FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ
"ಅವನನ್ನು ಯಾರಾದರೂ ಕಳುಹಿಸಿದ್ದರೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನನ್ನು ಕಳುಹಿಸಿದವರು ಭಾರಿ ಬೆಲೆ ತೆರಬೇಕಾಗುತ್ತದೆ," ಎಂದು ದಾಳಿಕೋರನ ಕುರಿತು ನೆತನ್ಯಾಹು ಹೇಳಿದರು.

ಟೆಲ್ ಅವೀವ್: 'ಫ್ಲೈದುಬೈ' (Flydubai) ವಿಮಾನ ಘಟನೆಯ ಹಿಂದೆ ಯಾವುದೇ ಶಕ್ತಿ ಇದ್ದರೂ ಅದು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
"ಸಮಯ ಕಳೆದಂತೆ ಪರಿಸ್ಥಿತಿ ಸ್ಪಷ್ಟವಾಗುತ್ತಿದೆ: ದಾಳಿಕೋರನು ಇಸ್ಲಾಮಿಸ್ಟ್ ಉಗ್ರಗಾಮಿ ಸಿದ್ಧಾಂತದ ಪ್ರಭಾವಕ್ಕೆ ಒಳಗಾಗಿದ್ದನು. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರೊಂದಿಗೆ ಅದನ್ನು ಪತನಗೊಳಿಸುವ ಉದ್ದೇಶದಿಂದಲೇ ಆತ ಬಂದಿದ್ದನು," ಎಂದು ನೆತನ್ಯಾಹು ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಅವನನ್ನು ಯಾರಾದರೂ ಕಳುಹಿಸಿದ್ದರೇ ಎಂದು ನಾವು ತನಿಖೆ ನಡೆಸುತ್ತಿದ್ದೇವೆ ಮತ್ತು ಅವನನ್ನು ಕಳುಹಿಸಿದವರು ಭಾರಿ ಬೆಲೆ ತೆರಬೇಕಾಗುತ್ತದೆ," ಎಂದು ದಾಳಿಕೋರನ ಕುರಿತು ನೆತನ್ಯಾಹು ಹೇಳಿದರು.
ನೆತನ್ಯಾಹು ಯಾವುದೇ ನಿರ್ದಿಷ್ಟ ದೇಶವನ್ನು ಸಂಭಾವ್ಯ ತಪ್ಪಿತಸ್ಥ ಎಂದು ಗುರುತಿಸಲಿಲ್ಲ, ಆದರೆ ಇರಾನ್‌ನತ್ತ ಬೊಟ್ಟು ಮಾಡುವಲ್ಲಿ ಅವರು ಯಾವಾಗಲೂ ಮುಂದಿರುತ್ತಾರೆ; ಇಸ್ರೇಲ್ ಮತ್ತು ಅಮೆರಿಕಗಳು ಫೆಬ್ರವರಿಯಲ್ಲಿ ಇರಾನ್ ಮೇಲೆ ದಾಳಿ ನಡೆಸಿದ್ದವು.
ಏಪ್ರಿಲ್‌ನಲ್ಲಿ ಇರಾನ್‌ನೊಂದಿಗೆ ಕದನ ವಿರಾಮ ಒಪ್ಪಂದ ಮಾಡಿಕೊಂಡಿದ್ದರೂ ಅದು ಈಗ ಮುರಿದುಬಿದ್ದಿದೆ. ಈ ಹಿನ್ನೆಲೆಯಲ್ಲಿ, ಇರಾನ್‌ನ ಪಾತ್ರದ ಬಗ್ಗೆ ತಮಗೆ "ಮಾಹಿತಿ ಕೇಳಿಬರುತ್ತಿದೆ" ಮತ್ತು ಹಾಗೇನಾದರೂ ಸಾಬೀತಾದರೆ ಆ ದೇಶದ ಮೇಲೆ "ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುರುವಾರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
1979ರಲ್ಲಿ ಇಸ್ಲಾಮಿಕ್ ಗಣರಾಜ್ಯ ಸ್ಥಾಪನೆಯಾದಾಗಿನಿಂದ, ಇಸ್ರೇಲ್ ಮತ್ತು ಅಮೆರಿಕಗಳು ಪ್ರಪಂಚದಾದ್ಯಂತ ನಡೆದ ಅನೇಕ ದಾಳಿಗಳೊಂದಿಗೆ ಇರಾನ್‌ನ ಶಿಯಾ ಧಾರ್ಮಿಕ ಆಡಳಿತಕ್ಕೆ ನಂಟು ಕಲ್ಪಿಸಿವೆ.
ಆದರೆ ವಿಮಾನ ಅಪಹರಣಗಳೊಂದಿಗೆ ಅದಕ್ಕೆ ಅಷ್ಟಾಗಿ ಸಂಬಂಧವಿಲ್ಲ; ವಿಮಾನ ಅಪಹರಣಗಳು 2001ರ ಸೆಪ್ಟೆಂಬರ್ 11ರ ದಾಳಿಯ ಸಂದರ್ಭದಲ್ಲಿ ಅಲ್-ಖೈದಾ ಹಾಗೂ 1960 ಮತ್ತು 1970ರ ದಶಕಗಳಲ್ಲಿ 'ಪಾಲೆಸ್ಟೈನ್ ವಿಮೋಚನಾ ಜನಪರ ರಂಗ'ದ (PFLP) ಪ್ರಮುಖ ಚಟುವಟಿಕೆಗಳಾಗಿದ್ದವು.
ಪೈಲಟ್ ಓಮನ್ ದೇಶದವರು ಎಂದು ನೆತನ್ಯಾಹು ಈ ಹಿಂದೆ ಹೇಳಿದ್ದರು ಮತ್ತು ಆತ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರಬಹುದು ಎಂಬ ಸಾಧ್ಯತೆಯನ್ನೂ ತಳ್ಳಿಹಾಕಿರಲಿಲ್ಲ.
ಬುಧವಾರ ಟೆಲ್ ಅವೀವ್‌ಗೆ ತೆರಳುತ್ತಿದ್ದ ವಿಮಾನದ ಸಹ-ಪೈಲಟ್ ಭಾರತೀಯ ಪೈಲಟ್‌ನನ್ನು ಚಾಕುವಿನಿಂದ ಇರಿದಿದ್ದಾನೆ ಎಂದು ಇಸ್ರೇಲ್ ಅಧಿಕಾರಿಗಳು ಮತ್ತು ಸಾಕ್ಷಿಗಳು ತಿಳಿಸಿದ್ದಾರೆ. ದಾಳಿಕೋರನನ್ನು ನಿಯಂತ್ರಿಸಲು ಪೈಲಟ್ ಪ್ರಯಾಣಿಕರನ್ನು ಕಾಕ್‌ಪಿಟ್‌ಗೆ ಬರಲು ಅವಕಾಶ ಮಾಡಿಕೊಟ್ಟಿದ್ದರು. ವಿಮಾನವು ಸೌದಿ ಅರೇಬಿಯಾದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಮತ್ತು ಯಾವುದೇ ಸಾವು-ನೋವು ಸಂಭವಿಸಲಿಲ್ಲ.

ರಕ್ತದ ಮಡುವಿನಲ್ಲಿ ಪೈಲಟ್`ಗಳು, ಫ್ಲೈಟ್ ಲ್ಯಾಂಡ್ ಮಾಡಿದ ಪ್ಲಂಬರ್; FlyDubai ವಿಮಾನ ಪತನವಾಗದಿದ್ದದ್ದೇ ಅಚ್ಚರಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



