ವಿದೇಶ

ಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿನ ಮನೆ ತೊರೆದ 1 ಮಿಲಿಯನ್ ಪ್ಯಾಲೆಸ್ಟೀನಿಯರು; 12,500 ಮಂದಿ ಗಾಯ

ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೂಚನೆ ನೀಡಿದ ನಂತರ ಗಾಜಾದ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟಿರುವ 1 ಮಿಲಿಯನ್ ಗಿಂತಲೂ ಹೆಚ್ಚುಪ್ಯಾಲೆಸ್ಟೀನಿಯರು ಉತ್ತರ ಮತ್ತು ಗಾಜಾ ನಗರದಲ್ಲಿನ ಮನೆಗಳನ್ನು ತೊರೆದಿದ್ದಾರೆ.

ಇಸ್ರೇಲ್-ಹಮಾಸ್ ಯುದ್ಧ: ಗಾಜಾದಲ್ಲಿನ ಮನೆ ತೊರೆದ 1 ಮಿಲಿಯನ್ ಪ್ಯಾಲೆಸ್ಟೀನಿಯರು; 12,500 ಮಂದಿ ಗಾಯ
ಇಸ್ರೇಲ್ ವಾಯುದಾಳಿ ನಡುವೆ ಪರಿಹಾರ ಕಾರ್ಯದಲ್ಲಿ ತೊಡಗಿರುವ ಪ್ಯಾಲೆಸ್ಟೀನಿಯರು
Published On :

ಗಾಜಾ: ಸ್ಥಳಾಂತರಗೊಳ್ಳುವಂತೆ ಇಸ್ರೇಲ್ ಸೂಚನೆ ನೀಡಿದ ನಂತರ ಗಾಜಾದ ಜನಸಂಖ್ಯೆಯ ಸರಿಸುಮಾರು ಅರ್ಧದಷ್ಟಿರುವ 1 ಮಿಲಿಯನ್ ಗಿಂತಲೂ ಹೆಚ್ಚುಪ್ಯಾಲೆಸ್ಟೀನಿಯರು ಉತ್ತರ ಮತ್ತು ಗಾಜಾ ನಗರದಲ್ಲಿನ ಮನೆಗಳನ್ನು ತೊರೆದಿದ್ದಾರೆ. 

ದಕ್ಷಿಣ ಗಾಜಾದಲ್ಲಿ ಗುರುವಾರ ರಾತ್ರಿಯಿಡೀ ವೈಮಾನಿಕ ದಾಳಿ ಮುಂದುವರೆಯಿತು, ಆಂಬ್ಯುಲೆನ್ಸ್‌ಗಳು ಗಾಯಾಳುಗಳನ್ನು ಗಾಜಾದ ಎರಡನೇ ಅತಿದೊಡ್ಡ ಆಸ್ಪತ್ರೆಯಾದ ಖಾನ್ ಯೂನಿಸ್ ದಲ್ಲಿನ ನಾಸರ್‌ ಗೆ ಸಾಗಿಸಿದವು.

ಅಮೆರಿಕ ಅಧ್ಯಕ್ಷ ಜೋ-ಬೈಡನ್ ಅವರ ಮನವಿ ಮೇರೆಗೆ  ಈಜಿಪ್ಟ್‌ನಿಂದ ಗಾಜಾಕ್ಕೆ ಸೀಮಿತ ಮಾನವೀಯ ಸಹಾಯವನ್ನು ಅನುಮತಿಸಲಾಗುವುದು ಎಂದು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಕಚೇರಿ ಬುಧವಾರ ಹೇಳಿತ್ತು.

ಹಮಾಸ್ ಉಗ್ರಗಾಮಿಗಳು ಇಸ್ರೇಲ್‌ಗೆ ನುಗ್ಗಿದ ನಂತರ ಅಕ್ಟೋಬರ್ 7 ರಂದು ಪ್ರಾರಂಭವಾದ ಯುದ್ಧವು ಎರಡೂ ಕಡೆಯ ಐದು ಗಾಜಾ ಯುದ್ಧಗಳಲ್ಲಿ ಅತ್ಯಂತ ಮಾರಕವಾಗಿದೆ. ಇಲ್ಲಿಯವರೆಗೂ 3,785 ಪ್ಯಾಲೆಸ್ಟೀನಿಯ ಸಾವನ್ನಪ್ಪಿದ್ದಾರೆ ಮತ್ತು ಸುಮಾರು 12,500 ಜನರು ಗಾಯಗೊಂಡಿದ್ದಾರೆ ಎಂದು ಹಮಾಸ್ ನಡೆಸುತ್ತಿರುವ ಗಾಜಾ ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.