Shocking: ಕೌಟುಂಬಿಕ ಕಲಹ, ಸೇಡಿಗೆ 3 ತಿಂಗಳ ಕಂದಮ್ಮನ ಕಾಲು ಮುರಿದ ಅತ್ತೆ, ಭಯಾನಕ ಕೌರ್ಯ ಕ್ಯಾಮೆರಾದಲ್ಲಿ ಸೆರೆ! Video
32 ವರ್ಷದ ಮಹಿಳೆ ಮೂರು ತಿಂಗಳ ಸೋದರಳಿಯನ ಕಾಲನ್ನು ಬಲವಂತವಾಗಿ ಮುರಿದು ಹಾಕಿದ್ದಾಳೆ ಎನ್ನಲಾಗಿದೆ.

ಢಾಕಾ: ಕುಟುಂಬ ಕಲಹದ ಹಿನ್ನೆಲೆಯಲ್ಲಿ ದೂರ್ತ ಮಹಿಳೆಯೊಬ್ಬಳು ಮೂರು ತಿಂಗಳ ಪುಟ್ಟ ಮಗುವಿನ ಕಾಲು ಮುರಿದು ಹಾಕಿರುವ ಭೀಕರ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಬಾಂಗ್ಲಾದೇಶದ ನರ್ಸಿಂಗ್‌ದಿ ಜಿಲ್ಲೆಯ ಮಾಧಾಬ್ದಿ ಉಪಜಿಲ್ಲೆಯ ಅಮ್ದಿಯಾ ಯೂನಿಯನ್‌ನ ಚಾಂದ್‌ಗಾಂವ್ ಗ್ರಾಮದಲ್ಲಿ ಈ ಭೀಕರ ಘಟನೆ ನಡೆದಿದ್ದು, ಮಂಗಳವಾರ ಮಧ್ಯಾಹ್ನ ಈ ವಿಡಿಯೋ ವೈರಲ್ ಆದ ನಂತರ ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಸುಮಾರು ಐದು ದಿನಗಳ ಹಿಂದೆ ನಡೆದ ಕುಟುಂಬ ಕಲಹದ ವೇಳೆ 32 ವರ್ಷದ ಮಹಿಳೆ ಮೂರು ತಿಂಗಳ ಸೋದರಳಿಯನ ಕಾಲನ್ನು ಬಲವಂತವಾಗಿ ಮುರಿದು ಹಾಕಿದ್ದಾಳೆ ಎನ್ನಲಾಗಿದೆ. ಈ ದೃಶ್ಯವನ್ನು ಮಗುವಿನ ತಾಯಿ ತನ್ನ ಮೊಬೈಲ್ ಫೋನ್‌ನಲ್ಲಿ ದಾಖಲಿಸಿಕೊಂಡಿದ್ದು ಬಳಿಕ ಆ ವಿಡಿಯೋವನ್ನು ಸಂಬಂಧಿಕರಿಗೆ ಕಳುಹಿಸಲಾಗಿದೆ. ಅಲ್ಲಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಮಾಧಾಬ್ದಿ ಪೊಲೀಸ್ ಠಾಣೆಯ ಅಧಿಕಾರಿ ಮೊಹಮ್ಮದ್ ಕಮಾಲ್ ಹೊಸೇನ್ ಮಾತನಾಡಿ, "ಮಗುವಿನ ಕಾಲು ಮುರಿದಿಲ್ಲ ಎಂದು ಪೋಷಕರು ತಿಳಿಸಿದ್ದಾರೆ. ಆದರೆ ಮಗುವಿನ ಮೇಲೆ ಹಲ್ಲೆ ನಡೆದಿರುವುದನ್ನು ಅವರು ಒಪ್ಪಿಕೊಂಡಿದ್ದಾರೆ. ವಿಡಿಯೋ ಹೇಗೆ ವೈರಲ್ ಆಯಿತು ಮತ್ತು ಮಗುವಿಗೆ ಎಷ್ಟು ಪ್ರಮಾಣದ ಗಾಯವಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಮೂವರ ಬಂಧನ
ಪ್ರಕರಣ ಸಂಬಂಧ ಮಹಿಳೆಯ ಪತಿ ಕೌಸರ್ ಅಹ್ಮದ್ (40), ಮಾವ ಅಲ್ಮಾಸ್ ಮಿಯಾ (56) ಹಾಗೂ ಅತ್ತೆ ಶೆಫಾಲಿ ಬೇಗಂ (50) ಅವರನ್ನು ಪೊಲೀಸರು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಒಂದು ಮೊಬೈಲ್ ಫೋನ್‌ನ್ನೂ ಜಪ್ತಿ ಮಾಡಿದ್ದಾರೆ. ಆದರೆ ಆರೋಪಿತ ಮಹಿಳೆ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಗುವಿನ ಪೋಷಕರು ಈ ವಿಚಾರವನ್ನು ಕುಟುಂಬದೊಳಗೆ ಪರಸ್ಪರ ಬಗೆಹರಿಸಿಕೊಂಡಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ, ಘಟನೆಯಿಂದ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಇದೇ ವೇಳೆ, ಘಟನೆಯ ವಿಡಿಯೋವನ್ನು ಫೇಸ್‌ಬುಕ್‌ನಲ್ಲಿ ಸುಳ್ಳು ಮಾಹಿತಿ ಸೇರಿಸಿ ಹರಿಬಿಡಲಾಗುತ್ತಿದೆ ಎಂದು ಮಗುವಿನ ಪೋಷಕರು ಆರೋಪಿಸಿದ್ದಾರೆ. ಪ್ರಕರಣದ ತನಿಖೆ ಪೂರ್ಣಗೊಂಡ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರು ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



