ಕೆನಡಾದ ಎಡ್ಮಂಟನ್ ನಲ್ಲಿ ಗುಂಪು ಹಿಂಸಾಚಾರಲ್ಲಿ ಇಬ್ಬರು ಸಿಖ್ಖರ ಹತ್ಯೆ
ಕೆನಡಾದ ಎಡ್ಮಂಟ್ ನಲ್ಲಿ ನಡೆದ ಗುಂಪು ಹಿಂಸಾಚಾರದಲ್ಲಿ ಇಬ್ಬರು ಸಿಖ್ ವ್ಯಕ್ತಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ಒಟ್ಟಾವಾ: ಕೆನಡಾದ ಎಡ್ಮಂಟ್ ನಲ್ಲಿ ನಡೆದ ಗುಂಪು ಹಿಂಸಾಚಾರದಲ್ಲಿ ಇಬ್ಬರು ಸಿಖ್ ವ್ಯಕ್ತಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.
ಕೆನಡಾದಲ್ಲಿ ನಡೆದ ಈ ಹಿಂಸಾಚಾರವನ್ನು, ಉನ್ನತ ಮಟ್ಟದ ವ್ಯಕ್ತಯನ್ನೊಳಗೊಂಡ ಸಂಘಟಿತ ಅಪರಾಧ ಎಂದು ವಿಶ್ಲೇಷಿಸಲಾಗುತ್ತಿದೆ. ಘಟನೆಯಲ್ಲಿ ಸಿಖ್ ವ್ಯಕ್ತಿ ಹಾಗೂ ಆತನ 11 ವರ್ಷದ ಪುತ್ರ ಸಾವನ್ನಪ್ಪಿದ್ದಾರೆ.
ಎಡ್ಮಂಟನ್ ನಲ್ಲಿ ನಡೆದ ಘಟನೆಯನ್ನು ಕೆನಡಾದ ಪೊಲೀಸರು ಭಯಾನಕ ಗ್ಯಾಂಗ್ ಹಿಂಸಾಚಾರ ಎಂದು ಪೊಲೀಸರು ಹೇಳಿದ್ದಾರೆ.
ಹರ್‌ಪ್ರೀತ್ ಸಿಂಗ್ ಉಪ್ಪಲ್, 41, ಮತ್ತು ಅವರ ಮಗನನ್ನು ಗುರುವಾರ ಮಧ್ಯಾಹ್ನ ಗ್ಯಾಸ್ ಸ್ಟೇಷನ್‌ನ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು ಎಂದು ಎಡ್ಮಂಟನ್ ಪೊಲೀಸ್ ಮುಖ್ಯಸ್ಥರಾದ ಕಾಲಿನ್ ಡೆರ್ಕ್ಸೆನ್ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: "ಪ್ರತಿ ಬೆದರಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ": ಖಲಿಸ್ತಾನಿ ಉಗ್ರನ ವೀಡಿಯೊ ಕುರಿತು ಕೆನಡಾ ಪ್ರತಿಕ್ರಿಯೆ
ಉಪ್ಪಲ್ ಅವರನ್ನು ಶೂಟರ್ ಗಳು ಹಿಂಬಾಲಿಸಲು ಪ್ರಾರಂಭಿಸಿದಾಗ ಕಾರಿನಲ್ಲಿ ಅವರ ಮಕ್ಕಳಿದ್ದ ಬಗ್ಗೆ ಶೂಟರ್ ಗಳಿಗೆ ಖಚಿತ ಮಾಹಿತಿ ಇತ್ತೇ ಎಂಬ ಬಗ್ಗೆ ಎಂದು ಪೊಲೀಸರಿಗೆ ತಿಳಿದಿಲ್ಲ ಎಂದು ಡೆರ್ಕ್ಸೆನ್ ಹೇಳಿದ್ದಾರೆ.
"ಶೂಟರ್ ಅಥವಾ ಶೂಟರ್‌ಗಳು ಮಗ ಅಲ್ಲಿದ್ದಾನೆಂದು ತಿಳಿದ ನಂತರ, ಅವರು ಉದ್ದೇಶಪೂರ್ವಕವಾಗಿ ಅವನನ್ನು ಗುಂಡು ಹಾರಿಸಿ ಕೊಂದಿದ್ದಾರೆ" ಎಂಬುದು ನಮಗೆ ತಿಳಿದಿರುವ ಸಂಗತಿಯಾಗಿದೆ ಎಂದು ಎಡ್ಮಂಟನ್ ಜರ್ನಲ್ ಡೆರ್ಕ್ಸೆನ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಪ್ರಕಟಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


