ವಿದೇಶ

'ಇನ್‌ಸ್ಟಾಗ್ರಾಂ ಇರುವುದು ಹುಡುಗಿಯರಿಗಾಗಿ': ಎಲಾನ್ ಮಸ್ಕ್ ಹೇಳಿಕೆ ಚರ್ಚೆಗೆ ಗ್ರಾಸ

ಈ ವರ್ಷದ ಮೇ ತಿಂಗಳಲ್ಲಿ, ಸಾಮಾಜಿಕ ಜಾಲತಾಣದ ಅಭ್ಯಾಸಗಳು ಮತ್ತು ಆನ್‌ಲೈನ್ ಪ್ರವೃತ್ತಿಗಳ ಕುರಿತಾದ ವೈರಲ್ ಚರ್ಚೆಯೊಂದಕ್ಕೆ ಪ್ರತಿಕ್ರಿಯಿಸುವಾಗ ಮಸ್ಕ್ ಇನ್‌ಸ್ಟಾಗ್ರಾಂ ಕುರಿತು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು.

'ಇನ್‌ಸ್ಟಾಗ್ರಾಂ ಇರುವುದು ಹುಡುಗಿಯರಿಗಾಗಿ': ಎಲಾನ್ ಮಸ್ಕ್ ಹೇಳಿಕೆ ಚರ್ಚೆಗೆ ಗ್ರಾಸ
ಎಲಾನ್ ಮಸ್ಕ್
Published On :

ಇನ್‌ಸ್ಟಾಗ್ರಾಂ ಒಂದು ನಿರ್ದಿಷ್ಟ ಲಿಂಗದವರಿಗೆ ಮೀಸಲಾದ ಸಾಮಾಜಿಕ ಜಾಲತಾಣ ಎಂಬ ಹೇಳಿಕೆಯ ಮೂಲಕ ಎಲಾನ್ ಮಸ್ಕ್ ಆನ್‌ಲೈನ್‌ನಲ್ಲಿ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. 'ಗೈಗರ್ ಕ್ಯಾಪಿಟಲ್' (Geiger Capital) ಎಂಬ ಬಳಕೆದಾರರೊಬ್ಬರು ತಾವು ಇನ್‌ಸ್ಟಾಗ್ರಾಂ ವೇದಿಕೆಯನ್ನು ಡಿಲೀಟ್ ಮಾಡುತ್ತಿರುವುದಾಗಿ ಹಂಚಿಕೊಂಡಿದ್ದ 'ಎಕ್ಸ್' ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಮಸ್ಕ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಅಧಿಕೃತವಾಗಿ ಇನ್‌ಸ್ಟಾಗ್ರಾಂ ಅನ್ನು ಅಳಿಸಿದ್ದೇನೆ. ಇದು ಮೂಲಭೂತವಾಗಿ ಮಹಿಳೆಯರಿಗಾಗಿಯೇ ಇರುವ ಆ್ಯಪ್. ಇದರಿಂದ ಯಾವುದೇ ಪ್ರಯೋಜನವಿಲ್ಲ' ಎಂದು ಗೈಗರ್ ಕ್ಯಾಪಿಟಲ್ ಬರೆದಿದ್ದಾರೆ.

ಆ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಮಸ್ಕ್, 'ಇನ್‌ಸ್ಟಾಗ್ರಾಂ ಇರುವುದು ಹುಡುಗಿಯರಿಗಾಗಿ' ಎಂದು ಕಮೆಂಟ್ ಮಾಡಿದ್ದಾರೆ. ಅವರ ಈ ಪ್ರತಿಕ್ರಿಯೆಯು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ನಾಂದಿ ಹಾಡಿದೆ.

ಈ ವರ್ಷದ ಮೇ ತಿಂಗಳಲ್ಲಿ, ಸಾಮಾಜಿಕ ಜಾಲತಾಣದ ಅಭ್ಯಾಸಗಳು ಮತ್ತು ಆನ್‌ಲೈನ್ ಪ್ರವೃತ್ತಿಗಳ ಕುರಿತಾದ ವೈರಲ್ ಚರ್ಚೆಯೊಂದಕ್ಕೆ ಪ್ರತಿಕ್ರಿಯಿಸುವಾಗ ಮಸ್ಕ್ ಇನ್‌ಸ್ಟಾಗ್ರಾಂ ಕುರಿತು ಇದೇ ರೀತಿಯ ಹೇಳಿಕೆಯನ್ನು ನೀಡಿದ್ದರು.

