ಝೆಲೆನ್‌ಸ್ಕಿ ತವರೂರು ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 9 ಮಕ್ಕಳು ಸೇರಿದಂತೆ 18 ಮಂದಿ ಸಾವು, 60 ಕ್ಕೂ ಹೆಚ್ಚು ಜನರಿಗೆ ಗಾಯ
ಕ್ಷಿಪಣಿ ವಸತಿ ಪ್ರದೇಶಕ್ಕೆ ಅಪ್ಪಳಿಸಿತು. ಸಮೀಪದಲ್ಲಿ ಆಟದ ಮೈದಾನವೂ ಇತ್ತು. ಮೃತರಲ್ಲಿ 9 ಮಕ್ಕಳೂ ಸೇರಿದ್ದಾರೆ ಎಂದು ಕ್ರಿವಿ ರಿಹ್‌ನ ರಕ್ಷಣಾ ಮಂಡಳಿಯ ಮುಖ್ಯಸ್ಥ ಓಲೆಕ್ಸಾಂಡರ್ ವಿಲ್ಕುಲ್ ಹೇಳಿದ್ದಾರೆ.

ಕ್ವಿವ್: ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರ ಹುಟ್ಟೂರು ಮಧ್ಯ ಉಕ್ರೇನ್‌ನ ಕ್ರಿವಿ ರಿಹ್ ನಗರದ ಮೇಲೆ ಶುಕ್ರವಾರ ರಷ್ಯಾದ ಕ್ಷಿಪಣಿ ದಾಳಿ ನಡೆಸಿದೆ. ಘಟನೆಯಲ್ಲಿ 9 ಮಕ್ಕಳು ಸೇರಿ 18 ಮಂದಿ ಸಾವಿಗೀಡಾಗಿದ್ದು, 60ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕ್ಷಿಪಣಿ ವಸತಿ ಪ್ರದೇಶಕ್ಕೆ ಅಪ್ಪಳಿಸಿತು. ಸಮೀಪದಲ್ಲಿ ಆಟದ ಮೈದಾನವೂ ಇತ್ತು. ಮೃತರಲ್ಲಿ 9 ಮಕ್ಕಳೂ ಸೇರಿದ್ದಾರೆ ಎಂದು ಕ್ರಿವಿ ರಿಹ್‌ನ ರಕ್ಷಣಾ ಮಂಡಳಿಯ ಮುಖ್ಯಸ್ಥ ಓಲೆಕ್ಸಾಂಡರ್ ವಿಲ್ಕುಲ್ ಹೇಳಿದ್ದಾರೆ.
ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 'ರಷ್ಯಾಕ್ಕೆ ಕದನ ವಿರಾಮ ಬೇಕಿಲ್ಲ. ನಾವು ಅದನ್ನು ನೋಡುತ್ತಿದ್ದೇವೆ' ಎಂದು ಝೆಲೆನ್‌ಸ್ಕಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.
ಪಾಶ್ಚಿಮಾತ್ಯ ಬೋಧಕರು ಸಭೆ ಸೇರುತ್ತಿದ್ದ ನಗರದ ರೆಸ್ಟೋರೆಂಟ್ ಮೇಲೆ ಹೆಚ್ಚಿನ ಸ್ಫೋಟಕವಿರುವ ಕ್ಷಿಪಣಿಯೊಂದಿಗೆ ದಾಳಿ ನಡೆಸಿದೆ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



