ಅಪ್ರಾಪ್ತ ವಿದ್ಯಾರ್ಥಿಗಳ ಜೊತೆ ಸೆಕ್ಸ್; ಪ್ರೌಢಶಾಲಾ ಶಿಕ್ಷಕಿ ಬಂಧನ!
ಶಿಕ್ಷಕಿ ನಿಕೋಲ್ಸ್ ಮೇ 3 ರಂದು ಎರಡನೇ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಮತ್ತು ಇತರ ಹಲವಾರು ವಿದ್ಯಾರ್ಥಿಗಳಿಗೆ ಅನುಚಿತ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.

ವಾಷಿಂಗ್ಟನ್: ತನ್ನ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ಎರಡು ಬಾರಿ ಲೈಂಗಿಕ ಸಂಬಂಧ ಹೊಂದಿದ್ದ ಆರೋಪದ ಮೇಲೆ ಅಮೆರಿಕದ ಜಾರ್ಜಿಯಾ ರಾಜ್ಯದ ಪ್ರೌಢಶಾಲಾ ಶಿಕ್ಷಕಿಯೊಬ್ಬರನ್ನು ಬಂಧಿಸಲಾಗಿದೆ.
ಬಂಧಿತ ಶಿಕ್ಷಕಿಯನ್ನು 25 ವರ್ಷದ ಮಾರಿಸ್ ನಿಕೋಲ್ಸ್ ಎಂದು ಗುರುತಿಸಲಾಗಿದ್ದು, ಈಕೆ ಅಲೆಕ್ಸಾಂಡರ್ ಹೈಸ್ಕೂಲ್‌ನಲ್ಲಿ ಜೀವಶಾಸ್ತ್ರ ಶಿಕ್ಷಕಿ ಮತ್ತು ಶಾಲಾ ಫುಟ್‌ಬಾಲ್ ತಂಡದ ಕಾರ್ಯಾಚರಣೆ ಮ್ಯಾನೇಜರ್ ಆಗಿದ್ದಳು.
ಹೊಸ ಬಂಧನ ವಾರಂಟ್ ಪ್ರಕಾರ, ಶಿಕ್ಷಕಿ ನಿಕೋಲ್ಸ್ ಮೇ 3 ರಂದು ಎರಡನೇ ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಾರೆ ಮತ್ತು ಇತರ ಹಲವಾರು ವಿದ್ಯಾರ್ಥಿಗಳಿಗೆ ಅನುಚಿತ ಫೋಟೋ ಹಾಗೂ ವಿಡಿಯೋಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕ್ಲೀವ್‌ಲ್ಯಾಂಡ್ 19 ನ್ಯೂಸ್‌ನ ವರದಿಯ ಪ್ರಕಾರ, ಏಪ್ರಿಲ್ 23 ರಂದು ಮೊದಲು ಶಾಲಾ ಕೋಣೆಯ ಕ್ಲೋಸೆಟ್‌ನಲ್ಲಿ ಮತ್ತು ನಂತರ ಮೇ 2 ರಂದು ವಾಹನದೊಳಗೆ ಶಿಕ್ಷಕಿ, ವಿದ್ಯಾರ್ಥಿಯೊಂದಿಗೆ ಎರಡು ಬಾರಿ ಲೈಂಗಿಕ ಸಂಬಂಧ ಹೊಂದಿದ್ದಳು ಎಂದು ಆರೋಪಿಸಲಾಗಿದೆ.
ಪೊಲೀಸರ ಪ್ರಕಾರ, ನಿಕೋಲ್ಸ್, ವಿದ್ಯಾರ್ಥಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿರುವ ವಿಡಿಯೋ ಸೇರಿದಂತೆ ಹಲವಾರು ಅನುಚಿತ ಸಂದೇಶಗಳನ್ನು ವಿದ್ಯಾರ್ಥಿಗಳಿಗೆ ಕಳುಹಿಸಿದ್ದಾರೆ. ಇವುಗಳನ್ನು ಇಟ್ಟುಕೊಂಡು ಕೆಲ ವಿದ್ಯಾರ್ಥಿಗಳು, ಉತ್ತಮ ಅಂಕಗಳಿಗಾಗಿ ಶಿಕ್ಷಕಿ ನಿಕೋಲ್ಸ್‌ಳನ್ನು ಬ್ಲ್ಯಾಕ್‌ಮೇಲ್ ಮಾಡಿದ್ದಾರೆಂಬ ಆರೋಪವೂ ಕೇಳಿಬಂದಿದೆ.
ನಮಗೆ ಉತ್ತಮ ಅಂಕ ಕೊಡಬೇಕು. ಇಲ್ಲದಿದ್ದರೆ ಓನ್ಲಿಫ್ಯಾನ್ಸ್ ಖಾತೆಯಿಂದ ವಿಡಿಯೋ ಹರಿಬಿಡುವುದಾಗಿ ಶಿಕ್ಷಕಿಗೆ ವಿದ್ಯಾರ್ಥಿಗಳು ಬೆದರಿಕೆ ಹಾಕಿದ್ದರು ಎಂದು ತಿಳಿದುಬಂದಿದೆ.
ಪ್ರಸ್ತುತ ಶಿಕ್ಷಕಿಯ ವಿರುದ್ಧ ಸಾಕ್ಷ್ಯಗಳನ್ನು ತಿರುಚಿದ ಆರೋಪ, ಮಕ್ಕಳ ಮೇಲೆ ದೌರ್ಜನ್ಯ, ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ ಆರೋಪಗಳನ್ನು ಹೊರಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.




