ಕುಸ್ತಿಪಟು

WWE ಸೂಪರ್ ಸ್ಟಾರ್ ರೇ ಮಿಸ್ಟೀರಿಯೊ ಸೀನಿಯರ್ ಇನ್ನಿಲ್ಲ
ಡಿಸೆಂಬರ್ 20ರಂದು ನಿಧನರಾದರು ಎಂದು ಅವರ ಕುಟುಂಬ ದೃಢಪಡಿಸಿದೆ. ಮಿಸ್ಟೀರಿಯೊ ಸೀನಿಯರ್ ಅವರು ಮೆಕ್ಸಿಕೋದಲ್ಲಿನ ಲುಚಾ ಲಿಬ್ರೆ ಕೂಟದಲ್ಲಿ ಖ್ಯಾತಿ ಗಳಿಸಿದ್ದರು.

ಸನ್ಮಾನ ಕಾರ್ಯಕ್ರಮದ ವೇಳೆ ಪ್ರಜ್ಞೆ ತಪ್ಪಿ ಬಿದ್ದ ಕುಸ್ತಿಪಟು ವಿನೇಶ್ ಫೋಗಟ್, ವಿಡಿಯೋ ವೈರಲ್!
ದೆಹಲಿಯಿಂದ ಸ್ವಗ್ರಾಮ ಬಲಾಲಿಗೆ ತೆರಳಿದ್ದ ವಿನೇಶ್ ಫೋಗಟ್ ಗೆ ಇಂದು ಗ್ರಾಮದ ಹಿರಿಯರು ಆಕೆಗೆ ಚಿನ್ನದ ಪದಕ ನೀಡಿ ಗೌರವಿಸಿದರು. ಇನ್ನು ಅಭಿನಂದನಾ ಸಮಾರಂಭದಲ್ಲಿ, ವಿನೇಶ್ ಫೋಗಟ್ ತುಂಬಾ ದಣಿದಂತೆ ಕಾಣುತ್ತಿದ್ದು ಕುರ್ಚಿಯಲ್ಲಿ ಕುಳಿದಿದ್ದ ಅವರು ಪ್ರಜ್ಞೆ ತಪ್ಪಿದರು.

Olympics 2024: ಭಾರತಕ್ಕೆ ಮತ್ತೊಂದು ಪದಕ ಖಾತ್ರಿ; ಕುಸ್ತಿಪಟು ವಿನೇಶ್ ಫೋಗಟ್ ಫೈನಲ್ಸ್ ಪ್ರವೇಶ!
ಕ್ಯೂಬಾದ ಯುಸ್ನೆಲಿಸ್ ಗುಜ್ಮನ್ ಲೋಪೆಜ್ ವಿರುದ್ಧ 5-0 ಅಂತರದಲ್ಲಿ ವಿನೇಶ್ ಫೋಗಟ್ ಗೆಲುವು ದಾಖಲಿಸಿದ್ದು, ಭಾರತಕ್ಕೆ ಮತ್ತೊಂದು ಪದಕ ಖಾತ್ರಿಯಾಗಿದೆ.

ಅಮಾನತುಗೊಂಡ WFI ಆಯೋಜಿಸಿದ್ದ ರಾಷ್ಟ್ರೀಯ ಸ್ಪರ್ಧೆಗೆ ಯಾವುದೇ ಮಹತ್ವವಿಲ್ಲ: ಸಾಕ್ಷಿ, ವಿನೇಶ್
ಪುಣೆಯಲ್ಲಿ WFI ಆಯೋಜಿಸಿರುವ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಯಾವುದೇ ಪ್ರಾಮುಖ್ಯತೆ ಇಲ್ಲ. ಅದರಲ್ಲಿ ನೀಡಲಾದ ಪ್ರಮಾಣಪತ್ರಗಳಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ ಎಂದು ಭಾರತದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ಅಮಾನತುಗೊಂಡಿರುವ...

WWE ಮಾಜಿ ಚಾಂಪಿಯನ್ ಬ್ರೇ ವ್ಯಾಟ್ ಹೃದಯಾಘಾತಕ್ಕೆ ಬಲಿ, ಕೇವಲ 36 ವರ್ಷ ವಯಸ್ಸು!!
ವರ್ಲ್ಡ್ ವ್ರೆಸ್ಲಿಂಗ್ ಎಂಟರ್‌ಟೈನ್‌ಮೆಂಟ್ (WWE) ಸ್ಟಾರ್ ಬ್ರೇ ವ್ಯಾಟ್ ಗುರುವಾರ ನಿಧನರಾಗಿದ್ದು ಅವರಿಗೆ ಕೇವಲ 36 ವರ್ಷ ವಯಸ್ಸಾಗಿತ್ತು ಎಂದು ತಿಳಿದುಬಂದಿದೆ.

