ವಿದೇಶ

Ukrain ಡ್ರೋಣ್ ದಾಳಿಗೆ ಕ್ಷಿಪಣಿ ದಾಳಿ ಮೂಲಕ Russia ಉತ್ತರ; ಬೆಚ್ಚಿಬಿದ್ದ ಕೀವ್ ಜನತೆ

ರಷ್ಯಾ ಮೇಲೆ ಡ್ರೋಣ್ ದಾಳಿ ನಡೆಸಿದ್ದ ಉಕ್ರೇನ್ ಗೆ ಕ್ಷಿಪಣಿ ದಾಳಿ ಮೂಲಕ ರಷ್ಯಾ ತಿರುಗೇಟು ನೀಡಿದ್ದು, ರಷ್ಯಾದ ದಿಢೀರ್ ಕ್ರಮಕ್ಕೆ ಉಕ್ರೇನ್ ರಾಜಧಾನಿ ಕೀವ್ ಜನತೆ ಬೆಚ್ಚಿ ಬಿದ್ದಿದ್ದಾರೆ.

Ukrain ಡ್ರೋಣ್ ದಾಳಿಗೆ ಕ್ಷಿಪಣಿ ದಾಳಿ ಮೂಲಕ Russia ಉತ್ತರ; ಬೆಚ್ಚಿಬಿದ್ದ ಕೀವ್ ಜನತೆ
Ukrain ಡ್ರೋಣ್ ದಾಳಿಗೆ ಕ್ಷಿಪಣಿ ದಾಳಿ ಮೂಲಕ ಉತ್ತರ ನೀಡಿದ Russia
Published On :

ಕೀವ್: ರಷ್ಯಾ ಮೇಲೆ ಡ್ರೋಣ್ ದಾಳಿ ನಡೆಸಿದ್ದ ಉಕ್ರೇನ್ ಗೆ ಕ್ಷಿಪಣಿ ದಾಳಿ ಮೂಲಕ ರಷ್ಯಾ ತಿರುಗೇಟು ನೀಡಿದ್ದು, ರಷ್ಯಾದ ದಿಢೀರ್ ಕ್ರಮಕ್ಕೆ ಉಕ್ರೇನ್ ರಾಜಧಾನಿ ಕೀವ್ ಜನತೆ ಬೆಚ್ಚಿ ಬಿದ್ದಿದ್ದಾರೆ.

ಸೋಮವಾರ ಬೆಳಿಗ್ಗೆ ಕೇಂದ್ರ ಕೈವ್‌ನಲ್ಲಿ ರಷ್ಯಾ ಕ್ಷಿಪಣಿಗಳು ಅಬ್ಬರಿಸಿದ್ದು, 11 ಹೆಚ್ಚು ಸ್ಥಳಗಳಲ್ಲಿ ಕ್ಷಿಪಣಿ ದಾಳಿ ನಡೆದಿದೆ. ರಷ್ಯಾ ಸೇನೆಯ 11 TU-95 ಕ್ಷಿಪಣಿಗಳು ಏಕಕಾಲದಲ್ಲಿ ಅಪ್ಪಳಿಸಿದ್ದು, ಈ ವೇಳೆ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ ಎಂದು ಹೇಳಲಾಗಿದೆ.

ಉಕ್ರೇನ್ ನ ವಾಯುದಳವನ್ನು ಗುರಿಯಾಗಿಸಿಕೊಂಡು ರಷ್ಯಾ ಈ ದಾಳಿ ನಡೆಸಿದ್ದು, ಉಕ್ರೇನ್ ನ ವಾಯುವ್ಯ ನಗರವಾದ ಲುಟ್ಸ್ಕ್‌ನಲ್ಲಿ ಸ್ಫೋಟಗಳು ವರದಿಯಾಗಿವೆ. ಸ್ಫೋಟದಿಂದಾಗಿ ಅಪಾರ್ಟ್ಮೆಂಟ್ ಬ್ಲಾಕ್‌ಗೆ ಹಾನಿಯಾಗಿದ್ದು, ಸಂಭವನೀಯ ಸಾವುನೋವುಗಳನ್ನು ಪರಿಶೀಲಿಸುತ್ತಿದ್ದೇವೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.