COVID ಬಳಿಕ ವಿಶ್ವಕ್ಕೆ ಮತ್ತೊಂದು ಹೆಮ್ಮಾರಿ: ಕೆನಡಾದಲ್ಲಿ ಮಾರಣಾಂತಿಕ 'Hantavirus' ಮತ್ತೊಂದು ಸೋಂಕು ದೃಢ!
ಈ ಸೋಂಕು ಹಡಗಿನಲ್ಲಿ ಪ್ರಯಾಣದ ವೇಳೆ ಹರಡಿರುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಡಗಿನ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಕನಿಷ್ಠ 10 ಮಂದಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ವ್ಯಾಂಕೋವರ್: ಹಂಟಾವೈರಸ್ ಸೋಂಕು ತಗುಲಿರುವ ಕ್ರೂಸ್ ಹಡಗಿನಿಂದ ಮನೆಗೆ ಹಿಂದಿರುಗಿದ ನಾಲ್ವರು ಕೆನಡಿಯನ್ನರಲ್ಲಿ ಓರ್ವ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಕೆನಡಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಭಾನುವಾರ (ಮೇ 17, 2026) ದೃಢಪಡಿಸಿದೆ.
ಕೆನಡಾದ ರಾಷ್ಟ್ರೀಯ ಆರೋಗ್ಯ ಸಂಸ್ಥೆ ಭಾನುವಾರ (ಮೇ 17, 2026) ನೀಡಿದ ಮಾಹಿತಿಯ ಪ್ರಕಾರಎಂವಿ ಹೊಂಡಿಯಸ್ ಎಂಬ ಕ್ರೂಸ್ ಹಡಗಿನಿಂದ ಮರಳಿದ್ದ ನಾಲ್ವರು ಕ್ಯಾನಡಾ ನಾಗರಿಕರಲ್ಲಿ ಒಬ್ಬರಿಗೆ ಹಂಟಾವೈರಸ್ ಸೋಂಕು ದೃಢವಾಗಿದೆ. ಮತ್ತೊಬ್ಬ ಪ್ರಯಾಣಿಕನ ಪರೀಕ್ಷೆ ನೆಗೆಟಿವ್ ಆಗಿದೆ ಎಂದು ತಿಳಿಸಲಾಗಿದೆ. ಉಳಿದ ಇಬ್ಬರ ಆರೋಗ್ಯ ಸ್ಥಿತಿಯನ್ನು ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗುತ್ತಿದೆ ಎಂದು ತಿಳಿಸಿದೆ.
ಈ ನಾಲ್ವರನ್ನೂ ಮೇ 10ರಂದು ಬ್ರಿಟಿಷ್ ಕೊಲಂಬಿಯಾಗೆ ಮರಳಿದ ಬಳಿಕ ತಕ್ಷಣವೇ ಐಸೋಲೇಷನ್ಗೆ ಒಳಪಡಿಸಲಾಯಿತು. ಸೋಂಕು ದೃಢಪಟ್ಟ ವ್ಯಕ್ತಿ ಮತ್ತು ಅವರ ಜೊತೆಯಲ್ಲಿದ್ದ ಮಹಿಳೆ ಇಬ್ಬರೂ ಯುಕಾನ್ ನಿವಾಸಿಗಳಾಗಿದ್ದು, ಪ್ರಸ್ತುತ ವಿಕ್ಟೋರಿಯಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದುಬಂದಿದೆ.
ಈ ಸೋಂಕು ಹಡಗಿನಲ್ಲಿ ಪ್ರಯಾಣದ ವೇಳೆ ಹರಡಿರುವ ಸಾಧ್ಯತೆ ಹೆಚ್ಚಿದೆ. ಈಗಾಗಲೇ ಹಡಗಿನ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಕನಿಷ್ಠ 10 ಮಂದಿಗೆ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಮೂರು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಮೃತರಲ್ಲಿ ಡಚ್ ದಂಪತಿಗಳಿದ್ದು, ದಕ್ಷಿಣ ಅಮೆರಿಕಾ ಪ್ರವಾಸದ ವೇಳೆ ಸೋಂಕಿಗೆ ಒಳಗಾದವರಾಗಿರಬಹುದು ಎಂದು ಶಂಕಿಸಲಾಗಿದೆ.
