Video: 'ಇದು ಅತ್ಯಂತ ನೋವಿನ ದಿನ'; ಕಣ್ಣೀರಿಟ್ಟ ನೀಲಿ ಚಿತ್ರತಾರೆ ಮಿಯಾ ಖಲೀಫಾ
ಲೆಬನಾನ್ ಮೇಲೆ ದಾಳಿ ಬಳಿಕ ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕಣ್ಣೀರು ಹಾಕಿದ್ದಾರೆ.

ಸುಮಾರು 40 ದಿನಗಳ ಭೀಕರ ಯುದ್ಧದ ಬಳಿಕ ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾಗಿದ್ದು, ಇದರ ಬೆನ್ನಲ್ಲೇ ಇಸ್ರೇಲ್ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 250ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಲೆಬನಾನ್ ಮೇಲೆ ದಾಳಿ ಬಳಿಕ ನೀಲಿ ಚಿತ್ರಗಳ ಮಾಜಿ ತಾರೆ ಮಿಯಾ ಖಲೀಫಾ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಕಣ್ಣೀರು ಹಾಕಿದ್ದಾರೆ.
ಸದ್ಯ ಅಮೆರಿಕದಲ್ಲಿ ನೆಲೆಸಿರುವ ಮಿಯಾ ಖಲೀಫಾ ಅವರು ಮೂಲತಃ ಲೆಬನಾನ್ನವರು. ಹೀಗಾಗಿ ತಾಯ್ನಾಡಿನ ಮೇಲೆ ನಡೆದ ಬಾಂಬ್ ದಾಳಿಯನ್ನು ಮಿಯಾ ಖಂಡಿಸಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಅಳುತ್ತಲೇ ಮಾತನಾಡಿರುವ ಮಿಯಾ ಖಲೀಫಾ, ‘ಇದು ಅತ್ಯಂತ ನೋವಿನ ದಿನ. ನಾವು ದಾಳಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ನೋಡುತ್ತಿರುವುದನ್ನು ಇಷ್ಟು ವರ್ಷಗಳಲ್ಲಿ ನೋಡಿಯೇ ಇಲ್ಲ. ನರಮೇಧವನ್ನೇ ನಡೆಸಲಾಗುತ್ತಿದೆ. ಕಳೆದೊಂದು ದಶಕದಲ್ಲಿ ಇಂಥಹಾ ನರಮೇಧವನ್ನು ಯಾರೂ ನೋಡಿಲ್ಲ. ಕೇವಲ 10 ನಿಮಿಷದಲ್ಲಿ 160 ವಾಯುದಾಳಿಗಳನ್ನು ಲೆಬನಾನ್ ಮೇಲೆ ಮಾಡಲಾಗಿದೆ. ಶಾಲೆ, ಆಸ್ಪತ್ರೆ, ಸಾರ್ವಜನಿಕರು ವಾಸಿಸುವ ಪ್ರದೇಶಗಳು, ಸ್ಮಶಾನಗಳನ್ನು ಗುರಿ ಮಾಡಿಕೊಂಡು ಇಸ್ರೇಲ್ ದಾಳಿ ನಡೆಸಿದೆ, ಅದೂ ಕದನ ವಿರಾಮದ ಅವಧಿಯಲ್ಲಿ’ ಎಂದಿದ್ದಾರೆ ಮಿಯಾ ಖಲೀಫಾ ಹೇಳಿದ್ದಾರೆ.
‘ನನ್ನ ತೆರಿಗೆ ಹಣವನ್ನು(ಅಮೆರಿಕದಲ್ಲಿ ಅವರು ಪಾವತಿಸುವ ಹಣ) ನನ್ನ ಮಾತೃಭೂಮಿಯನ್ನು ಧ್ವಂಸ ಮಾಡಲು ಬಳಸಲಾಗುತ್ತಿದೆ. ಇದಕ್ಕೆ ಹೇಗೆ ನಾನು ಪ್ರತಿಕ್ರಿಯಿಸಬೇಕು ಅರ್ಥವಾಗುತ್ತಿಲ್ಲ. ನನಗೆ ಏನು ಹೇಳಬೇಕು ಎಂದು ಸಹ ತೋಚುತ್ತಿಲ್ಲ. ನನಗೆ ಪದಗಳೇ ಬರುತ್ತಿಲ್ಲ. ಇಷ್ಟು ದಿನ ನನಗೆ ಸರಿ ಎನಿಸುವ ಬೇರೆಯವರ ಅಭಿಪ್ರಾಯಗಳನ್ನು ನಾನು ಹಂಚಿಕೊಳ್ಳುತ್ತಿದ್ದೆ. ಆದರೆ ಈಗ ನಾನೇ ಮಾತನಾಡುತ್ತಿದ್ದೇನೆ’ ಎಂದಿದ್ದಾರೆ ಮಿಯಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



