ಕರ್ಣಾಟಕ ಬ್ಯಾಂಕ್: ಈ ಸಾಲಿನಲ್ಲಿ 78 ಸಾವಿರ ಕೋಟಿ ವಹಿವಾಟು ಗುರಿ
ಖಾಸಗಿ ರಂಗದ ಕರ್ಣಾಟಕ ಬ್ಯಾಂಕ್ 2013-14ನೇ ಆರ್ಥಿಕ ವರ್ಷದಲ್ಲಿ ರು. 78 ಸಾವಿರ ಕೋಟಿ ವಹಿವಾಟು ಗುರಿ...
ಕ.ಪ್ರ. ವಾರ್ತೆ, ಮಂಗಳೂರು, ಏ.2-
ಖಾಸಗಿ ರಂಗದ ಕರ್ಣಾಟಕ ಬ್ಯಾಂಕ್ 2013-14ನೇ ಆರ್ಥಿಕ ವರ್ಷದಲ್ಲಿ ರು. 78 ಸಾವಿರ ಕೋಟಿ ವಹಿವಾಟು ಗುರಿ ನಿಗದಿಪಡಿಸಿದೆ. ರು. 45,500 ಕೋಟಿ ಠೇವಣಿ ಸಂಗ್ರಹ ಮತ್ತು ರು. 32,500 ಕೋಟಿ ಸಾಲ ನೀಡಲು ಉದ್ದೇಶಿಸಿದ್ದು, ಶೇ.27 ಅಭಿವೃದ್ಧಿ ಹೆಚ್ಚಳವನ್ನು ದಾಖಲಿಸಲಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಪಿ.ಜಯರಾಮ ಭಟ್ ಹೇಳಿದ್ದಾರೆ.
ಬ್ಯಾಂಕಿನ ವಹಿವಾಟು ಕುರಿತು ದಿಕ್ಸೂಚಿ ಭಾಷಣ ಮಾಡಿದ ಅವರು, ಬ್ಯಾಂಕ್ ಕಳೆದ ಸಾಲಿನಲ್ಲಿ ಸರ್ವಾಂಗೀಣ ಪ್ರಗತಿ ಸಾಧಿಸಿದ್ದು, ರು. 61,300 ಕೋಟಿ ವಹಿವಾಟು ನಡೆಸಿದೆ. ರು. 36,050 ಕೋಟಿ ಠೇವಣಿ ಸಂಗ್ರಹಿಸಿದ್ದು, ರು. 25,250 ಕೋಟಿ ಮುಂಗಡ ನೀಡಿ ಶೇ.21.62 ಪ್ರಗತಿ ದಾಖಲಿಸಿದೆ.
ಬ್ಯಾಂಕಿಂಗ್ ಕ್ಷೇತ್ರ ಹಣಕಾಸು ಸವಾಲುಗಳನ್ನು ನಿಭಾಯಿಸುತ್ತಿದೆ. ಆರ್ಥಿಕತೆಯಲ್ಲಿ ಚೇತರಿಸಿರುವುದರಿಂದ ಠೇವಣಾತಿ, ಮುಂಗಡ ಹಾಗೂ ವಸೂಲಾತಿ, ಎನ್‌ಪಿಎನಲ್ಲಿ ಸಾಧನೆ ದಾಖಲಿಸಲು ಸಾಧ್ಯವಾಗಿದೆ. ಬ್ಯಾಂಕಿನ ಸೇವಾ ಕೇಂದ್ರಗಳನ್ನು 1,200ಕ್ಕೆ ಹೆಚ್ಚಳ ಮಾಡಿದ್ದು, 600 ಶಾಖೆ, 600 ಎಟಿಎಂ ಸ್ಥಾಪಿಸಲಾಗಿದೆ ಎಂದರು.
ಜೈರಾಮ್ ಹಂದೆ, ಉಪೇಂದ್ರ ಪ್ರಭು, ಎಂ.ವಿ.ಸಿ.ಎಸ್.ಕಾಮತ್, ಮಹಾಬಲೇಶ್ವರ ಭಟ್, ಡಾ.ಮೀರಾ ಅರ್ಹಾನಾ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

