ವಿದೇಶ

ಬೊಲಿವಿಯಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ; ಕನಿಷ್ಠ 10 ಜನರ ದುರ್ಮರಣ, ನೂರಾರು ಮನೆಗಳಿಗೆ ಹಾನಿ

ಬೊಲಿವಿಯಾದ ಮಿಲಿಟರಿ ನೆಲೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದು ಮತ್ತು 62ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ಬ್ಯಾರಕ್ಸ್‌ನಲ್ಲಿ ಮಧ್ಯಾಹ್ನ ಸುಮಾರು 2:30 ರ ವೇಳೆಗೆ ಈ ದುರಂತ ಸಂಭವಿಸಿದೆ.

ಬೊಲಿವಿಯಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ; ಕನಿಷ್ಠ 10 ಜನರ ದುರ್ಮರಣ, ನೂರಾರು ಮನೆಗಳಿಗೆ ಹಾನಿ
ಬೊಲಿವಿಯಾ ಸೇನಾ ನೆಲೆಯಲ್ಲಿ ಭೀಕರ ಸ್ಫೋಟ — Online Desk
Published On :

ವಿಯಾಚಾ (ಬೊಲಿವಿಯಾ): ದಕ್ಷಿಣ ಅಮೆರಿಕದಲ್ಲಿರುವ ಬೊಲಿವಿಯಾದ ಮಿಲಿಟರಿ ನೆಲೆಯೊಂದರಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 10 ಜನರು ಸಾವನ್ನಪ್ಪಿದ್ದು, 62ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಶ್ಚಿಮ ಬೊಲಿವಿಯಾದ ವಿಯಾಚಾ ನಗರದಲ್ಲಿರುವ ಸೇನಾ ಬ್ಯಾರಕ್ಸ್‌ನಲ್ಲಿ ಮಧ್ಯಾಹ್ನ ಸುಮಾರು 2:30 ರ ವೇಳೆಗೆ ಈ ದುರಂತ ಸಂಭವಿಸಿದೆ. ಘಟನೆಗೆ ಸಂಬಂಧಿಸಿದ ವಿವರ ಇಲ್ಲಿದೆ:

ಏನಿದು ಘಟನೆ?

ಬೊಲಿವಿಯಾದ ರಾಜಧಾನಿ ಲಾ ಪಾಜ್‌ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ವಿಯಾಚಾ ನಗರದ ರಕ್ಷಣಾ ಸಚಿವಾಲಯಕ್ಕೆ ಸೇರಿದ ಗೋದಾಮಿನಲ್ಲಿ ಸಂಗ್ರಹಿಸಿಡಲಾಗಿದ್ದ ಪಟಾಕಿ ಮತ್ತು ಪೈರೋಟೆಕ್ನಿಕ್ ವಸ್ತುಗಳಿಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದ್ದೇ ಈ ಭೀಕರ ಸ್ಫೋಟಕ್ಕೆ ಪ್ರಾಥಮಿಕ ಕಾರಣ ಎಂದು ತಿಳಿದುಬಂದಿದೆ. ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ ಇಡೀ ಪ್ರದೇಶವೇ ಕಂಪಿಸಿದ ಅನುಭವವಾಗಿದೆ. ಇನ್ನು, ಈ ಅಗ್ನಿ ದುರಂತಕ್ಕೆ ನಿಖರ ಕಾರಣವೇನು ಮತ್ತು ಇಷ್ಟು ದೊಡ್ಡ ಪ್ರಮಾಣದ ಪಟಾಕಿಗಳನ್ನು ಸುರಕ್ಷತಾ ನಿಯಮಗಳನ್ನು ಮೀರಿ ಹೇಗೆ ಸಂಗ್ರಹಿಸಿಡಲಾಗಿತ್ತು ಎಂಬುದರ ಕುರಿತು ಮಿಲಿಟರಿ ಮತ್ತು ಪೊಲೀಸರು ಜಂಟಿ ತನಿಖೆ ಆರಂಭಿಸಿದ್ದಾರೆ.

ಸ್ಥಳೀಯ ಆರೋಗ್ಯ ನಿರ್ದೇಶಕಿ ರೀಟಾ ನೆಬ್ರಸ್ಕಾ ಪ್ರಕಾರ, ಘಟನೆಯಲ್ಲಿ 10 ರಿಂದ 15 ಜನರು ಮೃತಪಟ್ಟಿರುವ ಶಂಕೆ ಇದ್ದು, ಗಾಯಗೊಂಡ 62 ಜನರಲ್ಲಿ 52 ಮಂದಿ ಸಾಮಾನ್ಯ ನಾಗರಿಕರಾಗಿದ್ದು, ಉಳಿದವರು ಸೇನಾ ಸಿಬ್ಬಂದಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡವರನ್ನು ಲಾ ಪಾಜ್ ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಏತನ್ಮಧ್ಯೆ, ಘಟನಾ ಸ್ಥಳದಲ್ಲಿ ಇನ್ನೂ ಹೆಚ್ಚಿನ ತಾಪಮಾನ ಇರುವುದರಿಂದ ಮತ್ತೊಂದು ಸ್ಫೋಟ ಸಂಭವಿಸುವ ಅಪಾಯವಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ಎಚ್ಚರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ನಿವಾಸಿಗಳನ್ನು ಕನಿಷ್ಠ 150 ಮೀಟರ್ ದೂರವಿರುವಂತೆ ಸೂಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.