ವಿದೇಶ

ಕದನ ವಿರಾಮ ಘೋಷಣೆಯಲ್ಲೂ ಪಾಕ್ ಎಡವಟ್ಟು: 'Draft' ಪದದ ಜೊತೆಗೆ ಟ್ವೀಟ್; ಷರೀಫ್ ಫುಲ್ ಟ್ರೋಲ್..!

Draft ಅಂದರೆ ಯಾರೋ ಬೇರೆಯವರು ಸಿದ್ಧಪಡಿಸಿಕೊಟ್ಟಿದ್ದ ಸಂದೇಶವನ್ನು ಅವರ ಅಧಿಕಾರಿಗಳು ಹಾಗೆಯೇ ಕಾಪಿ ಮಾಡಿ ಪೇಸ್ಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಕಂಡು ಬಂದಿರುವ Draft ಪದದಿಂದ ಇದು ಬಹಿರಂಗವಾಗಿದೆ.

ಕದನ ವಿರಾಮ ಘೋಷಣೆಯಲ್ಲೂ ಪಾಕ್ ಎಡವಟ್ಟು: 'Draft' ಪದದ ಜೊತೆಗೆ ಟ್ವೀಟ್; ಷರೀಫ್ ಫುಲ್ ಟ್ರೋಲ್..!
ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್
Published On :

ಇಸ್ಲಾಮಾಬಾದ್‌: ಅಮೆರಿಕಾ ಮತ್ತು ಇರಾನ್‌ ನಡುವೆ ಕದನ ವಿರಾಮ ಘೋಷಣೆ ಮಾಡಿ ದೊಡ್ಡ ಸಾಧನೆ ಮಾಡಿದಂತೆ ಬಿಂಬಿಸುತ್ತಿರುವ ಪಾಕಿಸ್ತಾನ ಪ್ರಧಾನಮಂತ್ರಿ ಶೆಹಬಾಜ್ ಷರೀಫ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ಮತ್ತು ಟ್ರೋಲ್‌ಗೆ ಗುರಿಯಾಗಿದ್ದಾರೆ.

ಘಟನೆಗೆ ಕಾರಣವಾದದ್ದು ಅವರ ಅಧಿಕೃತ ಎಕ್ಸ್ (ಹಿಂದಿನ ಟ್ವಿಟ್ಟರ್) ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್. ಆ ಪೋಸ್ಟ್‌ನ ಆರಂಭದಲ್ಲೇ “Draft – Pakistan’s PM Message on X” ಎಂಬ ಸಾಲು ಹಾಗೆಯೇ ಉಳಿದಿರುವುದು ಟೀಕೆಗಳಿಗೆ ಕಾರಣವಾಗಿದೆ.

Draft ಅಂದರೆ ಯಾರೋ ಬೇರೆಯವರು ಸಿದ್ಧಪಡಿಸಿಕೊಟ್ಟಿದ್ದ ಸಂದೇಶವನ್ನು ಅವರ ಅಧಿಕಾರಿಗಳು ಹಾಗೆಯೇ ಕಾಪಿ ಮಾಡಿ ಪೇಸ್ಟ್ ಮಾಡಿದ್ದಾರೆ. ಟ್ವೀಟ್ ನಲ್ಲಿ ಕಂಡು ಬಂದಿರುವ Draft ಪದದಿಂದ ಇದು ಬಹಿರಂಗವಾಗಿದೆ.

ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಪಾಕ್ ಕೂಡಲೇ ತಪ್ಪು ಸರಿಪಡಿಸಿ, ಮರಳಿ ಪೋಸ್ಟ್‌ ಮಾಡಿದ್ದಾರೆ. ಆದರೆ, ಎಕ್ಸ್‌ನ ‘Edit History’ ಸೌಲಭ್ಯದಿಂದಾಗಿ ಮೊದಲಿನ ಪೋಸ್ಟ್‌ನ ಮೂಲ ರೂಪ ಹಾಗೆಯೇ ಉಳಿದಿದೆ. ಇದನ್ನು ಸ್ಕ್ರೀನ್‌ಶಾಟ್‌ ತೆಗೆದುಕೊಂಡು ನೆಟ್ಟಿಗಲು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ನಂತರ ಪೋಸ್ಟ್'ನ್ನೇ ಡಿಲೀಟ್ ಮಾಡಿ, ಮರಳಿ ಹೊಸ ಪೋಸ್ಟ್'ನ್ನು ಹಂಚಿಕೊಂಡಿದ್ದಾರೆ. ಶೆಹಬಾಜ್ ಷರೀಫ್ ಖಾತೆಯಿಂದ ಮೊದಲ ಪೋಸ್ಟ್‌ ಇಂದು ರಾತ್ರಿ 12:46ಕ್ಕೆ ಪೋಸ್ಟ್‌ ಮಾಡಲಾಗಿತ್ತು.

ಡ್ರಾಫ್ಟ್ ಪೋಸ್ಟ್‌ ವಿವಾದದಿಂದಾಗಿ ಪಾಕಿಸ್ತಾನದ ರಾಜತಾಂತ್ರಿಕ ಸಂವಹನದ ಮೇಲಿನ ವಿಶ್ವಾಸಾರ್ಹತೆಯನ್ನು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.

ಈ ತಪ್ಪಿನಿಂದಾಗಿ, ಪ್ರಧಾನಿ ಷರೀಫ್ ಸ್ವತಃ ಸಂದೇಶ ಬರೆಯುತ್ತಿಲ್ಲ, ಬದಲಿಗೆ ಅಮೆರಿಕದ ಅಧಿಕಾರಿಗಳು ಸಿದ್ಧಪಡಿಸಿದ ʻಸ್ಕ್ರಿಪ್ಟ್ʼ ಅನ್ನು ಪೇಸ್ಟ್‌ ಮಾಡಿದ್ದಾರೆ ಎಂದು ನೆಟ್ಟಿಗರು ಟ್ರೋಲ್‌ ಮಾಡುತ್ತಿದ್ದಾರೆ.

ಇನ್ನೂ ಕೆಲವರು “ಒಂದು ಟ್ವೀಟ್ ಸರಿಯಾಗಿ ಹಾಕಲು ಆಗದ ನಾಯಕ, ಜಾಗತಿಕ ಮಟ್ಟದಲ್ಲಿ ಶಾಂತಿ ಮಾತುಕತೆ ಹೇಗೆ ನಡೆಸುತ್ತಾರೆ?” ಎಂದು ಕಾಲೆಳೆಯುತ್ತಿದ್ದಾರೆ.

ಮತ್ತೊಬ್ಬರು, ಡೊನಾಲ್ಡ್ ಟ್ರಂಪ್ ಅವರ ಪ್ರಭಾವಕ್ಕೆ ಒಳಗಾಗಿರುವ ‘ಅಮೆರಿಕಾದ ಬೊಂಬೆ’ ಎಂಬ ಟೀಕೆಯನ್ನೂ ಮಾಡಿದ್ದಾರೆ.

Story image

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.