಕನೆಕ್ಟಿವಿಟಿ, ಬ್ಲೂಟೂತ್ ಹೊಂದಿರುವ ಇದರ ಮಾರುಕಟ್ಟೆ ಬೆಲೆ 29,990.
ಜಯನಗರದಲ್ಲಿ ಚಾನಲ್-9 ಬ್ರಾಂಡ್ ನೂತನ ಮಳಿಗೆ ಆರಂಭ
ಜಯನಗರ 7ನೇ ಬ್ಲಾಕ್‌ನಲ್ಲಿ ಚಾನಲ್-9 ಬ್ರಾಂಡ್ ನೂತನ ಮಳಿಗೆ ಆರಂಭಿಸಿದೆ. ಒಂದೇ ಮಳಿಗೆಯಲ್ಲಿ ವಿವಿಧ ಕಂಪನಿಗಳ ಮೊಬೈಲ್‌ಗಳು ದೊರೆಯಲಿವೆ. ಮಳಿಗೆ ಉದ್ಘಾಟಿಸಿದ ಸ್ಯಾಮ್ಸಂಗ್ ಮೊಬೈಲ್ ವ್ಯವಸ್ಥಾಪಕರಾದ ಚೇತನ್ ಮಾತನಾಡಿ, ಅಧ್ಯಯನವೊಂದರ ಪ್ರಕಾರ ಸ್ಮಾರ್ಟ್‌ಫೋನ್ ವಿಭಾಗದಲ್ಲಾದ ಕ್ರಾಂತಿಕಾರಿ ಬೆಳವಣಿಗೆಯಿಂದಾಗಿ ಭಾರತದಲ್ಲಿ ಮೊಬೈಲ್ ಹ್ಯಾಂಡ್ ಸೆಟ್ ವ್ಯಾಪಾರ 2012ರಲ್ಲಿ 221.6 ಯುನಿಟ್‌ಗೆ ಏರಿಕೆಯಾಗಿದೆ ಎಂದರು. ಚಾನಲ್-9 ಬ್ರಾಂಡ್ ಮಾಲೀಕ ಸಂತೋಷ್ ಮಾತನಾಡಿ, ನಮ್ಮ ಮಳಿಗೆಯಲ್ಲಿ ವಿವಿಧ ಶ್ರೇಣಿಯ ಬ್ರಾಂಡ್‌ಗಳು ಮತ್ತು ಮೊಬೈಲ್ ಸಾಧನಗಳ ಮೂಲಕ ಉತ್ಪನ್ನಗಳ ಸಂಪೂರ್ಣ ಅನುಭವ ನೀಡುವ ಜತೆಗೆ ಎಲ್ಲಾ ಪಿಳಿಗೆ ಹಾಗೂ ಎಲ್ಲರ ಅಗತ್ಯಕ್ಕೆ ತಕ್ಕದಾದ ಮೊಬೈಲ್‌ಗಳು ದೊರೆಯಲಿವೆ ಎಂದರು.
ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ ಪಿರಮಲ್ ಫೌಂಡೇಷನ್ ಒಪ್ಪಂದ
ಪಿರಮಲ್ ಫೌಂಡೇಷನ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಸಾರ್ವಜನಿಕರಿಗೆ ಆರೋಗ್ಯ ಮಾಹಿತಿ ಸೇವೆ ಒದಗಿಸಲು 104 ಸಹಾಯವಾಣಿ ಪ್ರಾರಂಭಿಸಲು ಒಪ್ಪಂದಕ್ಕೆ ಬರಲಾಗಿದೆ. ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ ಆಯುಕ್ತ ವಿ.ಬಿ.ಪಾಟೀಲ್ ಹಾಗೂ ಎಚ್‌ಆರ್‌ಎಂಆರ್‌ಐ ಕಾರ್ಯಕಾರಿ ನಿರ್ದೇಶಕ ಡಾ.