'ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯ': ನೌರುಜ್ ಹಬ್ಬಕ್ಕೆ ಇರಾನ್ ಜನತೆಗೆ ಇಸ್ರೇಲ್ ಪ್ರಧಾನಿ Benjamin Netanyahu ಶುಭಾಶಯ; Video
ಧೈರ್ಯಶಾಲಿ ಇರಾನ್ ಜನತೆಗೆ, ಬೆಳಕಿನ ಹಬ್ಬದಿಂದ ಆರಂಭವಾಗುವ ಹಬ್ಬದ ಋತುವಿಗೆ ಹಾರ್ದಿಕ ಶುಭಾಶಯಗಳು. ಇದು ಬೆಳಕು ಕತ್ತಲೆಯ ಮೇಲೆ ಜಯ ಸಾಧಿಸುತ್ತದೆ, ಒಳ್ಳೆಯದು ಕೆಟ್ಟದ ಮೇಲೆ ಜಯ ಸಾಧಿಸುತ್ತದೆ ಎಂಬ ಇರಾನ್ ಜನರ ಶಾಶ್ವತ ನಂಬಿಕೆಯನ್ನು ಸೂಚಿಸುತ್ತದೆ ಎಂದು ನೆತನ್ಯಾಹು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ, ಇತ್ತೀಚಿನ ವಾರಗಳಲ್ಲಿ ಸೋಷಿಯಲ್ ಮೀಡಿಯಾಗಳಲ್ಲಿ ಬೆಂಜಮಿನ್ ನೆತನ್ಯಾಹು ಮೃತಪಟ್ಟಿದ್ದಾರೆ ಎಂಬ ವದಂತಿಗಳು ವೇಗವಾಗಿ ಹರಡುತ್ತಿರುವುದರ ಮಧ್ಯೆ, ಇಸ್ರೇಲ್ ಪ್ರಧಾನಮಂತ್ರಿ ಇರಾನ್ ಜನರಿಗೆ ನೌರುಜ್ ಹಬ್ಬದ ಶುಭಾಶಯಗಳನ್ನು ತಿಳಿಸುವ ಪೋಸ್ಟ್ ಹಂಚಿಕೊಂಡಿದ್ದಾರೆ.
ಧೈರ್ಯಶಾಲಿ ಇರಾನ್ ಜನತೆಗೆ, ಬೆಳಕಿನ ಹಬ್ಬದಿಂದ ಆರಂಭವಾಗುವ ಹಬ್ಬದ ಋತುವಿಗೆ ಹಾರ್ದಿಕ ಶುಭಾಶಯಗಳು. ಇದು ಬೆಳಕು ಕತ್ತಲೆಯ ಮೇಲೆ ಜಯ ಸಾಧಿಸುತ್ತದೆ, ಒಳ್ಳೆಯದು ಕೆಟ್ಟದ ಮೇಲೆ ಜಯ ಸಾಧಿಸುತ್ತದೆ ಎಂಬ ಇರಾನ್ ಜನರ ಶಾಶ್ವತ ನಂಬಿಕೆಯನ್ನು ಸೂಚಿಸುತ್ತದೆ ಎಂದು ನೆತನ್ಯಾಹು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.
ನೌರುಜ್ ಪಾರ್ಸಿ ಹೊಸ ವರ್ಷವನ್ನು ಹಾಗೂ ಇರಾನ್ ಕ್ಯಾಲೆಂಡರ್‌ನ ಆರಂಭವನ್ನು ಸೂಚಿಸುತ್ತದೆ. ಇದು ವಸಂತ ಋತುವಿನ ಆಗಮನವನ್ನೂ ಸೂಚಿಸಿ, ಇರಾನ್, ಅಫ್ಘಾನಿಸ್ತಾನ, ಮಧ್ಯ ಏಷ್ಯಾ ಮತ್ತು ಮಧ್ಯಪ್ರಾಚ್ಯದ ಹಲವು ಭಾಗಗಳಲ್ಲಿ ಲಕ್ಷಾಂತರ ಜನರು ಆಚರಿಸುತ್ತಾರೆ.
ಇದಕ್ಕೂ ಮುನ್ನ ಇಸ್ರೇಲ್ ಪ್ರಧಾನಮಂತ್ರಿಗಳು, ಜೆರುಸಲೇಮ್ ಬೆಟ್ಟ ಪ್ರದೇಶದಲ್ಲಿ ಸಾಮಾನ್ಯ ಜನರೊಂದಿಗೆ ಮಾತನಾಡುತ್ತಿರುವ 90 ಸೆಕೆಂಡ್ ವಿಡಿಯೋವನ್ನು ಹಂಚಿಕೊಂಡು, ಇರಾನ್ ವಿರುದ್ಧದ ಯುದ್ಧ ಮುಂದುವರಿಯುತ್ತಿರುವಾಗ ತಾಳ್ಮೆಯಿಂದಿರಲು ಮನವಿ ಮಾಡಿಕೊಂಡಿದ್ದರು.
ತಮ್ಮ ಸಾವು ಕುರಿತು ಹರಿದಾಡುತ್ತಿದ್ದ ವದಂತಿಗಳಿಗೆ ಪ್ರತಿಕ್ರಿಯೆ ನೀಡಿದ ನೆತನ್ಯಾಹು, ಒಂದು ಚಿಕ್ಕ ವಿಡಿಯೋ ಹಂಚಿಕೊಂಡು, ನಾನು ಕಾಫಿಗಾಗಿ ಸತ್ತಿದ್ದೇನೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ. ಇದು ಹೆಬ್ರೂ ಭಾಷೆಯ ಒಂದು ಪ್ರಚಲಿತ ಪದಪ್ರಯೋಗವಾಗಿದ್ದು, ಯಾವುದನ್ನಾದರೂ ತುಂಬಾ ಇಷ್ಟಪಡುವುದನ್ನು ಸೂಚಿಸುತ್ತದೆ.
ಇಸ್ರೇಲ್ ಪ್ರಧಾನಮಂತ್ರಿ ನಾಗರಿಕರಿಗೆ ರಾಕೆಟ್ ದಾಳಿಗಳ ಸಂದರ್ಭದಲ್ಲಿ ಭದ್ರತಾ ಸೂಚನೆಗಳನ್ನು ಪಾಲಿಸುವಂತೆ ಮನವಿ ಮಾಡಿದರು. ನಾವು ಇರಾನ್ ಮತ್ತು ಲೆಬನಾನ್ ಮೇಲೆ ತೀವ್ರವಾಗಿ ಪ್ರಹಾರ ಮಾಡುತ್ತಿದ್ದೇವೆ ಎಂದು ಹೇಳಿದರು.
ಇಸ್ರೇಲ್ ಪ್ರಧಾನಮಂತ್ರಿ ಕಚೇರಿ ಸೇರಿದಂತೆ ಅಧಿಕೃತ ಮೂಲಗಳು, ನೆತನ್ಯಾಹು ಜೀವಂತವಾಗಿದ್ದು ತಮ್ಮ ಕರ್ತವ್ಯಗಳನ್ನು ಮುಂದುವರೆಸುತ್ತಿದ್ದಾರೆ ಎಂದು ದೃಢಪಡಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



