ವಿದೇಶ

ನಿಮ್ಮ ಆರ್ಥಿಕತೆಯೇ ನಮ್ಮ "ಟಾರ್ಗೆಟ್" ಆಗಲಿದೆ: ರಷ್ಯಾ ವಿಚಾರವಾಗಿ ಭಾರತ, ಚೀನಾಗೆ ಅಮೆರಿಕ ಬೆದರಿಕೆ!

ರಷ್ಯಾದ ಕಚ್ಚಾ ರಫ್ತಿನಲ್ಲಿ ಈ ಮೂರು ದೇಶಗಳು ಸುಮಾರು 80 ಪ್ರತಿಶತವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ಇದು "ಪುಟಿನ್ ಅವರ ಯುದ್ಧ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ ಎಂದು ಗ್ರಹಾಂ ಆತಂಕ ವ್ಯಕ್ತಪಡಿಸಿದ್ದಾರೆ.

ನಿಮ್ಮ ಆರ್ಥಿಕತೆಯೇ ನಮ್ಮ "ಟಾರ್ಗೆಟ್" ಆಗಲಿದೆ: ರಷ್ಯಾ ವಿಚಾರವಾಗಿ ಭಾರತ, ಚೀನಾಗೆ ಅಮೆರಿಕ ಬೆದರಿಕೆ!
ಪ್ರಧಾನಿ ನರೇಂದ್ರ ಮೋದಿ- ಡೊನಾಲ್ಡ್ ಟ್ರಂಪ್ — online desk
Published On :

ಉಕ್ರೇನ್‌ನಲ್ಲಿ ರಷ್ಯಾ ಯುದ್ಧ ನಡೆಸುತ್ತಿರುವ ಹಿನ್ನೆಲೆಯಲ್ಲಿ, ರಷ್ಯಾ ತೈಲ ಖರೀದಿಯನ್ನು ನಿಲ್ಲಿಸದಿದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಮತ್ತು ಚೀನಾ ಸೇರಿದಂತೆ ಮಾಸ್ಕೋದ ವ್ಯಾಪಾರ ಪಾಲುದಾರರ ಮೇಲೆ ಭಾರೀ ಸುಂಕ ವಿಧಿಸುತ್ತೇವೆ ಎಂದು ಯುಎಸ್ ಸೆನೆಟರ್ ಲಿಂಡ್ಸೆ ಗ್ರಹಾಂ ಎಚ್ಚರಿಸಿದ್ದಾರೆ.

ಟ್ರಂಪ್ ಆಡಳಿತ ತೈಲ ಸಂಬಂಧಿತ ಆಮದುಗಳ ಮೇಲೆ 100 ಪ್ರತಿಶತ ಸುಂಕ ವಿಧಿಸಲು ಯೋಜಿಸುತ್ತಿದೆ ಎಂದು ರಿಪಬ್ಲಿಕನ್ ಶಾಸಕರು ಹೇಳಿದ್ದಾರೆ.

ಭಾರತ ಮತ್ತು ಚೀನಾ ಸೇರಿದಂತೆ ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸುವ ದೇಶಗಳ ಸರಕುಗಳ ಮೇಲೆ 500 ಪ್ರತಿಶತ ಸುಂಕ ವಿಧಿಸಲು ಪ್ರಸ್ತಾಪಿಸುವ ನೀಡುವ ಮಸೂದೆಯನ್ನು ಗ್ರಹಾಂ ಈ ಹಿಂದೆ ಪ್ರಸ್ತಾಪಿಸಿದ್ದರು.