ಬಾಲಾಜಿ ಅವರು ಪರಸ್ಪರ ಒಪ್ಪಂದಕ್ಕೆ ಸಹಿ ಹಾಕಿದರು. ಸಹಾಯವಾಣಿಗೆ 'ಆರೋಗ್ಯವಾಣಿ' ಎಂದು ನಾಮಕರಣ ಮಾಡಿದ್ದು, ವೈದ್ಯಕೀಯ ಮಾಹಿತಿ ಪಡೆಯಲು ಅನುಕೂಲವಾಗಲಿದೆ. ಸಾರ್ವಜನಿಕರು 104 ಸಂಖ್ಯೆಗೆ ಉಚಿತವಾಗಿ ಕರೆ ಮಾಡಿ ಆರೋಗ್ಯದ ಕುರಿತಂತೆ ಪ್ರಾಥಮಿಕ ಮಾಹಿತಿ ಪಡೆಯಬಹುದು. ಸರ್ಕಾರ ಸಹಾಯವಾಣಿ ನಿರ್ವಾಹಣೆಗೆಗಾಗಿ ಎಚ್‌ಎಂಆರ್‌ಐ ಏಜೆನ್ಸಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ 100 ಆಸನಗಳ ಐಟಿ ಪಾರ್ಕ್ ಸ್ಥಾಪಿಸಲು ಮುಂದಾಗಿದೆ. ಮಹಾರಾಷ್ಟ್ರ, ರಾಜಸ್ಥಾನ, ಆಸ್ಸಾಂನಲ್ಲಿ ಈಗಾಗಲೇ ಈ ಕಾರ್ಯಕ್ರಮ ಚಾಲನೆಯಲ್ಲಿದ್ದು, ಪ್ರತಿ ದಿನ ಸುಮಾರು 60 ಲಕ್ಷಕ್ಕೂ ಜನರಿಂದ ಕರೆ ಸ್ವೀಕರಿಸಲಾಗುತ್ತಿದೆ ಎಂದು ಪಿರಮಲ್ ಫೌಂಡೇಷನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಟಾಟಾ ಟೆಲಿಸರ್ವಿಸ್, ಟಾಟಾ ಡೊಕೊಮೊ ಸ್ಪೀಡ್ ಬೂಸ್ಟರ್ ಪ್ಯಾಕ್ ಆರಂಭ
ಟಾಟಾ ಟೆಲಿಸರ್ವಿಸ್, ಟಾಟಾ ಡೊಕೊಮೊ ಪೋಟಾನ್ 3ಜಿ ಮತ್ತು ಪೋಟಾನ್ ಮ್ಯಾಕ್ಸ್ ಸ್ಪೀಡ್ ಬೂಸ್ಟರ್ ಪ್ಯಾಕ್ ಆರಂಭಿಸಿದೆ. ಇದರ ಬೆಲೆ ರು. 125 ಇದ್ದು, ಅತಿ ವೇಗದಲ್ಲಿ ಇಂಟರ್‌ನೆಟ್ ಸಂಪರ್ಕ ಒದಗಿಸುವ ಸೌಲಭ್ಯ ಹೊಂದಿದೆ. 125 ಕ್ಕೆ 500 ಎಂ.ಬಿ. ಮತ್ತು ರು. 200ಕ್ಕೆ 1ಜಿಬಿ ಹಾಗೂ 350ಕ್ಕೆ 2ಜಿಬಿವರೆಗೂ ಇಂಟರ್‌ನೆಟ್ ಉಪಯೋಗಿಸುಬಹುದಾಗಿದೆ. ಟಾಟಾ ಡೊಕೊಮೊ ಅಂತರ್ಜಾಲ ಸಂಪರ್ಕದ ಖುಷಿಯ ಅನುಭವ ಹೆಚ್ಚಿಸುವ ಸಲುವಾಗಿಯೇ ಕಡಿಮೆ ದರದಲ್ಲಿ ಹೆಚ್ಚಿನ ಹಾಗೂ ವೇಗದ ಸಂಪರ್ಕ ಸೌಲಭ್ಯ ಪ್ಯಾಕೇಜ್‌ಗಳನ್ನು ರೂಪಿಸಿದೆ. ಈ ಕುರಿತಂತೆ ಟಾಟಾ ಡೊಕೊಮೊದ ದಕ್ಷಿಣ ವಲಯದ ಮುಖ್ಯಸ್ಥ ಯತೀಶ್ ಮೆಹ್ರೊತ್ರಾ ಮಾತನಾಡಿ, ಸ್ಪೀಡ್ ಬೂಸ್ಟರ್ ಸೇವೆ ಎಂಬುವುದು ಗ್ರಾಹಕ ಸ್ನೇಹಿ ಕೊಡುಗೆಯಾಗಿದೆ. ಹೊಸ ಪ್ಯಾಕೇಜ್ ಸೌಲಭ್ಯ ಪಡೆದುಕೊಳ್ಳಲು ಟಾಟಾ ಡೊಕೊಮಾ ಪೋಟಾನ್ ಶುಲ್ಕ ರಹಿತ ದೂರವಾಣಿ 1800-266-121ಗೆ ಕರೆ ಮಾಡಬಹುದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

