'ಮಿಲಿಟರಿ ಕಾರ್ಯಾಚರಣೆ ಮಾಡೋಣ ಎಂದಿದ್ದು ನೀವು': ರಕ್ಷಣಾ ಕಾರ್ಯದರ್ಶಿ ಹೆಗೆತ್ಸ್ ಮೇಲೆಯೇ ಯುದ್ಧದ ಹೊಣೆ ಹೊರಿಸಿದ ಡೊನಾಲ್ಡ್ ಟ್ರಂಪ್!
ಎಲ್ಲರಿಗಿಂತ ಮೊದಲು ಬಹುಶಃ ಪೀಟ್, ನೀವು ಮೊದಲು ಮಾತನಾಡಿದಿರಿ ಎಂದು ನಾನು ಭಾವಿಸುತ್ತೇನೆ, ನೀವು ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಲು ಸಾಧ್ಯವಿಲ್ಲ ಎಂದಿದ್ದು, ಹಾಗಾಗಿ ಅದನ್ನು (ಮಿಲಿಟರಿ ಕಾರ್ಯಚರಣೆ) ಮಾಡೋಣ ಎಂದು ಹೇಳಿದ್ದೀರಿ.

ವಾಷಿಂಗ್ಟನ್: ಇರಾನ್ ವಿರುದ್ಧ ನಡೆದ ಅಮೆರಿಕಾ-ಇಸ್ರೇಲ್ ದಾಳಿಗಳ ಕುರಿತಾಗಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನೀಡಿರುವ ಹೇಳಿಕೊಂಡು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಇರಾನ್ ಮೇಲಿನ ದಾಳಿಯ ಹೊಣೆಯನ್ನು ಟ್ರಂಪ್ ಅವರು, ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಅವರ ಮೇಲೆ ಹಾಕಿದ್ದಾರೆ.
ಅಮೆರಿಕಾದ ಟೆನ್ನೆಸ್ಸೀ ರಾಜ್ಯದ ಮೆಂಫಿಸ್ನಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದು, ಇರಾನ್ ಮೇಲಿನ ದಾಳಿಗಳನ್ನು ಮೊದಲು ಪ್ರಸ್ತಾಪಿಸಿದ್ದೇ ಪೀಟ್ ಹೆಗೆತ್ಸ್ ಎಂದು ಹೇಳಿದ್ದಾರೆ.
ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಾನು ಪೀಟ್ ಹೇಗೆತ್ಸ್, ಜನರಲ್ ಕೇನ್ ಸೇರಿದಂತೆ ಹಲವರಿಗೆ ಕರೆ ಮಾಡಿ ಅವರಿಗೆ ಮಧ್ಯಪ್ರಾಚ್ಯದಲ್ಲಿ ಒಂದು ಸಮಸ್ಯೆಯಿದೆ, ಈ ಪ್ರದೇಶದಲ್ಲಿ ಇರಾನ್ ಎಂಬ ದೇಶವಿದ್ದು, ಇದು ಸುಮಾರು 47 ವರ್ಷಗಳಿಂದ ಭಯೋತ್ಪದನೆ ಪ್ರಾಯೋಜಕರಾಗಿದ್ದು, ಪರಮಾಣು ಅಸ್ತ್ರವನ್ನು ಹೊಂದುವಲ್ಲಿ ಕೆಲಸ ಮಾಡುತ್ತಿದ್ದಾರೆ. ಇದನ್ನು ತೊಡೆದುಹಾಕಲು ನಾನು ಅಲ್ಲಿ ಹೋಗಿ ಅದನ್ನು ನಿವಾರಿಸಬಹುದು ಎಂದು ಹೇಳಿದೆ.
ಇದಕ್ಕೆ ಎಲ್ಲರಿಗಿಂತ ಮೊದಲು "ಬಹುಶಃ ಪೀಟ್, ನೀವು ಮೊದಲು ಮಾತನಾಡಿದಿರಿ ಎಂದು ನಾನು ಭಾವಿಸುತ್ತೇನೆ, ನೀವು ಅವರು ಪರಮಾಣು ಶಸ್ತ್ರಾಸ್ತ್ರವನ್ನು ಹೊಂದಲು ಬಿಡಲು ಸಾಧ್ಯವಿಲ್ಲ ಎಂದಿದ್ದು, ಹಾಗಾಗಿ ಅದನ್ನು (ಮಿಲಿಟರಿ ಕಾರ್ಯಚರಣೆ) ಮಾಡೋಣ ಎಂದು ಹೇಳಿದ್ದೀರಿ ಎಂದು ಪಕ್ಕದಲ್ಲೇ ಇದ್ದ ಪೀಟ್ ಹೆಗೆತ್ಸ್ ನತ್ತ ನೋಡುತ್ತಾ ಹೇಳಿಕೆ ನೀಡಿದರು.
ಬಳಿಕ ಕದನವಿರಾಮ ಕುರಿತು ಮಾತನಾಡಿದ ಟ್ರಂಪ್, ಅಮರಿಕಾ ಹಾಗೂ ಇರಾನ್ ನಡುವೆ ಉತ್ತಮ ಮಾತುಕತೆ ನಡೆಯುತ್ತಿದೆ. ಕಳೆದ ರಾತ್ರಿ ಹಾಗೂ ಅದಕ್ಕೂ ಮೊದಲು ಸಹ ಉತ್ತಮ ಚರ್ಚೆಗಳು ನಡೆಯುತ್ತಿವೆ ಎಂದು ತಿಳಿಸಿದರು.
ಈ ನಡುವೆ ಅಮೆರಿಕಾ ಅಧ್ಯಕ್ಷರು ಘೋಷಿಸಿದ ಕದನ ವಿರಾಮವನ್ನು ಇರಾನ್ ತಿರಸ್ಕರಿಸಿದ್ದು, ಅಮೆರಿಕಾದೊಂದಿಗೆ ಯಾವುದೇ ಕದನ ವಿರಾಮ ಒಪ್ಪಂದ ಮಾತುಕತೆ ನಡೆದಿಲ್ಲ. ಸುಪ್ರೀಂ ಲೀಡರ್ ಮೊಜ್ತಬಾ ಖಮೇನಿ ನೇತೃತ್ವದಲ್ಲಿ ಅಮೆರಿಕಾ ಮತ್ತು ಇಸ್ರೇಲ್ ವಿರುದ್ಧದ ಹೋರಾಟ ಮುಂದುವರೆಯುತ್ತಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಇರಾನ್ ಮಾಧ್ಯಮಗಳು ಟ್ರಂಪ್ ಹೇಡಿತನದಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ವ್ಯಂಗ್ಯವಾಡುತ್ತಿರುವ ಬೆಳವಣಿಗೆಗಳೂ ಕಂಡು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



