ಮೆಕ್ಸಿಕೊದಿಂದ ಆಮದು ಆಗುವ ವಸ್ತುಗಳ ಮೇಲೆ ಏಪ್ರಿಲ್ ವರೆಗೆ ಸುಂಕ ಹೇರಿಕೆ ಇಲ್ಲ: ಡೊನಾಲ್ಡ್ ಟ್ರಂಪ್
ಫೆಬ್ರವರಿ ಆರಂಭದಲ್ಲಿ ಆಮದು ತೆರಿಗೆಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಲಾಗಿ ಒಂದು ತಿಂಗಳ ಕಾಲ ಮುಂದೂಡಲಾಗಿತ್ತು. ಇದೀಗ ಸುಂಕ ಹೇರಿಕೆಯನ್ನು ಮುಂಡೂಡುತ್ತಿರುವುದು ಇದು ಎರಡನೇ ಸಲವಾಗಿದೆ.

ವಾಷಿಂಗ್ಟನ್: ಸುಂಕ ಸಮರ ಪರಿಣಾಮದ ವ್ಯಾಪಕ ಭೀತಿಯ ನಡುವೆ, ಮೆಕ್ಸಿಕೋದ ಹೆಚ್ಚಿನ ಸರಕುಗಳ ಮೇಲಿನ ಶೇಕಡಾ 25ರಷ್ಟು ಆಮದು ಸುಂಕ ವಿಧಿಸುವ ಕ್ರಮವನ್ನು ಒಂದು ತಿಂಗಳ ಕಾಲ ಮುಂದೂಡಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಕೆನಡಾ ಮತ್ತು ಮೆಕ್ಸಿಕೋ ದೇಶಗಳ ಬಹುತೇಕ ಸರಕುಗಳ ಮೇಲೆ ಸುಂಕ ವಿಧಿಸುವ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಮೊದಲೇ ಹೇಳಿದ್ದರು. ಆ ಬಗ್ಗೆ ನಿನ್ನೆ ಅಧ್ಯಕ್ಷ ಟ್ರಂಪ್ ಅಧಿಕೃತವಾಗಿ ತಿಳಿಸಿದ್ದಾರೆ. ಕೆನಡಾದ ಮೇಲೆ ವಿಧಿಸಲಾದ ಹೊಸ ಸುಂಕಗಳ ಕುರಿತು ಯಾವುದೇ ಬದಲಾವಣೆಯನ್ನು ಘೋಷಿಸಲಾಗಿಲ್ಲ.
ಫೆಬ್ರವರಿ ಆರಂಭದಲ್ಲಿ ಆಮದು ತೆರಿಗೆಗಳನ್ನು ಮೊದಲ ಬಾರಿಗೆ ಪ್ರಸ್ತಾಪಿಸಲಾಗಿ ಒಂದು ತಿಂಗಳ ಕಾಲ ಮುಂದೂಡಲಾಗಿತ್ತು. ಇದೀಗ ಸುಂಕ ಹೇರಿಕೆಯನ್ನು ಮುಂಡೂಡುತ್ತಿರುವುದು ಇದು ಎರಡನೇ ಸಲವಾಗಿದೆ. ಟ್ರಂಪ್ ಅವರು ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಕೆನಡಾ ಮತ್ತು ಮೆಕ್ಸಿಕೋ ಜೊತೆ ಮಾತುಕತೆ ನಡೆಸಿದ ವ್ಯಾಪಾರ ಒಪ್ಪಂದಕ್ಕೆ ಅನುಗುಣವಾಗಿರುವ ಮೆಕ್ಸಿಕೋದ ಸರಕುಗಳಿಗೆ ಹಿಂತೆಗೆತ ಅನ್ವಯಿಸುತ್ತದೆ.
ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರೊಂದಿಗೆ ಮಾತುಕತೆ ನಡೆಸಿದ ನಂತರ, ಯುಎಸ್ ಎಎಂಸಿಎ ಒಪ್ಪಂದದ ಅಡಿಯಲ್ಲಿ ಬರುವ ಯಾವುದೇ ವಸ್ತುವಿಗೂ ಮೆಕ್ಸಿಕೋ ಸುಂಕವನ್ನು ಪಾವತಿಸಬೇಕಾಗಿಲ್ಲ ಎಂದು ಒಪ್ಪಂದಕ್ಕೆ ಬರಲಾಗಿದೆ ಎಂದು ಟ್ರಂಪ್ ಟ್ರೂತ್ ಸೋಶಿಯಲ್‌ನಲ್ಲಿ ಹೇಳಿದ್ದಾರೆ.
ಇದನ್ನು ಪರಸ್ಪರ ಹೊಂದಾಣಿಕೆಯನ್ನಾಗಿ ಮಾಡಿದ್ದು, ಅಧ್ಯಕ್ಷೆ ಶೀನ್‌ಬಾಮ್ ಅವರ ಬಗ್ಗೆ ಹಾಗೂ ಅವರಿಗೆ ನಮ್ಮ ಬಗ್ಗೆ ಪರಸ್ಪರ ಗೌರವವಿದೆ. ನಮ್ಮ ಸಂಬಂಧ ತುಂಬಾ ಉತ್ತಮವಾಗಿದೆ, ಗಡಿಭಾಗದ ಉನ್ನತಿಗೆ ಶ್ರಮಿಸುತ್ತಿದ್ದೇವೆ ಎಂದು ಟ್ರಂಪ್ ಹೇಳಿದ್ದಾರೆ.
ಮೆಕ್ಸಿಕೋ ಮೇಲಿನ ಸುಂಕಗಳನ್ನು ತಾತ್ಕಾಲಿಕವಾಗಿ ತೆಗೆದುಹಾಕಲು ಕಾರಣವೇನು ಎಂಬುದರ ಕುರಿತು ಶ್ವೇತಭವನ ಯಾವುದೇ ವಿವರ ನೀಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



