ಭಾರತ ಸರ್ಕಾರದ ಕೈವಾಡ ಆರೋಪ: ಸಿಖ್ ಸಮುದಾಯ ಮುಂದೆ ಬಂದು ಮಾತನಾಡಲಿ- ಕೆನಡಾ ಉನ್ನತ ಪೊಲೀಸ್ ಅಧಿಕಾರಿ ಒತ್ತಾಯ
ಮಂಗಳವಾರ ರೇಡಿಯೋ-ಕೆನಡಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆಮ್, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಇರುವವರು ಮುಂದೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.

ಒಟ್ಟಾವಾ: ಸಿಖ್ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಸೇರಿದಂತೆ ಕೆನಡಾದಲ್ಲಿನ ಹಿಂಸಾಚಾರದಲ್ಲಿ ಭಾರತ ಸರ್ಕಾರದೊಂದಿಗೆ ಕೈವಾಡದ ಆರೋಪ ಕುರಿತು ವಿಚಾರಣೆ ಮುಂದುವರೆದಿರುವುದರಿಂದ ಸಿಖ್ ಸಮುದಾಯ ಮಾತನಾಡುವಂತೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ ಮುಖ್ಯಸ್ಥ ಒತ್ತಾಯಿಸಿದ್ದಾರೆ.
ಮಂಗಳವಾರ ರೇಡಿಯೋ-ಕೆನಡಾಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಸಿಎಂಪಿ ಕಮಿಷನರ್ ಮೈಕ್ ಡುಹೆಮ್, ತನಿಖೆಗೆ ಸಂಬಂಧಿಸಿದಂತೆ ಮಾಹಿತಿ ಇರುವವರು ಮುಂದೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಕೆನಡಾದ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ ವರದಿ ಮಾಡಿದೆ.
ಕೆನಡಾದಲ್ಲಿ ನರಹತ್ಯೆ ಸೇರಿದಂತೆ ವ್ಯಾಪಕ" ಹಿಂಸಾಚಾರದಲ್ಲಿ ಭಾರತ ಸರ್ಕಾರದ "ಏಜೆಂಟರು" ಪಾತ್ರ ವಹಿಸಿದ್ದಾರೆ ಎಂದು ಸೋಮವಾರ ಡುಹೆಮ್ ಸಾರ್ವಜನಿಕವಾಗಿ ಆರೋಪಿಸಿದ್ದರು. ಕೆನಡಾದಲ್ಲಿರುವ ಭಾರತೀಯ ರಾಜತಾಂತ್ರಿಕ ಮತ್ತು ಕಾನ್ಸುಲರ್ ಅಧಿಕಾರಿಗಳು ಕೆನಡಿಯನ್ನರು ಮತ್ತು ಕೆನಡಾದಲ್ಲಿ ವಾಸಿಸುವ ಜನರ ವಿರುದ್ಧ ಕೊಲೆ, ಸುಲಿಗೆ, ಬೆದರಿಕೆಯಂತಹ ಕೃತ್ಯಗಳಲ್ಲಿ ಸಂಬಂಧ ಹೊಂದಿದ್ದಾರೆ ಎಂದು ಡುಹೆಮ್ ಆರೋಪಿಸಿದ್ದಾರೆ.
ಇದು ನಮ್ಮ ದೇಶದಲ್ಲಿ ಸಾರ್ವಜನಿಕ ಸುರಕ್ಷತೆಗೆ ಗಮನಾರ್ಹ ಅಪಾಯವಾಗಿ ತೋರುತ್ತಿದ್ದು, ಕೆನಡಾದಲ್ಲಿ ಕೆಲಸ ಮಾಡುತ್ತಿರುವ ಭಾರತದ ನೆಟ್ ವರ್ಕ್ ಗೆ ಅಡ್ಡಿಪಡಿಸಲು ಸೇನೆ ಮುಂದೆ ಬರಬೇಕಾಗಿದೆ. ಒಂದು ವೇಳೆ ಜನರು ಮುಂದೆ ಬಂದರೆ ಅವರಿಗೆ ನೆರವು ನೀಡಬಹುದು. ಅವರು ಮುಂದೆ ಬರುವಂತೆ ಹೇಳುತ್ತಿದ್ದೇನೆ ಎಂದು ರೇಡಿಯೊ ಕೆನಡಾ ಸಂದರ್ಶದಲ್ಲಿ ಅವರು ಹೇಳಿದರು.
ಜನರು ಸುರಕ್ಷಿತೆ ಮತ್ತು ಉದ್ಯೋಗಕ್ಕೆ ಕೆನಡಾಕ್ಕೆ ಬರುತ್ತಾರೆ. ಇಲ್ಲಿನ ಅನಿವಾಸಿ ಭಾರತೀಯರು ಪೊಲೀಸರಲ್ಲಿ ನಂಬಿಕೆ ಮತ್ತು ವಿಶ್ವಾಸ ಹೊಂದಿರುವುದಾಗಿ ಭಾವಿಸುತ್ತೇನೆ. ಭಾರತ ಸರ್ಕಾರದೊಂದಿಗೆ ನಂಟಿನ ಆರೋಪ ಕುರಿತು ಸಿಖ್ ಸಮುದಾಯ ಮಾತನಾಡಬೇಕು ಎಂದು ಅವರು ಒತ್ತಾಯಿಸಿರುವುದಾಗಿ ವರದಿಯಾಗಿದೆ.
ಬಿಷ್ಣೋಯ್ ಗ್ಯಾಂಗ್ ಭಾರತ ಸರ್ಕಾರದ ಏಜೆಂಟ್" ಗಳೊಂದಿಗೆ ಸಂಪರ್ಕ ಹೊಂದಿದೆ. ಇದು ದಕ್ಷಿಣ ಏಷ್ಯಾದ ಸಮುದಾಯವನ್ನು ನಿರ್ದಿಷ್ಟವಾಗಿ ದೇಶದಲ್ಲಿ "ಖಾಲಿಸ್ತಾನಿ ಪರ ಅಂಶಗಳನ್ನು ಗುರಿಯಾಗಿಸಿಕೊಂಡಿದೆ ಎಂದು RCMP ಆರೋಪಿಸಿದ್ದಾರೆ.
ಭಾರತವು ಕೆನಡಾದ ಪ್ರಜೆಗಳನ್ನು ಗುರಿಯಾಗಿಸಿಕೊಂಡು ರಹಸ್ಯ ಕಾರ್ಯಾಚರಣೆ ಮತ್ತಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂಬ ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಆರೋಪಗಳನ್ನು ನವದೆಹಲಿಯ ಮೂಲಗಳು ತಳ್ಳಿಹಾಕಿವೆ.
ಸೋಮವಾರ ನಿಜ್ಜರ್ ಹತ್ಯೆಯಲ್ಲಿ ರಾಯಭಾರಿಯ ನಂಟು ಕುರಿತು ಕೆನಡಾದ ಆರೋಪಗಳನ್ನು ತಳ್ಳಿಹಾಕಿದ ನಂತರ ಭಾರತ ಆರು ಕೆನಡಾದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿತು ಮತ್ತು ಕೆನಡಾದಿಂದ ತನ್ನ ಹೈಕಮಿಷನರ್ ಅವರನ್ನು ವಾಪಸ್ ಕರೆಸಿಕೊಳ್ಳುವುದಾಗಿ ಘೋಷಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



