ಕೀನ್ಯಾದ ಡೂಮ್ಸ್ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ವಿರುದ್ಧ 191 ಮಕ್ಕಳು ಸೇರಿ 429 ಜನರನ್ನು ಕೊಂದ ಆರೋಪ!
191 ಮಕ್ಕಳು ಸೇರಿ 429 ಮಂದಿ ಹತ್ಯೆ ಆರೋಪವನ್ನು ಎದುರಿಸುತ್ತಿರುವ ಡೂಮ್ಸ್ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ಮತ್ತು ಆತನ 30 ಅನುಯಾಯಿಗಳನ್ನು ಕರಾವಳಿ ಪಟ್ಟಣವಾದ ಮಲಿಂಡಿಯಲ್ಲಿರುವ ಕೀನ್ಯಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನೈರೋಬಿ: 191 ಮಕ್ಕಳು ಸೇರಿ 429 ಮಂದಿ ಹತ್ಯೆ ಆರೋಪವನ್ನು ಎದುರಿಸುತ್ತಿರುವ ಡೂಮ್ಸ್ಡೇ ಕಲ್ಟ್ ನಾಯಕ ಪಾಲ್ ಮೆಕೆಂಜಿ ಮತ್ತು ಆತನ 30 ಅನುಯಾಯಿಗಳನ್ನು ಕರಾವಳಿ ಪಟ್ಟಣವಾದ ಮಲಿಂಡಿಯಲ್ಲಿರುವ ಕೀನ್ಯಾದ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.
ಹೈಕೋರ್ಟ್ ನ್ಯಾಯಾಧೀಶ ಮುಗುರೆ ಥಾಂಡೆ ಅವರು ಪ್ರಾಸಿಕ್ಯೂಟರ್ಗಳ ವಾದದಂತೆ ಪಾಲ್ ಮೆಕೆಂಜಿ ಮಾನಸಿಕ ಮೌಲ್ಯಮಾಪನಕ್ಕೆ ಒಳಗಾಗಬೇಕು. ಫೆ. 6ರಂದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂಬ ಮನವಿಯನ್ನು ಪುರಸ್ಕರಿಸಿದ್ದು ಈ ಹಿನ್ನೆಲೆಯಲ್ಲಿ ಮೆಕೆಂಜಿ ಮತ್ತು ಇತರ ಶಂಕಿತರು ಅರ್ಜಿಗಳಿಗೆ ಕೋರ್ಟ್ ಮನ್ನಣೆ ನೀಡಲಿಲ್ಲ. ಪ್ರಾಸಿಕ್ಯೂಷನ್ ಚಾರ್ಜ್ ಶೀಟ್ ಪ್ರಕಾರ 191 ಮೃತ ಮಕ್ಕಳ ಪೈಕಿ 180 ಮಕ್ಕಳ ಅವಶೇಷಗಳನ್ನು ಗುರುತಿಸಲಾಗಿಲ್ಲ ಎಂದು ತಿಳಿದುಬಂದಿದೆ.
ಮೆಕೆಂಜಿ ಮತ್ತು ಅವರ ಕೆಲವು ಅನುಯಾಯಿಗಳು ಅವರ ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್ನ 429 ಸದಸ್ಯರ ಸಾವಿಗೆ ಕಾರಣವೆಂದು ಆರೋಪಿಸಲಾಗಿದೆ. ಕಿಲಿಫಿಯ ಕರಾವಳಿ ಕೌಂಟಿಯ ಶಾಕಾಹೋಲಾ ಅರಣ್ಯ ಎಂದು ಕರೆಯಲ್ಪಡುವ ದೂರದ ಪ್ರದೇಶದಲ್ಲಿ 800 ಎಕರೆ ರ್ಯಾಂಚ್ನಲ್ಲಿ ಡಜನ್ಗಟ್ಟಲೆ ಸಮಾಧಿಗಳಲ್ಲಿ ಮೃತದೇಹಗಳು ಪತ್ತೆಯಾಗಿತ್ತು.
15 ಚರ್ಚ್ ಸದಸ್ಯರನ್ನು ಪೊಲೀಸರು ರಕ್ಷಿಸಿದ ನಂತರ ಪ್ರಕರಣ ಬಹಿರಂಗಗೊಂಡಿತ್ತು. ರಕ್ಷಿತ ಸದಸ್ಯರು ತನಿಖಾಧಿಕಾರಿಗಳಿಗೆ ಮೆಕೆಂಜಿ ಅವರು ಜಗತ್ತು ಅಂತ್ಯಗೊಳ್ಳುವ ಮೊದಲು ಅನಿರ್ದಿಷ್ಟಾವಧಿ ಉಪವಾಸ ಮಾಡಲು ಸೂಚಿಸಿದ್ದಾರೆ ಎಂದು ಹೇಳಿದರು. 15 ಮಂದಿಯಲ್ಲಿ ನಾಲ್ವರು ಆಸ್ಪತ್ರೆಗೆ ಕರೆದೊಯ್ದ ನಂತರ ಸಾವನ್ನಪ್ಪಿದ್ದಾರೆ.
ಕೆಲವು ದೇಹಗಳ ಶವಪರೀಕ್ಷೆಯಲ್ಲಿ ಹಸಿವು, ಕತ್ತು ಹಿಸುಕುವಿಕೆ ಅಥವಾ ಉಸಿರುಗಟ್ಟಿಸುವಿಕೆಯಿಂದ ಮೃತಪಟ್ಟಿದ್ದಾರೆ ಎಂದು ತೋರಿಸಿದೆ. 95 ಜನರ ವಿರುದ್ಧ ಕೊಲೆ, ಕ್ರೌರ್ಯ, ಮಕ್ಕಳ ಚಿತ್ರಹಿಂಸೆ ಮತ್ತು ಇತರ ಅಪರಾಧಗಳ ಆರೋಪ ಹೊರಿಸಲಾಗುವುದು ಎಂದು ಕೀನ್ಯಾದ ಉನ್ನತ ಪ್ರಾಸಿಕ್ಯೂಟರ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