ಕುಸ್ತಿಪಟುಗಳ ಪ್ರತಿಭಟನೆ: ಜೂನ್ 1 ರಂದು ಮುಜಾಫರ್‌ನಗರದಲ್ಲಿ ‘ಮಹಾ ಪಂಚಾಯತ್‘ ನಡೆಸುವುದಾಗಿ ಟಿಕಾಯತ್ ಘೋಷಣೆ
ಲೈಂಗಿಕ ಕಿರುಕುಳ ಆರೋಪದ ಮೇಲೆ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನೆಯ ಕುರಿತು ಚರ್ಚಿಸಲು ಮುಜಾಫರ್‌ನಗರದ ಸೊರಮ್ ಗ್ರಾಮದಲ್ಲಿ ಗುರುವಾರ 'ಮಹಾಪಂಚಾಯತ್' ನಡೆಯಲಿದೆ ಎಂದು ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ಮುಖಂಡ ನರೇಶ್ ಟಿಕಾಯತ್ ಬುಧವಾರ ಹೇಳಿದ್ದಾರೆ.

ಪ್ರತಿಭಟನಾನಿರತ ಕುಸ್ತಿಪಟುಗಳಿಗೆ ರಾಜ್ಯದ ಮಾಜಿ ಕ್ರೀಡಾಪಟುಗಳ ಬೆಂಬಲ
ಜಂತರ್ ಮಂತರ್‌ನಲ್ಲಿ ಕಳೆದ ಒಂದು ತಿಂಗಳಿನಿಂದ ಸಂಸದ ಮತ್ತು ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಅವರ ಲೈಂಗಿಕ ಕಿರುಕುಳದ ವಿರುದ್ಧ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳಿಗೆ ರಾಜ್ಯದ ಕ್ರೀಡಾಭಿಮಾನಿಗಳು ಹಾಗೂ ಮಾಜಿ ಕ್ರೀಡಾಪಟುಗಳು ಭಾನುವಾರ ಬೆಂಬಲ ವ್ಯಕ್ತಪಡಿಸಿದ್ದಾರೆ.

ನೂತನ ಸಂಸತ್ ಭವನದ ಹೊರಗೆ ಪ್ರತಿಭಟನೆ: ಕುಸ್ತಿಪಟುಗಳು ಸೇರಿ ಹಲವರು ವಶಕ್ಕೆ
ನೂತನವಾಗಿ ಉದ್ಘಾಟನೆಗೊಂಡ ಸಂಸತ್ ಭವನದ ಹೊರಗೆ ಪ್ರತಿಭಟನೆ ನಡೆಸಲು ಯತ್ನಿಸಿದ ಒಲಿಂಪಿಯನ್‌ಗಳು ಮತ್ತು ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್‌ಗಳು ಸೇರಿದಂತೆ ಭಾರತದ ಅಗ್ರಮಾನ್ಯ ಕುಸ್ತಿಪಟುಗಳನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಭಾನುವಾರ ತಿಳಿದುಬಂದಿದೆ.

ಅಡೆತಡೆ, ಸಮಸ್ಯೆಗಳನ್ನು ಮೀರಿ ಬೆಳೆದು ನಿಂತ ಯುವಕ ಇಂದು ಹಲವು ಪದಕ ವಿಜೇತ ದೇಹದಾರ್ಢ್ಯ ಕುಸ್ತಿಪಟು!
ಮೂರನೆಯ ವಯಸ್ಸಿನಲ್ಲಿ ನಡೆದ ರಸ್ತೆ ಅಪಘಾತದಿಂದ ಶ್ರವಣಶಕ್ತಿಯನ್ನು ಕಳೆದುಕೊಂಡ ರಾಜು, ಪೋಷಕರ ಪ್ರಯತ್ನ ಮತ್ತು ಮಾನಸಿಕ ಧೈರ್ಯ, ಸತತ ಪ್ರಯತ್ನದಿಂದ ದೇಹದಾರ್ಢ್ಯ ಮತ್ತು ತೋಳಿನ ಕುಸ್ತಿಯ ಬಗ್ಗೆ ಗಮನಹರಿಸಿ ರಾಜ್ಯದಲ್ಲಿಯೇ ಬಲಾಢ್ಯ ಕುಸ್ತಿಪಟುವಾಗಿ ಇಂದು ಪ್ರಶಸ್ತಿ ಗಳಿಸಿದ್ದಾರೆ.

