ಹಾರ್ಮುಜ್ ನಮ್ಮದು, ದಾಟುವ ದುಸ್ಸಾಹಸ ಮಾಡ್ಬೇಡಿ: ಅಮೆರಿಕಕ್ಕೆ ಸಹಾಯ ಮಾಡುವ ದೇಶಗಳಿಗೆ IRGC ಕಠಿಣ ಎಚ್ಚರಿಕೆ!
"ನಿನ್ನೆ ರಾತ್ರಿ, ಅಮೆರಿಕದಿಂದ ಪ್ರಚೋದಿಸಲ್ಪಟ್ಟ ಎರಡು ತೈಲ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯ ದಕ್ಷಿಣಕ್ಕೆ ಅಸುರಕ್ಷಿತ ಮಾರ್ಗದಿಂದ ತೆರಳಲು ಪ್ರಯತ್ನಿಸಿದವು.

ಟೆಹ್ರಾನ್: ಮಧ್ಯಪ್ರಾಚ್ಯ ಸಂಘರ್ಷವು ಮತ್ತಷ್ಟು ತೀವ್ರಗೊಳ್ಳುತ್ತಿದ್ದು, ಬುಧವಾರ ಅಮೆರಿಕ ಸೇನೆ ಇರಾನ್ ಮೇಲೆ ಮತ್ತೆ ವೈಮಾನಿಕ ದಾಳಿ ನಡೆಸಿದೆ. ಇದರ ಬೆನ್ನಲ್ಲೇ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC), ಹಾರ್ಮುಜ್ ಜಲಸಂಧಿಯ ದಕ್ಷಿಣಕ್ಕೆ "ಅಸುರಕ್ಷಿತ ಮಾರ್ಗ" ದಿಂದ ಹೊರಬರಲು ಪ್ರಯತ್ನಿಸುತ್ತಿದ್ದ ಎರಡು ತೈಲ ಟ್ಯಾಂಕರ್ಗಳ ಮೇಲೆ ದಾಳಿ ನಡೆಸಿದೆ.
"ನಿನ್ನೆ ರಾತ್ರಿ, ಅಮೆರಿಕದಿಂದ ಪ್ರಚೋದಿಸಲ್ಪಟ್ಟ ಎರಡು ತೈಲ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯ ದಕ್ಷಿಣಕ್ಕೆ ಅಸುರಕ್ಷಿತ ಮಾರ್ಗದಿಂದ ತೆರಳಲು ಪ್ರಯತ್ನಿಸಿದವು. ಅವುಗಳಲ್ಲಿ ಒಂದರಲ್ಲಿ ತೀವ್ರವಾದ ಬೆಂಕಿ ಕಾಣಿಸಿಕೊಂಡ ನಂತರ, ಎರಡೂ ಹಡಗುಗಳು ಬೇಗನೆ ಹಿಂತಿರುಗಿದವು" ಎಂದು IRGC ಪ್ರಕಟಣೆಯಲ್ಲಿ ತಿಳಿಸಿದೆ.
"ಹಾರ್ಮುಜ್ ಜಲಸಂಧಿ ನಮ್ಮ ಭೂಮಿ ಮತ್ತು IRGCಯ ನೌಕಾಪಡೆಯ ನಾವಿಕರು ಅದರ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ. ಹೀಗಾಗಿ ಅದನ್ನು ದಾಟುವ ದುಸ್ಸಾಹಸ ಯಾರೂ ಮಾಡಬೇಡಿ. ಸಾವಿರಾರು ಕಿಲೋಮೀಟರ್ ದೂರದಿಂದ ಬಂದ ಅಪರಿಚಿತರಿಗೆ ಇದರಲ್ಲಿ ಹಸ್ತಕ್ಷೇಪ ಮಾಡಲು ನಾವು ಅವಕಾಶ ನೀಡುವುದಿಲ್ಲ" ಎಂದು ಹೇಳುವ ಮೂಲಕ IRGC ಕಾರ್ಯತಂತ್ರದ ಜಲಮಾರ್ಗದ ಮೇಲೆ ತನ್ನ ನಿಯಂತ್ರಣವನ್ನು ಪ್ರತಿಪಾದಿಸಿದೆ.
"ಸರ್ವಶಕ್ತ ದೇವರ ಸಹಾಯದಿಂದ, ಆಕ್ರಮಣಕಾರನನ್ನು ಇಂದು ಶಿಕ್ಷಿಸಲಾಗುವುದು" ಎಂದು ಆಕ್ರಮಣಕಾರನನ್ನು ಬೆಂಬಲಿಸುವ ದೇಶಗಳಿಗೆ IRGC ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



