WWE ಸೂಪರ್ ಸ್ಟಾರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
ಡಿಸೆಂಬರ್ 20ರಂದು ನಿಧನರಾದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದ್ದರು.

ಮೆಕ್ಸಿಕೊ: ಖ್ಯಾತ ಮೆಕ್ಸಿಕನ್ ಕುಸ್ತಿಪಟು, ಡಬ್ಲ್ಯೂ ಡಬ್ಲ್ಯೂಇ ಸೂಪರ್‌ಸ್ಟಾರ್ ರೇ ಮಿಸ್ಟೀರಿಯೊ ಜೂನಿಯರ್ ಅವರ ಚಿಕ್ಕಪ್ಪ ರೇ ಮಿಸ್ಟೀರಿಯೊ ಸೀನಿಯರ್ (66) ಅವರು ನಿಧನರಾಗಿದ್ದಾರೆ.
ಡಿಸೆಂಬರ್ 20ರಂದು ನಿಧನರಾದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದ್ದರು. ವರ್ಲ್ಡ್ ವ್ರೆಸ್ಲಿಂಗ್ ಅಸೋಸಿಯೇಷನ್ ಮತ್ತು ಲುಚಾ ಲಿಬ್ರೆ ಎಎಎ ವರ್ಲ್ಡ್ ವೈಡ್ ನಂತಹ ಪ್ರಮುಖ ಸಂಸ್ಥೆಗಳೊಂದಿಗೆ ಚಾಂಪಿಯನ್‌ಶಿಪ್ ಪ್ರಶಸ್ತಿಗಳನ್ನು ಗಳಿಸಿದರು. ಇದನ್ನು ಸಾಮಾನ್ಯವಾಗಿ ಮೆಕ್ಸಿಕೋದ ಡಬ್ಲ್ಯೂ ಡಬ್ಲ್ಯೂಇ ಸಮಾನವೆಂದು ಪರಿಗಣಿಸಲಾಗುತ್ತದೆ.
ರೇ ಮಿಸ್ಟೀರಿಯೊ ಸೀನಿಯರ್ ಅವರು 1990 ರಲ್ಲಿ ವಿಶ್ವ ಚಾಂಪಿಯನ್ ಶಿಪ್ ವ್ರೆಸ್ಲಿಂಗ್ ನ ಸ್ಟಾರ್ ಕೇಡ್‌ನಂತಹ ಈವೆಂಟ್‌ಗಳನ್ನು ಒಳಗೊಂಡಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅವರ ಹಾರುವ ಶೈಲಿಯಿಂದ ಹೆಸರುವಾಸಿಯಾಗಿದ್ದಾರೆ.
ಮಿಸ್ಟೀರಿಯೊ ಅವರ ನಿಜವಾದ ಹೆಸರು ಮಿಗುಯೆಲ್ ಏಂಜೆಲ್ ಲೋಪೆಜ್ ಡಯಾಸ್. ಅವರ ಮರಣದ ವಿಚಾರವನ್ನು ಲುಚಾ ಲಿಬ್ರೆ ತನ್ನ ಎಕ್ಸ್ ಪೋಸ್ಟ್‌ನಲ್ಲಿ ಬಹಿರಂಗಪಡಿಸಿದೆ. ಮಿಸ್ಟೀರಿಯೋ ಸೀನಿಯರ್ ಅವರ ಸೋದರ ಸಂಬಂಧಿ ರೇ ಮಿಸ್ಟೀರಿಯೋ ಅವರು ಡಬ್ಲ್ಯೂಡಬ್ಲ್ಯೂಇ ಕೂಟದಲ್ಲಿ ಪ್ರಸಿದ್ದರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