"ಟ್ರಂಪ್ ರಷ್ಯಾದ ತೈಲವನ್ನು ಖರೀದಿಸುವ ಜನರ ಮೇಲೆ ಸುಂಕ ವಿಧಿಸಲಿದ್ದಾರೆ - ಚೀನಾ, ಭಾರತ ಮತ್ತು ಬ್ರೆಜಿಲ್... ಚೀನಾ, ಭಾರತ ಮತ್ತು ಬ್ರೆಜಿಲ್‌ಗೆ ನಾನು ಹೇಳುವುದೇನೆಂದರೆ: ಈ ಯುದ್ಧ ಮುಂದುವರಿಯಲು ನೀವು ಅಗ್ಗದ ರಷ್ಯಾದ ತೈಲವನ್ನು ಖರೀದಿಸುವುದನ್ನು ಮುಂದುವರಿಸಿದರೆ, ನಾವು ನಿಮ್ಮ ಆರ್ಥಿಕತೆಯನ್ನು ಪುಡಿ ಮಾಡುತ್ತೇವೆ, ನಿಮ್ಮನ್ನು ನಾಶ ಮಾಡುತ್ತೇವೆ ಎಂದು ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಗ್ರಹಾಂ ಉದ್ಧಟತನದ ಮಾತುಗಳನ್ನಾಡಿದ್ದಾರೆ.

ರಷ್ಯಾದ ಕಚ್ಚಾ ರಫ್ತಿನಲ್ಲಿ ಈ ಮೂರು ದೇಶಗಳು ಸುಮಾರು 80 ಪ್ರತಿಶತವನ್ನು ಹೊಂದಿವೆ ಎಂದು ಅವರು ಹೇಳಿದ್ದಾರೆ. ಇದು "ಪುಟಿನ್ ಅವರ ಯುದ್ಧ ವ್ಯವಸ್ಥೆಗೆ ಉತ್ತೇಜನ ನೀಡುತ್ತದೆ ಎಂದು ಗ್ರಹಾಂ ಆತಂಕ ವ್ಯಕ್ತಪಡಿಸಿದ್ದಾರೆ.

"ನೀವು (ಭಾರತ, ಚೀನಾ ಮತ್ತು ಬ್ರೆಜಿಲ್) ಮಾಡುತ್ತಿರುವುದು ರಕ್ತದ ಹಣ... ಯಾರಾದರೂ ಅವರನ್ನು ನಿಲ್ಲಿಸುವವರೆಗೂ ಅವರು (ಪುಟಿನ್) ನಿಲ್ಲುವುದಿಲ್ಲ."

ರಷ್ಯಾಕ್ಕೆ ನೇರ ಎಚ್ಚರಿಕೆ ನೀಡಿರುವ ಗ್ರಹಾಂ, "ಅಧ್ಯಕ್ಷ ಪುಟಿನ್, ನಿಮ್ಮ ವಿಷಯಕ್ಕೆ ಬಂದಾಗ ಆಟ ಬದಲಾಗಿದೆ. ನೀವು ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಅಪಾಯಕರ ರೀತಿಯಲ್ಲಿ ನಿರ್ವಹಿಸಿದ್ದೀರಿ. ನಿಮ್ಮ ಆರ್ಥಿಕತೆ ನಾಶವಾಗುತ್ತಲೇ ಇರುತ್ತದೆ ಎಂದು ಹೇಳಿದ್ದಾರೆ.

"ತಮಗೆ ಸೇರದ ದೇಶಗಳನ್ನು ಆಕ್ರಮಿಸುವ" ಮೂಲಕ, ಪುಟಿನ್ ಹಿಂದಿನ ಸೋವಿಯತ್ ಒಕ್ಕೂಟವನ್ನು ಮರುಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಗ್ರಹಾಂ ಹೇಳಿಕೊಂಡಿದ್ದಾರೆ.

"ಪುಟಿನ್ ತನ್ನದಲ್ಲದ ದೇಶಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ. 90ರ ದಶಕದ ಮಧ್ಯಭಾಗದಲ್ಲಿ, ಉಕ್ರೇನ್ ತನ್ನ ಸಾರ್ವಭೌಮತ್ವವನ್ನು ರಷ್ಯಾ ಗೌರವಿಸುತ್ತದೆ ಎಂಬ ಭರವಸೆಯೊಂದಿಗೆ 1,700 ಪರಮಾಣು ಶಸ್ತ್ರಾಸ್ತ್ರಗಳನ್ನು ತ್ಯಜಿಸಿತು. ಪುಟಿನ್ ಆ ಭರವಸೆಯನ್ನು ಮುರಿದರು" ಎಂದು ರಿಪಬ್ಲಿಕನ್ ಶಾಸಕ ಆರೋಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.