ಗಾಜಾ-ಇಸ್ರೇಲ್ ಬಿಕ್ಕಟ್ಟು ತೀವ್ರ: ಪ್ಯಾಲೆಸ್ಟೀನ್‌ಗೆ ಅನುದಾನ ಕಡಿತ ಮಾಡದಂತೆ ವಿಶ್ವಸಂಸ್ಥೆ ಮನವಿ
ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ದೇಶಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ನೆರವು ಸಂಸ್ಥೆಗಳು ಮನವಿ ಮಾಡಿವೆ.

ಜಿನೆವಾ: ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡ ದೇಶಗಳು ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ವಿಶ್ವಸಂಸ್ಥೆ ಮತ್ತು ನೆರವು ಸಂಸ್ಥೆಗಳು ಮನವಿ ಮಾಡಿವೆ.
ಇಸ್ರೇಲ್ ಮೇಲಿನ ದಾಳಿಯಲ್ಲಿ ವಿಶ್ವಸಂಸ್ಥೆ ಸಿಬ್ಬಂದಿ ಪಾತ್ರದ ಕುರಿತ ಸುದ್ದಿಗಳು ವ್ಯಾಪಕವಾಗಿರುವಂತೆಯೇ ಕೆಲ ದೇಶಗಳು ಪ್ಯಾಲೆಸ್ಟೀನಿಯನ್ನರಿಗಾಗಿ ವಿಶ್ವಸಂಸ್ಥೆಯ ಪರಿಹಾರ ಕಾರ್ಯಗಳ ಸಂಸ್ಥೆಗೆ (ಯುಎನ್‌ಆರ್‌ಡಬ್ಲ್ಯುಎ) ನೀಡುತ್ತಿದ್ದ ಅನುದಾನವನ್ನು ಕಡಿತಗೊಳಿಸುವ ನಿರ್ಧಾರ ಕೈಗೊಂಡಿದ್ದವು. ಆದರೆ ಇದೀಗ ಈ ದೇಶಗಳಿಗೆ ವಿಶ್ವಸಂಸ್ಥೆ ಮನವಿ ಮಾಡಿದ್ದು, ತಮ್ಮ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಕೇಳಿಕೊಂಡಿವೆ.
‘ನೀವು ನೀಡುವ ಅನುದಾನವು ಗಾಜಾದಲ್ಲಿ 20 ಲಕ್ಷ ಜನರ ಜೀವ ಉಳಿವಿಗೆ ಕಾರಣವಾಗುತ್ತದೆ’ ಎಂದು ಅವು ಹೇಳಿವೆ.
ವಿಶ್ವಸಂಸ್ಥೆ ಮುಖ್ಯಸ್ಥ ಅಂಟಾನಿಯೋ ಗುಟೆರಸ್ ಭಾನುವಾರ ವಿಶ್ವಸಂಸ್ಥೆ ಮತ್ತು ಇತರ ಪ್ರಮುಖ ದಾನಿಗಳನ್ನು ಪ್ಯಾಲೆಸ್ಟೀನಿಯಾದವರಿಗೆ ಸಹಾಯ ಮಾಡುವ ಯುಎನ್ ಏಜೆನ್ಸಿಗೆ ಧನಸಹಾಯವನ್ನು ಮುಂದುವರೆಸುವಂತೆ ಮನವಿ ಮಾಡಿದರು, ಅವರ ಬೆಂಬಲವಿಲ್ಲದೆ ಏಜೆನ್ಸಿಯು ಅದನ್ನು ಆಹಾರ, ನೀರು ಮತ್ತು ಅಗತ್ಯ ಸೇವೆಗಳಿಗಾಗಿ ಅವಲಂಬಿಸಿರುವ ಎರಡು ಮಿಲಿಯನ್ ಗಾಜನ್ನರಿಗೆ ಸಹಾಯ ಮಾಡಲು ಮುಂದಿನ ತಿಂಗಳು ಹಣದ ಕೊರತೆಯಾಗುತ್ತದೆ ಎಂದು ಹೇಳಿದರು.
ಗಾಜಾಗೆ ಅಮೆರಿಕ, ಜರ್ಮನಿ ಸೇರಿದಂತೆ ಕನಿಷ್ಠ ಒಂಬತ್ತು ದೇಶಗಳು ಅನುದಾನ ನೀಡುವುದನ್ನು ನಿಲ್ಲಿಸಿವೆ. ಅಕ್ಟೋಬರ್ 7ರಂದು ಹಮಾಸ್ ಬಂಡುಕೋರರು ಇಸ್ರೇಲ್ ಮೇಲೆ ನಡೆಸಿದ್ದ ಹಠಾತ್ ದಾಳಿಯಲ್ಲಿ ವಿಶ್ವಸಂಸ್ಥೆಯ ಸಿಬ್ಬಂದಿ ಭಾಗಿಯಾಗಿದ್ದರು ಎಂದು ಇಸ್ರೇಲ್ ಆರೋಪಿಸಿದ ಬೆನ್ನಲ್ಲೇ ಈ ನಿರ್ಧಾರ ಕೈಗೊಂಡಿವೆ.
ಹಮಾಸ್ ಬಂಡುಕೋರರನ್ನು ಸದೆಬಡಿಯುವ ಉದ್ದೇಶದಿಂದ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಈವರೆಗೆ 26,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಸಂಘರ್ಷ ಆರಂಭವಾದಾಗಿನಿಂದ ಗಾಜಾದ 23 ಲಕ್ಷ ಜನರು ವಿಶ್ವಸಂಸ್ಥೆಯ ನೆರವಿನ ಮೇಲೆ ಅವಲಂಬಿತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


