ದೇಶ

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಅಂಧಭಕ್ತರೇ ಹೊಣೆ- ರಾಹುಲ್ ಗಾಂಧಿ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅವರು, "ಇದು ತೀವ್ರ ಮನ ಕಲಕುವ" ಘಟನೆ ಎಂದು ಹೇಳಿದ್ದಾರೆ.

Bihar horror: ಅಪ್ರಾಪ್ತ ಜೋಡಿ ಅಡ್ಡಗಟ್ಟಿ ಲೈಂಗಿಕ ಕಿರುಕುಳ; ಅಂಧಭಕ್ತರೇ ಹೊಣೆ- ರಾಹುಲ್ ಗಾಂಧಿ
ಬಿಹಾರದಲ್ಲಿ ಅಪ್ರಾಪ್ತ ವಿದ್ಯಾರ್ಥಿನಿಗೆ ಕಿರುಕುಳ
Published On :

ನವದೆಹಲಿ: ಬಿಹಾರದಲ್ಲಿ ಮತ್ತೊಂದು ಭೀಕರ ಕೃತ್ಯ ನಡೆದಿದ್ದು, ಕೋಚಿಂಗ್ ಸೆಂಟರ್ ನಿಂದ ಮನೆಗೆ ವಾಪಸ್ ಆಗುತ್ತಿದ್ದ ಅಪ್ರಾಪ್ತ ಜೋಡಿಯೊಂದನ್ನು ದುಷ್ಕರ್ಮಿಗಳ ಗುಂಪೊಂದು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡಿರುವ ವಿಡಿಯೋ ವ್ಯಾಪಕ ವೈರಲ್ ಆಗಿದೆ.

ರಸ್ತೆಬದಿಯಲ್ಲಿ ಜೋಡಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗಳನ್ನು ಪತ್ತೆಹಚ್ಚುತ್ತಿರುವುದಾಗಿ ಬಿಹಾರದ ಜಮುಯಿ ಜಿಲ್ಲೆಯ ಪೊಲೀಸರು ಸೋಮವಾರ ಹೇಳಿದ್ದು, ಈ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸೆಪ್ಟೆಂಬರ್ 19 ರಂದು ಸಂಜೆ ಈ ಘಟನೆ ನಡೆದಿದ್ದು, ವಿಡಿಯೋದಲ್ಲಿ ಕಂಡುಬರುವ ವಾಹನದ ನೋಂದಣಿ ಸಂಖ್ಯೆಯ ಸಹಾಯದಿಂದ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ ಎಂದು ಜಮುಯಿ ಎಸ್ಪಿ ಬಿಶ್ವಜೀತ್ ದಯಾಳ್ ಹೇಳಿದ್ದಾರೆ.

"ಘಟನೆ ಎರಡು ದಿನಗಳಷ್ಟು ಹಳೆಯದಾಗಿದ್ದರೂ, ಭಾನುವಾರದವರೆಗೆ ಹುಡುಗ ಅಥವಾ ಹುಡುಗಿ ನಮಗೆ ಯಾವುದೇ ದೂರು ನೀಡಿಲ್ಲ. ಇಂದು, ವಿಡಿಯೋ ವೈರಲ್ ಆದಾಗ, ನಾವು ಸಂತ್ರಸ್ತರನ್ನು ಪತ್ತೆಹಚ್ಚಿದ್ದೇವೆ" ಎಂದು ಎಸ್ಪಿ ವರದಿಗಾರರಿಗೆ ತಿಳಿಸಿದ್ದಾರೆ.

"ಜಮುಯಿ ಪೊಲೀಸ್ ಠಾಣೆಯಲ್ಲಿ ನಾವು ದಾಖಲಿಸಿದ ಎಫ್‌ಐಆರ್‌ನಲ್ಲಿ ಆರೋಪಿಗಳನ್ನು ಹೆಸರಿಸಲಾಗಿಲ್ಲ. ಆದರೆ ವಿಡಿಯೋ ಕ್ಲಿಪ್ ಸಹಾಯದಿಂದ ನಾವು ಸುಮಾರು ಏಳು ದುಷ್ಕರ್ಮಿಗಳನ್ನು ಗುರುತಿಸಿದ್ದೇವೆ ಮತ್ತು ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು" ಎಂದು ದಯಾಳ್ ಹೇಳಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಅವರು, "ಇದು ತೀವ್ರ ಮನ ಕಲಕುವ" ಘಟನೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

"ಇದು ಸಂಸ್ಕೃತಿಯಲ್ಲ, ಇದು ಪಿತೃಪ್ರಭುತ್ವ" ಎಂದು ರಾಹುಲ್ ಗಾಂಧಿ ಟೀಕಿಸಿದ್ದು, ಅಂತಹ ವರ್ತನೆಗಳನ್ನು "ಸಾಮಾನ್ಯೀಕರಿಸಲು" "ಆಂಧಭಕ್ತರು" ಕಾರಣ ಮತ್ತು ಇದಕ್ಕೆ ಆಂಧಭಕ್ತರೇ ಹೊಣೆ ಎಂದು ಆರೋಪಿಸಿದ್ದಾರೆ.

ವಿಡಿಯೋದಲ್ಲಿ ಗುರುತಿಸಲಾದ ವ್ಯಕ್ತಿಗಳ ವಿರುದ್ಧ "POCSO ಅಡಿಯಲ್ಲಿ ಮೊಕದ್ದಮೆ ಹೂಡಬೇಕು" ಎಂದು ಕಾಂಗ್ರೆಸ್ ನಾಯಕ ಆಗ್ರಹಿಸಿದ್ದು, "ರಸ್ತೆಯಲ್ಲಿ ಒಬ್ಬ ಹುಡುಗಿ ಏಕೆ ಸುರಕ್ಷಿತವಾಗಿಲ್ಲ" ಎಂದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಆಮ್ ಆದ್ಮಿ ಪಕ್ಷವು ವಿಡಿಯೋ ಕ್ಲಿಪ್ ಅನ್ನು ತನ್ನ ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.