ವಿದೇಶ

ಟೇಕಾಫ್ ಆದ ತಕ್ಷಣ ವಿಮಾನದ ಇಂಜಿನ್ ನಲ್ಲಿ ಬೆಂಕಿ! ಪ್ರಯಾಣಿಕರ ಚೀರಾಟ, ಕೂಗಾಟ; ಮುಂದೇನಾಯ್ತು ಈ Video ನೋಡಿ...

ಅಟ್ಲಾಂಟಾ ಮಾರ್ಗದ ವಿಮಾನದಲ್ಲಿ 272 ಪ್ರಯಾಣಿಕರು ಮತ್ತು 14 ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಪೈಲಟ್ ಕೆಲವೇ ನಿಮಿಷಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಮೂಲಕ ಸಂಭಾವ್ಯ ಭಾರಿ ದುರಂತವೊಂದನ್ನು ತಪ್ಪಿಸಿದ್ದಾರೆ.

ಟೇಕಾಫ್ ಆದ ತಕ್ಷಣ ವಿಮಾನದ ಇಂಜಿನ್ ನಲ್ಲಿ ಬೆಂಕಿ! ಪ್ರಯಾಣಿಕರ ಚೀರಾಟ, ಕೂಗಾಟ; ಮುಂದೇನಾಯ್ತು ಈ Video ನೋಡಿ...
ಟೇಕಾಫ್ ಆದ ತಕ್ಷಣ ವಿಮಾನದಲ್ಲಿ ಬೆಂಕಿಯ ಚಿತ್ರ
Published On :

ರಿಯೊ ಡಿ ಜನೈರೊ: ಬ್ರೆಜಿಲ್‌ನ ಸಾವೊ ಪಾಲೊ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ಡೆಲ್ಟಾ ಏರ್‌ಲೈನ್ಸ್ ವಿಮಾನದ ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ವಿಮಾನದ ರೆಕ್ಕೆಗಳು ಹೊತ್ತಿ ಉರಿದಿದೆ.

ಅಟ್ಲಾಂಟಾ ಮಾರ್ಗದ ವಿಮಾನದಲ್ಲಿ 272 ಪ್ರಯಾಣಿಕರು ಮತ್ತು 14 ಸಿಬ್ಬಂದಿಗಳಿದ್ದರು ಎನ್ನಲಾಗಿದೆ. ಪೈಲಟ್ ಕೆಲವೇ ನಿಮಿಷಗಳಲ್ಲಿ ತುರ್ತು ಲ್ಯಾಂಡಿಂಗ್ ಮಾಡುವ ಮೂಲಕ ಸಂಭಾವ್ಯ ಭಾರಿ ದುರಂತವೊಂದನ್ನು ತಪ್ಪಿಸಿದ್ದಾರೆ.

ಭಾನುವಾರ ಈ ಘಟನೆ ನಡೆದಿದ್ದು, ವಿಮಾನದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗೌರುಲ್ಹೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆದ ತಕ್ಷಣ ಅದರ ಎಡಭಾಗದಲ್ಲಿ ಬೆಂಕಿ ಹೊತ್ತಿ ಉರಿಯುವುದು ವಿಡಿಯೋದಲ್ಲಿ ಕಾಣಿಸುತ್ತದೆ.

"ಡೆಲ್ಟಾ 104 ವಿಮಾನದ ರೆಕ್ಕೆಯಲ್ಲಿ ಬೆಂಕಿ ಉಂಟಾಗಿರುವುದನ್ನು ಏರ್ ಟ್ರಾಫಿಕ್ ಕಂಟ್ರೋಲ್‌ನ ವ್ಯಕ್ತಿಯೊಬ್ಬರು ವಿಮಾನದ ಪೈಲಟ್‌ಗೆ ಹೇಳುವುದನ್ನು ವಿಡಿಯೋದಲ್ಲಿ ಕೇಳಬಹುದು. ತದನಂತರ ಕೂಡಲೇ ವಾಪಾಸ್ಸಾಗಬೇಕಾದ ಅಗತ್ಯವಿದೆ ಎಂದು ಪೈಲಟ್ ಹೇಳುತ್ತಾರೆ.

ಟೇಕಾಫ್ ಆದ ಕೂಡಲೇ ವಿಮಾನದ ಇಂಜಿನ್‌ನಿಂದ ಬೆಂಕಿ ಕಿಡಿ ಹಾಗೂ ಕ್ಯಾಬಿನೊಳಗೆ ಭಯಭೀತರಾದ ಪ್ರಯಾಣಿಕರು ಜೀವಭಯದಿಂದ ಕೂಗಾಡುವುದನ್ನು ಮತ್ತೊಂದು ವೀಡಿಯೊ ತೋರಿಸುತ್ತದೆ.

ಅದೃಷ್ಟವಶಾತ್ ವಿಮಾನ ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದ್ದು, ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ತಂಡಗಳು ಬೆಂಕಿಯನ್ನು ನಂದಿಸಿವೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ವಿಮಾನದ ಎಡ ಇಂಜಿನ್‌ನಲ್ಲಿ ಯಾಂತ್ರಿಕ ಸಮಸ್ಯೆಯಿಂದ" ಬೆಂಕಿ ಸಂಭವಿಸಿದೆ ಡೆಲ್ಟಾ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.