ರಷ್ಯಾ ಕ್ಷಿಪಣಿ ದಾಳಿ

Ukraine: ಸುಮಿ ನಗರದ ಮೇಲೆ ರಷ್ಯಾದ ಕ್ಷಿಪಣಿ ದಾಳಿ; ಪವಿತ್ರ ಪಾಮ್ ಸಂಡೆ ದಿನವೇ 30 ಜನರು ಸಾವು, 84 ಮಂದಿಗೆ ಗಾಯ!
ಈ ಪವಿತ್ರ ಪಾಮ್ ಸಂಡೆಯಂದು, ನಮ್ಮ ಸಮುದಾಯವು ಭೀಕರ ದುರಂತವನ್ನು ಅನುಭವಿಸಿದೆ" ಎಂದು ಆರ್ಟೆಮ್ ಕೊಬ್ಜಾರ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಝೆಲೆನ್‌ಸ್ಕಿ ತವರೂರು ಕ್ರಿವಿ ರಿಹ್ ಮೇಲೆ ರಷ್ಯಾ ಕ್ಷಿಪಣಿ ದಾಳಿ: 9 ಮಕ್ಕಳು ಸೇರಿದಂತೆ 18 ಮಂದಿ ಸಾವು, 60 ಕ್ಕೂ ಹೆಚ್ಚು ಜನರಿಗೆ ಗಾಯ
ಕ್ಷಿಪಣಿ ವಸತಿ ಪ್ರದೇಶಕ್ಕೆ ಅಪ್ಪಳಿಸಿತು. ಸಮೀಪದಲ್ಲಿ ಆಟದ ಮೈದಾನವೂ ಇತ್ತು. ಮೃತರಲ್ಲಿ 9 ಮಕ್ಕಳೂ ಸೇರಿದ್ದಾರೆ ಎಂದು ಕ್ರಿವಿ ರಿಹ್‌ನ ರಕ್ಷಣಾ ಮಂಡಳಿಯ ಮುಖ್ಯಸ್ಥ ಓಲೆಕ್ಸಾಂಡರ್ ವಿಲ್ಕುಲ್ ಹೇಳಿದ್ದಾರೆ.

ರಷ್ಯಾ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ, ಗ್ರೀಕ್ ಪ್ರಧಾನಿ ಕೂದಲೆಳೆ ಅಂತರದಲ್ಲಿ ಪಾರು!
ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಸೇನೆಯ ಕ್ಷಿಪಣಿ ದಾಳಿಯಿಂದ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮತ್ತು ಗ್ರೀಕ್ ಪ್ರಧಾನಿ ಕಿರಿಯಾಕೋಸ್ ಮಿಟ್ಸೊಟಾಕಿಸ್ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ರಷ್ಯಾ ಕ್ಷಿಪಣಿ ದಾಳಿ: ಉಕ್ರೇನ್ ನ ಖಾರ್ಕಿವ್ ನಲ್ಲಿ 6 ಮಂದಿ ಸಾವು
ಉಕ್ರೇನ್‌ನ ಈಶಾನ್ಯ ನಗರವಾದ ಖಾರ್ಕಿವ್‌ನಲ್ಲಿರುವ ಅಂಚೆ ವಿತರಣಾ ಕೇಂದ್ರಕ್ಕೆ ರಷ್ಯಾದ ಕ್ಷಿಪಣಿಗಳು ಬಡಿದ ನಂತರ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ಅಲ್ ಜಜೀರಾ ಭಾನುವಾರ ವರದಿ ಮಾಡಿದೆ.

