ವಿದೇಶ

Hormuz ಜಲಸಂಧಿ: ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ದಾಳಿ; ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು!

ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಇರಾನ್‌ ಮೇಲೆ ದಾಳಿ ನಡೆಸಿದ ಬಳಿಕ, ಟೆಹ್ರಾನ್‌ ಹಾರ್ಮುಜ್ ಜಲಸಂಧಿಯಲ್ಲಿ ಪರಿಣಾಮಕಾರಿ ರೀತಿಯಲ್ಲಿ ನೌಕಾಯಾನ ನಿರ್ಬಂಧ ಹೇರಿದೆ.

Hormuz ಜಲಸಂಧಿ: ದಿಗ್ಬಂಧನ ಉಲ್ಲಂಘಿಸಿದ ಟ್ಯಾಂಕರ್‌ ಮೇಲೆ Iran ದಾಳಿ; ಸಮುದ್ರ ಮಧ್ಯದಲ್ಲೇ ಹೊತ್ತಿ ಉರಿದ ಹಡಗು!
ಹಾರ್ಮುಜ್ ಜಲಸಂಧಿ
Published On :

ವಿಶ್ವದ ಅತ್ಯಂತ ಕಾರ್ಯನಿರತ ಸಮುದ್ರ ಮಾರ್ಗಗಳಲ್ಲಿ ಒಂದಾದ ಹeರ್ಮುಜ್ ಜಲಸಂಧಿಯಲ್ಲಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನೌಕಾಪಡೆಯು ಟೋಗೊ (Togo) ದೇಶದ ಧ್ವಜ ಹೊಂದಿದ್ದ ‘ಟ್ರೆಂಡ್’ (Trend) ಹೆಸರಿನ ಬೃಹತ್ ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿ, ಅದನ್ನು ವಶಪಡಿಸಿಕೊಂಡಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್ ಶುಕ್ರವಾರ ಟೋಗೋ ಧ್ವಜ ಹೊಂದಿದ್ದ ತೈಲ ಟ್ಯಾಂಕರ್‌ವೊಂದರ ಮೇಲೆ ಹಾರ್ಮುಜ್ ಜಲಸಂಧಿಯಲ್ಲಿ ದಾಳಿ ನಡೆಸಿರುವುದಾಗಿ ಹೇಳಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಐಆರ್‌ಎನ್‌ಎ ವರದಿ ಮಾಡಿದೆ.

ಫೆಬ್ರವರಿ ಅಂತ್ಯದಲ್ಲಿ ಅಮೆರಿಕ ಮತ್ತು ಇಸ್ರೇಲ್‌ ಇರಾನ್‌ ಮೇಲೆ ದಾಳಿ ನಡೆಸಿದ ಬಳಿಕ, ಟೆಹ್ರಾನ್‌ ಹಾರ್ಮುಜ್ ಜಲಸಂಧಿಯಲ್ಲಿ ಪರಿಣಾಮಕಾರಿ ರೀತಿಯಲ್ಲಿ ನೌಕಾಯಾನ ನಿರ್ಬಂಧ ಹೇರಿದೆ.

ಜಲಸಂಧಿಯ ಮೂಲಕ ಸಾಗುವ ಹಡಗುಗಳಿಂದ ಶುಲ್ಕ ವಸೂಲಿ ಮಾಡಲು ಇರಾನ್‌ ಮುಂದಾಗಿದ್ದು, ತನ್ನ ನಿಗದಿತ ಮಾರ್ಗವನ್ನು ತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿರುವ ಹಡಗುಗಳ ಮೇಲೆ ದಾಳಿ ನಡೆಸುತ್ತಿದೆ.

“ಟೋಗೋ ಧ್ವಜ ಹೊಂದಿದ್ದ ‘ಟ್ರೆಂಡ್‌’ ಹೆಸರಿನ ತೈಲ ಟ್ಯಾಂಕರ್‌ ಅಕ್ರಮವಾಗಿ ಸಾಗಲು ಪ್ರಯತ್ನಿಸಿದ್ದರಿಂದ ಅದರ ಮೇಲೆ ದಾಳಿ ನಡೆಸಿ, ವಶಕ್ಕೆ ಪಡೆಯಲಾಗಿದೆ. ಈ ವೇಳೆ ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ” ಎಂದು ರೆವಲ್ಯೂಷನರಿ ಗಾರ್ಡ್ಸ್‌ ಹೇಳಿಕೆಯಲ್ಲಿ ತಿಳಿಸಿದೆ.

ಯುನೈಟೆಡ್ ಕಿಂಗ್‌ಡಮ್‌ ಮ್ಯಾರಿಟೈಮ್‌ ಟ್ರೇಡ್‌ ಆಪರೇಷನ್ಸ್‌ (ಯುಕೆಎಂಟಿಒ) ಗುರುವಾರ ಓಮನ್‌ನ ಖಸಬ್‌ನಿಂದ 16 ನಾಟಿಕಲ್‌ ಮೈಲಿ (29.6 ಕಿ.ಮೀ.) ಈಶಾನ್ಯ ಭಾಗದಲ್ಲಿರುವ ಹಾರ್ಮುಜ್ ಜಲಸಂಧಿಯಲ್ಲಿ “ಭದ್ರತಾ ಘಟನೆ” ನಡೆದಿದೆ ಎಂದು ಘೋಷಿಸಿತ್ತು.

ಆದರೆ, ಘಟನೆಯಲ್ಲಿ ಭಾಗಿಯಾಗಿರುವ ಹಡಗಿನ ಕುರಿತು ಯುಕೆಎಂಟಿಒ ಯಾವುದೇ ವಿವರ ನೀಡಿಲ್ಲ. ಹೀಗಾಗಿ ರೆವಲ್ಯೂಷನರಿ ಗಾರ್ಡ್ಸ್‌ ಉಲ್ಲೇಖಿಸಿರುವ ‘ಟ್ರೆಂಡ್‌’ ಹಡಗು ಮತ್ತು ಯುಕೆಎಂಟಿಒ ತಿಳಿಸಿರುವ ಘಟನೆಯಲ್ಲಿನ ಹಡಗು ಒಂದೇಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.