ಥೇಟ್ 'ಡೊನಾಲ್ಡ್ ಟ್ರಂಪ್' ರೀತಿಯ ಅಪರೂಪದ ಎಮ್ಮೆ! ನೋಡಲು ಮುಗಿಬಿದ್ದ ಜನರು, Video ವೈರಲ್
ಈ ಎಮ್ಮೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಇಡಲಾಗಿದ್ದು, ಈದ್-ಉಲ್-ಅದಾಃ (ಬಕ್ರೀದ್) ಹಬ್ಬದ ಕುರ್ಬಾನಿಗಾಗಿ ಇದನ್ನು ಮಾರಾಟ ಮಾಡಲಾಗಿದೆ.

ಢಾಕಾ: ಈದ್-ಉಲ್-ಅದಾಃ (ಬಕ್ರೀದ್) ಹಬ್ಬದ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರೀತಿಯ ಹೊಂಬಣ್ಣದ ಕೂದಲನ್ನು ಹೊಂದಿರುವ ಅಪರೂಪದ ಅಲ್ಬಿನೋ ತಳಿಯ ಬಾಂಗ್ಲಾದೇಶದಲ್ಲಿನ ಎಮ್ಮೆಯೊಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸಖತ್ ವೈರಲ್ ಆಗುತ್ತಿದೆ.
ಈ ಎಮ್ಮೆಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರನ್ನ ಇಡಲಾಗಿದ್ದು, ಈದ್-ಉಲ್-ಅದಾಃ (ಬಕ್ರೀದ್) ಹಬ್ಬದ ಕುರ್ಬಾನಿಗಾಗಿ ಇದನ್ನು ಮಾರಾಟ ಮಾಡಲಾಗಿದೆ.
ಈ ಎಮ್ಮೆಯು ಅಮೆರಿಕದ ಅಧ್ಯಕ್ಷರ ರೀತಿಯಲ್ಲಿ ಕಾಣುವುದರಿಂದ ಅದನ್ನು ನೋಡಲು ಜನರು ಮುಗಿಬಿದಿದ್ದಾರೆ. ಪ್ರತಿದಿನವೂ ನೂರಾರು ಜನರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಬಾಂಗ್ಲಾದ ರಾಜಧಾನಿ ಢಾಕಾ ಸಮೀಪದ ನಾರಾಯಣಗಂಜ್ ಜಿಲ್ಲೆಯ ಫಾರಂ ಒಂದರಲ್ಲಿ ಈ ಎಮ್ಮೆಯನ್ನು ಬೆಳೆಸಲಾಗುತ್ತಿದೆ. ಸುಮಾರು 700 ಕೆಜಿ ತೂಕವಿರುವ ಈ ಎಮ್ಮೆಗೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗಿದೆ.
ಟ್ರಂಪ್ ಎನ್ನುವ ಹೆಸರು ಇಡಲು ಕಾರಣವೇನು ಎನ್ನುವುದನ್ನು ಎಮ್ಮೆಯ ಮಾಲೀಕ ಜಿಯಾ ಉದ್ಧಿನ್ ಮೈರ್ಡಾ ವಿವರಿಸಿದ್ದಾರೆ. ಎಮ್ಮೆಯ ಹಣೆ ಮತ್ತು ತಲೆಯ ಮೇಲ್ಬಾಗದಲ್ಲಿ ಹರಡಿರುವ ತಿಳಿ ಬಣ್ಣದ ವಿಶಿಷ್ಟವಾದ ಕೂದಲಿನ ಶೈಲಿ. ಇದು, ಅಮೆರಿಕದ ನಾಯಕರ ಹೇರ್ ಸ್ಟೈಲ್ ಹೋಲುತ್ತದೆ. ಹೀಗಾಗಿ ಅದಕ್ಕೆ ಡೊನಾಲ್ಡ್ ಟ್ರಂಪ್ ಎಂದು ಹೆಸರಿಡಲಾಗಿದೆ ಎಂದು ಎಮ್ಮೆಯ ಮಾಲೀಕರು ಅಭಿಪ್ರಾಯ ಪಟ್ಟಿದ್ದಾರೆ.
ಕುರ್ಬಾನಿಗಾಗಿ ಎರಡು ತಿಂಗಳ ಹಿಂದೆ ಇದನ್ನು ಖರೀದಿಸಲಾಯಿತು. ಆಗ ಇದು ಸುಮಾರು 597 ಕೆಜಿ ತೂಕವಿತ್ತು. ಸುಮಾರು 330,000 ಬಹದ್ದೂರ್ (ಭಾರತೀಯ ಕರೆನ್ಸಿಯಲ್ಲಿ ಸುಮಾರು ₹ 2.5 ಲಕ್ಷ ) ಕೊಟ್ಟು ಸಾಮಾನ್ಯ ರೀತಿಯಲ್ಲಿ ಖರೀದಿಸಿದ್ದೇವು. ಆದರೆ ಈಗ ಅದು ಹೆಚ್ಚು ಪ್ರಸಿದ್ಧಿಯಾಗಿದ್ದು, ಪ್ರತಿದಿನ ಅಪಾರ ಸಂಖ್ಯೆಯಲ್ಲಿ ಜನರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