ಜನರ ಆನ್‌ಲೈನ್ ಅಭ್ಯಾಸಗಳು ಅವರ ಜೀವನದ ವಿವಿಧ ಹಂತಗಳನ್ನು ಹೇಗೆ ಪ್ರತಿಬಿಂಬಿಸುತ್ತವೆ ಎಂಬುದರ ಕುರಿತಾದ ಚರ್ಚೆಯು ಆ ಪೋಸ್ಟ್‌ನಲ್ಲಿತ್ತು. ಆ ಚರ್ಚೆಗೆ ಪ್ರತಿಕ್ರಿಯಿಸಿದ ಮಸ್ಕ್, 'ಇನ್‌ಸ್ಟಾಗ್ರಾಂ ಇರುವುದು ಹುಡುಗಿಯರಿಗಾಗಿ' ಎಂದು ಬರೆದಿದ್ದರು ಮತ್ತು ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ಗಳನ್ನು ಅವರೊಂದಿಗೆ ಹಂಚಿಕೊಳ್ಳುವ ಪುರುಷರನ್ನು ಲೇವಡಿ ಮಾಡಿದರು.

'Thirst traps' ಪೋಸ್ಟ್ ಮಾಡುವುದು, ದಿನವಿಡೀ ಸ್ಟೋರೀಸ್‌ಗಳನ್ನು ಅಪ್‌ಲೋಡ್ ಮಾಡುವುದು ಮತ್ತು ಮನೆಯಲ್ಲಿ ತಯಾರಿಸಿದ ಆಹಾರದ ಚಿತ್ರಗಳನ್ನು ಹಂಚಿಕೊಳ್ಳುವುದು ಮುಂತಾದ ಸಾಮಾನ್ಯ ಇನ್‌ಸ್ಟಾಗ್ರಾಂ ಟ್ರೆಂಡ್‌ಗಳನ್ನು ಥ್ರೆಡ್ ಹೈಲೈಟ್ ಮಾಡಿತು. 'ಥರ್ಸ್ಟ್ ಟ್ರ್ಯಾಪ್ಸ್' (Thirst traps) ಎಂದರೆ ಗಮನ ಸೆಳೆಯುವ ಉದ್ದೇಶದಿಂದ ಫೋಟೊಗಳು, ವಿಡಿಯೋಗಳನ್ನು ಹಂಚಿಕೊಳ್ಳುವುದು.

ನಂತರ, ವಯಸ್ಕ ಪುರುಷರು ತಮ್ಮ ಇನ್‌ಸ್ಟಾಗ್ರಾಂ ಪ್ರೊಫೈಲ್‌ಗಳನ್ನು ತಮಗೆ ಕಳುಹಿಸಿದಾಗ, ಅವರು 'ಪರಿವರ್ತನೆಯಾಗುತ್ತಿದ್ದಾರೆಯೇ ಅಥವಾ ಏನು' ಎಂದು ತಾನು ಆಶ್ಚರ್ಯ ಪಡುವುದಾಗಿ ಮಸ್ಕ್ ಹೇಳಿದ್ದರು.

ಈ ಪೋಸ್ಟ್ ತ್ವರಿತವಾಗಿ ವೈರಲ್ ಆಯಿತು; ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ಅವರ ಹೇಳಿಕೆಗಳನ್ನು ಲಿಂಗಭೇದಭಾವದ ಮತ್ತು ಆಕ್ಷೇಪಾರ್ಹ ಎಂದು ಕರೆದರು.

ಇನ್‌ಸ್ಟಾಗ್ರಾಂ ಕುರಿತಾದ ಅವರ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದ್ದು, ಆನ್‌ಲೈನ್‌ನಲ್ಲಿ ಹಲವು ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಒಬ್ಬ ಬಳಕೆದಾರರು, 'x ಯಾರಿಗೆ?' ಎಂದು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬ ಬಳಕೆದಾರರು, 'X ಬಗ್ಗೆ ಏನು?' ಎಂದು ಕೇಳಿದ್ದಾರೆ.

'ನಾನು ಇದನ್ನು ಒಪ್ಪುವುದಿಲ್ಲ. ಇನ್‌ಸ್ಟಾಗ್ರಾಂ ಎಲ್ಲ ಲಿಂಗದವರಿಗೂ ಸ್ವಾಗತಾರ್ಹ ವೇದಿಕೆಯಾಗಿದೆ ಎಂದು ನಾನು ಭಾವಿಸುತ್ತೇನೆ' ಎಂದು ಮೂರನೇ ಬಳಕೆದಾರರು ಹೇಳಿದರು.

ನಾಲ್ಕನೇ ಬಳಕೆದಾರರು, 'ಇನ್‌ಸ್ಟಾಗ್ರಾಂ ಎಲ್ಲರಿಗೂ ಸೇರಿದ್ದು' ಎಂದು ಪ್ರತಿಕ್ರಿಯಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.