ರಂಗೇರಿದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ: ಟ್ರಂಪ್-ಹ್ಯಾರಿಸ್ ಮುಖಾಮುಖಿ; ಮೊದಲ ಬಾರಿಗೆ ಸಾರ್ವಜನಿಕ ಚರ್ಚೆ
ಪರಸ್ಪರ ರಾಜಕೀಯ ಮತ್ತು ವ್ಯಕ್ತಿತ್ವದ ಮೇಲೆ ಕಿಡಿಕಾರಿರುವ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರು ದೇಶಕ್ಕಾಗಿ ತಮ್ಮ ವಿಭಿನ್ನ ದೃಷ್ಟಿಕೋನಗಳನ್ನು ಮುಂದಿಟ್ಟರು.

ಫಿಲಡೆಲ್ಫಿಯಾ: ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಕಣ ರಂಗೇರುತ್ತಿದೆ. ಇದೇ ಮೊದಲ ಬಾರಿಗೆ ಅಭ್ಯರ್ಥಿಗಳಾದ ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಸಾರ್ವಜನಿಕವಾಗಿ ಮುಖಾಮುಖಿ ಚರ್ಚೆ ನಡೆಸಿದ್ದಾರೆ.
ಪರಸ್ಪರ ರಾಜಕೀಯ ಮತ್ತು ವ್ಯಕ್ತಿತ್ವದ ಮೇಲೆ ಕಿಡಿಕಾರಿರುವ ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಅವರು ದೇಶಕ್ಕಾಗಿ ತಮ್ಮ ವಿಭಿನ್ನ ದೃಷ್ಟಿಕೋನಗಳನ್ನು ಮುಂದಿಟ್ಟರು.
ಭಾರತೀಯ ಕಾಲಮಾನ ಪ್ರಕಾರ ನಿನ್ನೆ ಮಂಗಳವಾರ ರಾತ್ರಿ ನಡೆದ ಮೊದಲ ಅಧ್ಯಕ್ಷೀಯ ಚರ್ಚೆಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಪರಸ್ಪರ ಮುಖಾಮುಖಿಯಾದರು. ಎಬಿಸಿ ನ್ಯೂಸ್ ಆಯೋಜಿಸಿದ ಮತ್ತು ಎನ್‌ಬಿಸಿಯಲ್ಲಿ ಸಿಮ್ಯುಲ್‌ಕಾಸ್ಟ್ ಮಾಡಿದ ಚರ್ಚೆಯು ರಾತ್ರಿ 9 ಗಂಟೆಗೆ ಪ್ರಾರಂಭವಾಗಿ ಸರಿಸುಮಾರು 90 ನಿಮಿಷಗಳ ಕಾಲ ನಡೆಯಿತು,
ಇಬ್ಬರೂ ಆರ್ಥಿಕತೆ, ಗರ್ಭಪಾತ ಹಕ್ಕುಗಳು, ಇಸ್ರೇಲ್-ಗಾಜಾ ಮತ್ತು ರಷ್ಯಾ-ಇವುಗಳ ಮೇಲೆ ಪರಸ್ಪರ ತೀವ್ರವಾಗಿ ಟೀಕೆಗಿಳಿದರು. ಉಕ್ರೇನ್ ಯುದ್ಧಗಳು, ವಲಸೆ ಕಾನೂನುಗಳು ಸಹ ಮಾತುಕತೆಗೆ ಬಂದವು.
ಟ್ರಂಪ್ ಬಿಡೆನ್-ಹ್ಯಾರಿಸ್ ಅವರನ್ನು ನಮ್ಮ ದೇಶದ ಇತಿಹಾಸದಲ್ಲಿ ಅತ್ಯಂತ ಕೆಟ್ಟ ಅಧ್ಯಕ್ಷರು, ಕೆಟ್ಟ ಉಪಾಧ್ಯಕ್ಷರು ಎಂದು ಕರೆದರೆ, ಕಮಲಾ ಹ್ಯಾರಿಸ್ ಅಮೇರಿಕನ್ ಜನರು ನಮ್ಮನ್ನು ಪ್ರತ್ಯೇಕಿಸುವುದಕ್ಕಿಂತ ಹೆಚ್ಚಿನದನ್ನು ಹೊಂದಿದ್ದೇವೆ ಎಂದು ನಮಗೆ ತಿಳಿದಿದೆ ಎಂದು ನಾನು ನಂಬುತ್ತೇನೆ. ನಾವು ಮುಂದೆ ಹೊಸ ಮಾರ್ಗವನ್ನು ದೇಶಕ್ಕೆ ಕಂಡುಹಿಡಿಯುತ್ತೇವೆ ಎಂದರು.
ಈ ಹಿಂದೆ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮಹಾ ಆರ್ಥಿಕ ಕುಸಿತದ ನಂತರ ರಾಷ್ಟ್ರವನ್ನು ಕೆಟ್ಟ ಉದ್ಯೋಗದ ಸ್ಥಿತಿಗೆ ತಂದರು ಎಂದು ಕಮಲಾ ಹ್ಯಾರಿಸ್ ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


