ಜೈಲಲ್ಲಿ Imran Khan ಹತ್ಯೆ ಆರೋಪ: 'ಕೂದಲು ಹಿಡಿದೆಳೆದು ನೆಲಕ್ಕೆ ತಳ್ಳಿದ್ರು'; ಅಫ್ರಿದಿ ಮೇಲೆ ಪಾಕಿಸ್ತಾನ ಪೊಲೀಸರ ಹಲ್ಲೆ, Video Viral
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಾಗಿರುವುದಕ್ಕೆ ಪುರಾವೆ ನೀಡಿ ಎಂದು ಇಮ್ರಾನ್ ಖಾನ್ ಬೆಂಬಲಿಗರು ಪಾಕಿಸ್ತಾನದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಸಿದ್ದಾರೆ.

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರನ್ನು ಜೈಲಲ್ಲೇ ಹತ್ಯೆ ಮಾಡಲಾಗಿದೆ ಎಂಬ ಆರೋಪಗಳು ಭುಗಿಲೇಳುತ್ತಿದ್ದಂತೆಯೇ ಈ ಕುರಿತು ನಡೆದ ಪ್ರತಿಭಟನೆ ವೇಳೆ ಅಫ್ರಿದಿ ಅವರನ್ನು ಹಿಡಿದೆಳೆದು ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೀವಂತವಾಗಿರುವುದಕ್ಕೆ ಪುರಾವೆ ನೀಡಿ ಎಂದು ಇಮ್ರಾನ್ ಖಾನ್ ಬೆಂಬಲಿಗರು ಪಾಕಿಸ್ತಾನದಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆಸಿದ್ದಾರೆ. ಈ ನಡುವೆ ಇಮ್ರಾನ್ ಖಾನ್ ಪುತ್ರ ಕಾಸಿಮ್ ಖಾನ್ ತಮ್ಮ ತಂದೆ ಜೈಲಿನಲ್ಲಿ ಜೀವಂತವಾಗಿದ್ದಾರೆ ಎಂಬುದಕ್ಕೆ ಪುರಾವೆ ನೀಡುವಂತೆ ಒತ್ತಾಯಿಸಿದ್ದಾರೆ. ಇಮ್ರಾನ್ ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದು ಯಾರಿಗೂ ತಿಳಿದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಅವಧಿಯಲ್ಲಿ, ಕುಟುಂಬ ಸದಸ್ಯರು ಅಥವಾ ಅವರ ಚಿಕ್ಕಮ್ಮ ಸೇರಿದಂತೆ ನಿಕಟ ಸಂಬಂಧಿಗಳಿಗೆ ಸಹ ಸಂಪರ್ಕಕ್ಕೆ ಅವಕಾಶ ನೀಡಲಾಗಿಲ್ಲ. ಈ ಕ್ರಮಗಳು ಭದ್ರತಾ ಕಾರಣಗಳಿಂದಾಗಿಲ್ಲ, ಬದಲಾಗಿ ಇಮ್ರಾನ್ ಖಾನ್ ಅವರ ನಿಜವಾದ ಸ್ಥಿತಿಯನ್ನು ಕುಟುಂಬ ಮತ್ತು ಸಾರ್ವಜನಿಕರಿಂದ ಮರೆಮಾಚುವ ಉದ್ದೇಶಪೂರ್ವಕ ಕ್ರಮಗಳಾಗಿವೆ ಎಂದು ಖಾಸಿಮ್ ಆರೋಪಿಸಿದ್ದಾರೆ.
ಮಾಜಿ ಪ್ರಧಾನಿಯನ್ನು ಭೇಟಿಯಾಗಲು ನಿಗದಿಯಾಗಿದ್ದ ಪಕ್ಷದ ನಾಯಕರಿಗೆ ಪ್ರವೇಶ ನಿರಾಕರಿಸಲಾಗಿದೆ ಮತ್ತು ಅವರ ಯೋಗಕ್ಷೇಮದ ಬಗ್ಗೆ ಕುಟುಂಬಕ್ಕೆ ಯಾವುದೇ ವಿಶ್ವಾಸಾರ್ಹ ಮಾಹಿತಿ ಇಲ್ಲ ಎಂದು ಇಮ್ರಾನ್ ಖಾನ್ ಅವರ ಸಹೋದರಿ ನೊರೆನ್ ನಿಯಾಜಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಮ್ರಾನ್ ಖಾನ್ ನಿಧನರಾಗಿದ್ದಾರೆ ಎಂದು ಹೇಳುವ ಸುಳ್ಳು ವರದಿಗಳು ಸಾಮಾಜಿಕ ಮಾಧ್ಯಮದಲ್ಲಿ ಹರಡಿದ್ದು, ಕುಟುಂಬಕ್ಕೆ ಹೆಚ್ಚುವರಿ ಸಂಕಷ್ಟವನ್ನುಂಟುಮಾಡಿದೆ. ಕುಟುಂಬವನ್ನು ನಿರ್ಬಂಧಿಸಲು ಮತ್ತು ಅವರಿಗೆ ಇಷ್ಟವಾದಂತೆ ವರ್ತಿಸಲು ಪೊಲೀಸರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಫ್ರಿದಿ ಮೇಲೆ ಹಲ್ಲೆ
ಏತನ್ಮಧ್ಯೆ ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನ ಹೊರಗೆ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಪರವಾಗಿ ಪ್ರತಿಭಟನೆ ಮಾಡುತ್ತಿದ್ದ ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಸೊಹೇಲ್ ಅಫ್ರಿದಿ ಮೇಲೆ ಪೊಲೀಸರು ಹಲ್ಲೆ ನಡೆಸಲಾಗಿದೆ.
ಭದ್ರತೆಯಲ್ಲಿ ತೊಡಗಿದ್ದ ಪೊಲೀಸರು ಅವರ ಕೂದಲನ್ನು ಹಿಡಿದೆಳೆದು ನೆಲಕ್ಕೆ ತಳ್ಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಫ್ರಿದಿ ಮತ್ತು ಅವರ ಬೆಂಬಲಿಗರು ಅಡಿಯಾಲ ಜೈಲಿನ ಹೊರಗೆ ಜಮಾಯಿಸಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.
ಸೇನೆಯ ನಿರ್ದೇಶನ
ಪಾಕಿಸ್ತಾನ ಸೇನೆಯ ನಿರ್ದೇಶನದ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಮುಲ್ತಾನ್‌ನ ಶಿಯಾ ಧರ್ಮಗುರು ಅಲ್ಲಮ ನಾಸಿರ್ ಅಬ್ಬಾಸ್ ಕೂಡ ಜೈಲಿನ ಹೊರಗೆ ನಡೆದ ಧರಣಿ ಪ್ರತಿಭಟನೆಯಲ್ಲಿ ಅಫ್ರಿದಿ ಜೊತೆ ಸೇರಿಕೊಂಡರು. ಜೈಲು ಆಡಳಿತವು ಮಾತುಕತೆಯ ಮೂಲಕ ಪರಿಸ್ಥಿತಿಯನ್ನು ಹದಗೆಡಿಸಲು ಪ್ರಯತ್ನಿಸುತ್ತಿದೆ. ಅಫ್ರಿದಿ ಮತ್ತು ಇತರ ಪ್ರತಿಭಟನಾಕಾರರೊಂದಿಗೆ ಮಾತುಕತೆಗಾಗಿ ಜೈಲು ಅಧಿಕಾರಿಗಳು ಪ್ರತಿನಿಧಿಯನ್ನು ಕಳುಹಿಸಿದ್ದಾರೆ ಎಂಬ ವರದಿಗಳು ಬರುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