ನಂತರ ಹಡಗಿನ ಒಳಗಿನ ಪರಿಸರದಲ್ಲಿ ಸೋಂಕು ಇತರ ಪ್ರಯಾಣಿಕರಿಗೆ ಹರಡಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕ್ಯಾನಡಾ ಆರೋಗ್ಯ ಸಂಸ್ಥೆಯ ಪ್ರಕಾರ, ದೇಶದ ಸಾಮಾನ್ಯ ಜನರಿಗೆ ಈ ಹಂತದಲ್ಲಿ ಅಪಾಯ ಕಡಿಮೆ ಇದೆ. ಎಲ್ಲಾ ದೃಢಪಟ್ಟ ಪ್ರಕರಣಗಳು ಹಡಗು ಸಂಪರ್ಕಿತವಾಗಿದ್ದು, ಸಮುದಾಯದಲ್ಲಿ ಹರಡುವ ಯಾವುದೇ ಸೂಚನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಸಾಮಾನ್ಯವಾಗಿ ಹಂಟಾವೈರಸ್ ಇಲಿಗಳ ತ್ಯಾಜ್ಯದಿಂದ ಹರಡುತ್ತದೆ ಮತ್ತು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದು ಅಪರೂಪ. ಆದರೆ, ಈ ಹಡಗಿನಲ್ಲಿ ಪತ್ತೆಯಾಗಿರುವ 'ಆಂಡಿಸ್ ತಳಿ' (Andes Strain) ಮಾತ್ರ ಮನುಷ್ಯರಿಂದ ಮನುಷ್ಯರಿಗೆ ನಿಕಟ ಸಂಪರ್ಕದ ಮೂಲಕ ಹರಡುವ ಸಾಮರ್ಥ್ಯ ಹೊಂದಿದೆ. ಇದು ತೀವ್ರ ಉಸಿರಾಟದ ಸಮಸ್ಯೆಯನ್ನು ಉಂಟುಮಾಡಲಿದ್ದು, ಇದರ ಮರಣ ಪ್ರಮಾಣ ಶೇ. 40 ರಷ್ಟಿದೆ ಎಂದು WHO ಎಚ್ಚರಿಸಿದೆ.
ಕೆನಡಾದ ಸಾರ್ವಜನಿಕ ಆರೋಗ್ಯ ಸಂಸ್ಥೆಯು (PHAC) ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಸೋಂಕಿತ ವ್ಯಕ್ತಿಯು ಸಾರ್ವಜನಿಕರೊಂದಿಗೆ ಯಾವುದೇ ಸಂಪರ್ಕಕ್ಕೆ ಬಾರದಂತೆ ಮೊದಲೇ ಐಸೋಲೇಶನ್ನಲ್ಲಿ ಇರಿಸಲಾಗಿತ್ತು. ಹೀಗಾಗಿ ದೇಶದ ಸಾಮಾನ್ಯ ಜನರಿಗೆ ಇದರಿಂದ ಇರುವ ಅಪಾಯ 'ಬಹಳ ಕಡಿಮೆ' ಎಂದು ಹೇಳಿದೆ.
ಇದು ಕೋವಿಡ್ನಂತೆ ಸುಲಭವಾಗಿ ಗಾಳಿಯಲ್ಲಿ ಹರಡುವುದಿಲ್ಲ, ಕೇವಲ ದೀರ್ಘಕಾಲದ ನಿಕಟ ಸಂಪರ್ಕದಿಂದ ಮಾತ್ರ ಹರಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



