ಅಮೆರಿಕ ಈ ರೀತಿ ಕಾಯುತ್ತಿದೆ...: ಫೋಟೋ ಮೂಲಕ ಇರಾನ್ ತಿರುಗೇಟು! ಪಾಕ್ ಮಧ್ಯಸ್ಥಿಕೆ ಫೇಲ್?
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಇರಾನ್ ಜೊತೆ ಶಾಂತಿ ಮಾತುಕತೆಗಳಿಗಾಗಿ ಇಸ್ಲಾಮಾಬಾದ್‌ಗೆ ತಮ್ಮ ಮುಂಬರುವ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ.

ಇಂಡೋನೇಷ್ಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಈ ಕೆಲವು ಫೋಟೋಗಳನ್ನು X ನಲ್ಲಿ ಹಂಚಿಕೊಂಡಿದ್ದು, "ಮಾತುಕತೆಗಾಗಿ ಕಾಯುತ್ತಿದ್ದೇನೆ..." ಎಂದು ಅಮೆರಿಕಕ್ಕೆ ವ್ಯಂಗ್ಯವಾಗಿ ತಿರುಗೇಟು ನೀಡಿದೆ.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಇರಾನ್ ಜೊತೆ ಶಾಂತಿ ಮಾತುಕತೆಗಳಿಗಾಗಿ ಇಸ್ಲಾಮಾಬಾದ್‌ಗೆ ತಮ್ಮ ಮುಂಬರುವ ರಾಜತಾಂತ್ರಿಕ ಕಾರ್ಯಾಚರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ. ಇದರ ಬೆನ್ನಲ್ಲೇ ಇರಾನ್, ಜೆಡಿ ವ್ಯಾನ್ಸ್ ಅವರ ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದು, ಅದರಲ್ಲಿ ಅವರು ಮಾತುಕತೆಗಾಗಿ ಕಾದು ಕಾದು ಸುಸ್ತಾಗಿ ಮಲಗಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ "ಕದನ ವಿರಾಮ ವಿಸ್ತರಿಸುವುದಾಗಿ" ಘೋಷಣೆ ಮಾಡಿದ್ದಾರೆ ಮತ್ತು ಟೆಹ್ರಾನ್‌ನಿಂದ "ಏಕೀಕೃತ ಪ್ರಸ್ತಾವನೆ"ಗಾಗಿ ಅವರ ಬೇಡಿಕೆಯನ್ನು ಅನುಸರಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

"ಮಂಗಳವಾರ ನಿಗದಿಯಾಗಿದ್ದ" ಉನ್ನತ ಮಟ್ಟದ ಭೇಟಿಯನ್ನು ಈಗ "ಯಾವುದೇ ಹೊಸ ದಿನಾಂಕಗಳನ್ನು ನಿಗದಿಪಡಿಸದೆ ರದ್ದುಗೊಳಿಸಲಾಗಿದೆ" ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಸ್ಥಿಕೆಯಲ್ಲಿ ಪಾಕಿಸ್ತಾನ ಫೇಲ್?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕಾಲದಲ್ಲಿ ಇಸ್ಲಾಮಾಬಾದ್, ‘ಎಲ್ಲವನ್ನೂ ನಿರ್ವಹಿಸಬಹುದು’ ಎಂದು ಟೆಹ್ರಾನ್‌ಗೆ ಪಾಕಿಸ್ತಾನ ಭರವಸೆ ನೀಡಿತ್ತು ಎಂದು ಗುಪ್ತಚರ ಮೂಲಗಳು ಹೇಳುತ್ತವೆ.
ಆದರೆ ಇತ್ತೀಚಿನ ಅಸಿಮ್ ಮುನೀರ್ ಅವರ ಟೆಹ್ರಾನ್ ಭೇಟಿಯಲ್ಲಿ ಇರಾನ್ ನಾಯಕತ್ವ, ಅಮೆರಿಕಾಗೆ ಕಳಿಸಬೇಕಿದ್ದ ಕೆಲವು ಬೇಡಿಕೆಗಳ ಪಟ್ಟಿಯನ್ನು ಪಾಕಿಸ್ತಾನ ಸಂಪೂರ್ಣವಾಗಿ ತಿಳಿಸಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇದರಿಂದ ಪಾಕಿಸ್ತಾನದ ಮೇಲೆ ಇರಾನ್‌ನ ನಂಬಿಕೆ ಇನ್ನಷ್ಟು ಕುಸಿದಿದ್ದು, ಪಾಕ್ ಮಧ್ಯಸ್ಥಿಕೆಯಲ್ಲಿ ನಡೆಯಬೇಕಿದ್ದ ಮತ್ತೊಂದು ಮಾತುಕತೆ ಮುರಿದು ಬೀಳುವ ಸಾಧ್ಯತೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



