ಕೆನಡಾದಲ್ಲಿ ಭಾರತೀಯ ಮೂಲದ ಯುವತಿ ಹತ್ಯೆ: ಆರೋಪಿ ಭಾರತಕ್ಕೆ ಪರಾರಿ ಸಾಧ್ಯತೆ?
ಅಮನ್‌ಪ್ರೀತ್ ಅವರ ಮೃತದೇಹ ಪತ್ತೆಯಾದ ಕೆಲವೇ ದಿನಗಳಲ್ಲಿ ಸಿಂಗ್ ದೇಶದಿಂದ ಪರಾರಿಯಾಗಿರುವ ಮಾಹಿತಿಯಿದೆ ಎಂದು ನಯಾಗರಾ ಪ್ರಾದೇಶಿಕ ಪೊಲೀಸ್ ಸೇವೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನವದೆಹಲಿ: ಕೆನಡಾದಲ್ಲಿ ಕಳೆದ ವಾರ ಭಾರತೀಯ ಮೂಲದ 27 ವರ್ಷದ ಯುವತಿ ನಂತರ ಭಾರತೀಯ ಮೂಲದ ವ್ಯಕ್ತಿಯ ವಿರುದ್ಧ ಕೆನಡಾದಲ್ಲಿ ಬಂಧನ ವಾರಂಟ್ ಹೊರಡಿಸಲಾಗಿದೆ.
ಪಂಜಾಬಿನ ಯುವತಿ ಅಮನ್‌ಪ್ರೀತ್ ಸೈನಿ ಹತ್ಯೆ ಪ್ರಕರಣದಲ್ಲಿ ಬ್ರಾಂಪ್ಟನ್ ನಿವಾಸಿ, 27 ವರ್ಷದ ಮನ್‌ಪ್ರೀತ್ ಸಿಂಗ್ ಪೊಲೀಸರಿಗೆ ಬೇಕಾಗಿದ್ದಾನೆ. ಅಕ್ಟೋಬರ್ 21 ರಂದು ಲಿಂಕನ್ ಪಾರ್ಕ್‌ನಲ್ಲಿ ಸೈನಿ ಅವರ ಮೃತದೇಹ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
"ಅಮನ್‌ಪ್ರೀತ್ ಅವರ ಮೃತದೇಹ ಪತ್ತೆಯಾದ ಕೆಲವೇ ದಿನಗಳಲ್ಲಿ ಸಿಂಗ್ ದೇಶದಿಂದ ಪರಾರಿಯಾಗಿರುವ ಮಾಹಿತಿಯಿದೆ ಎಂದು ನಯಾಗರಾ ಪ್ರಾದೇಶಿಕ ಪೊಲೀಸ್ ಸೇವೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ಯುವತಿ ಮೇಲಿನ ದಾಳಿ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ. ಸಿಂಗ್ ರೇಖಾಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದು, ಕೂಡಲೇ 911 ಗೆ ಕರೆ ಮಾಡಿ" ಎಂದು ಪೊಲೀಸರು ತಿಳಿಸಿದ್ದಾರೆ. ಸಿಂಗ್ ಅವರ ಕುಟುಂಬ ಪಂಜಾಬ್‌ನಿಂದ ಭಾರತಕ್ಕೆ ಓಡಿಹೋಗಿದೆ ಎಂದು ಮೂಲಗಳು NDTV ಗೆ ತಿಳಿಸಿವೆ.
ಇದೀಗ ಆತನ ಬಂಧನಕ್ಕಾಗಿ ಕೆನಡಾದ ಭದ್ರತಾ ಏಜೆನ್ಸಿಗಳು ಭಾರತೀಯ ಏಜೆನ್ಸಿಗಳನ್ನು ಸಂಪರ್ಕಿಸಿವೆ ಎಂದು ಮೂಲಗಳು ತಿಳಿಸಿವೆ. ಮೂಲತಃ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯವರಾದ ಸೈನಿ ಅವರು ಕಳೆದ ಕೆಲವು ವರ್ಷಗಳಿಂದ ಟೊರೊಂಟೊದಲ್ಲಿ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



