ವಿದೇಶ

ಗಾಜಾ ಹಿಂಸಾಚಾರವನ್ನು ಅಮೆರಿಕಾ ಬೆಂಬಲಿಸುತ್ತಿದೆ: ಶ್ವೇತಭವನದ ದೀಪಾವಳಿ ಆಚರಣೆ ಆಹ್ವಾನ ನಿರಾಕರಿಸಿದ ರೂಪಿ ಕೌರ್!

ಯುದ್ಧ ಪೀಡಿತ ಪ್ಯಾಲೆಸ್ತೀನ್ ಬೆಂಬಲಿಸಿರುವ ಪ್ರಸಿದ್ಧ ಕವಯಿತ್ರಿ ರೂಪಿ ಕೌರ್ ಅವರು, ಅಮೆರಿಕಾ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರ ದೀಪಾವಳಿ ಆಹ್ವಾನವನ್ನು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.

ಗಾಜಾ ಹಿಂಸಾಚಾರವನ್ನು ಅಮೆರಿಕಾ ಬೆಂಬಲಿಸುತ್ತಿದೆ: ಶ್ವೇತಭವನದ ದೀಪಾವಳಿ ಆಚರಣೆ ಆಹ್ವಾನ ನಿರಾಕರಿಸಿದ ರೂಪಿ ಕೌರ್!
ರೂಪಿ ಕೌರ್
Published On :

ಜೆರುಸಲೇಂ: ಯುದ್ಧ ಪೀಡಿತ ಪ್ಯಾಲೆಸ್ತೀನ್ ಬೆಂಬಲಿಸಿರುವ ಪ್ರಸಿದ್ಧ ಕವಯಿತ್ರಿ ರೂಪಿ ಕೌರ್ ಅವರು, ಅಮೆರಿಕಾ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರ ದೀಪಾವಳಿ ಆಹ್ವಾನವನ್ನು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.

ಗಾಝಾ ಮೇಲಿನ ದಾಳಿಯಲ್ಲಿ ಇಸ್ರೇಲ್ ಗೆ ಅಮೆರಿಕ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಕೌರ್ ಆಹ್ವಾನವನ್ನು ತಿರಸ್ಕರಿಸಿದ್ದಾರೆಂದು ವರದಿಗಳು ತಿಳಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ರೂಪಿ ಕೌರ್ ಅವರು, “ಅಮೆರಿಕ ಸರ್ಕಾರವು ಗಾಜಾದ ಮೇಲಿನ ಬಾಂಬ್ ದಾಳಿಗೆ ಕೇವಲ ಹಣವನ್ನಷ್ಟೇ ನೀಡುತ್ತಿಲ್ಲ. ಅವರು ನಿರಾಶ್ರಿತ ಶಿಬಿರಗಳು, ಅಲ್ಲಿನ ಆರೋಗ್ಯ ಪರಿಸ್ಥಿತಿ ಲೆಕ್ಕಿಸದೆ ಪ್ಯಾಲೆಸ್ತೀನಿನ ವಿರುದ್ಧದ ನರಮೇಧವನ್ನು ಸಮರ್ಥಿಸುತ್ತಿದ್ದಾರೆ. ಗಾಜಾವಾಸಿಗಳ ಮೂಲಭೂತ ಸೌಲಭ್ಯಗಳನ್ನು ತಡೆಹಿಡಯಲಾಗಿದೆ. ಅವರ ಪೂಜಾ ಸ್ಥಳಗಳು ಧ್ವಂಸಗೊಂಡಿವೆ” ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆಯಲ್ಲಿ, ಕೌರ್ ಪ್ಯಾಲೆಸ್ತೀನ್ ಕುರಿತ ಅಮೆರಿಕ ನೀತಿಯು "ದೀಪಾವಳಿಯ ಸ್ಪೂರ್ತಿ" ಯೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ತಿಳಿಸಿದ್ದಾರೆ.

"ಒಬ್ಬ ಸಿಖ್ ಮಹಿಳೆಯಾಗಿ ನಾಗರಿಕರ ಮೇಲಿನ ಸಾಮೂಹಿಕ ಶಿಕ್ಷೆಯನ್ನು ಬೆಂಬಲಿಸುವ ಸರಕಾರದಿಂದ, ಯಾವುದೇ ಆಹ್ವಾನವನ್ನು ನಾನು ನಿರಾಕರಿಸುತ್ತೇನೆ. ಶಿಕ್ಷೆ ಅನುಭವಿಸುತ್ತಿರುವರಲ್ಲಿ ಶೇ.50ರಷ್ಟು ಮಕ್ಕಳಿದ್ದಾರೆ. “ಗಾಜಾದಲ್ಲಿ ವಿಶ್ವಸಂಸ್ಥೆಯ ಮಾನವೀಯ ಕದನ ವಿರಾಮದ ಕರೆಯನ್ನು ಅಮೆರಿಕ ತಿರಸ್ಕರಿಸಿದೆ. ಡಾಕ್ಟರ್ಸ್ ವಿಥೌಟ್ ಬಾರ್ಡರ್ಸ್, ರೆಡ್ಕ್ರಾಸ್ ಮತ್ತು ಹೆಚ್ಚಿನ ದೇಶಗಳು ಕದನ ವಿರಾಮ ಬಯಸುತ್ತಿದೆ. ಗಾಜಾ – ಇಸ್ರೇಲ್ ಬಿಕ್ಕಟ್ಟಿನಿಂದ 10,000 ಕ್ಕೂ ಹೆಚ್ಚು ಪ್ಯಾಲೆಸ್ತೀನಿಯರ ಹತ್ಯೆಯಾಗಿದೆ. ಸತ್ತವರಲ್ಲಿ ಶೇ.70ರಷ್ಟು ಮಹಿಳೆಯರು ಮತ್ತು ಮಕ್ಕಳು ಸೇರಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.

ಇಸ್ರೇಲ್ ಬಿಳಿ ರಂಜಕ ಬಾಂಬ್ಗಳನ್ನು ಬಳಸುವುದನ್ನು ನಾವು ನೋಡಿದ್ದೇವೆ, ಅಮ್ನೆಸ್ಟಿ ಇಂಟರ್ನ್ಯಾಷನಲ್ ಹೇಳುವ ಪ್ರಕಾರ ಇದು ಯುದ್ಧ ಅಪರಾಧದ ಅಡಿಯಲ್ಲಿ ತನಿಖೆಯಾಗಬೇಕು. ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ತೀನಿಯನ್ನರ ಮನೆಗಳನ್ನು ಇಸ್ರೇಲ್ ಒತ್ತಾಯಪೂರ್ವಕವಾಗಿ ಆಕ್ರಮಿಸಿಕೊಂಡಿರುವ ದೃಶ್ಯಗಳನ್ನು ನಾವು ಸಿಎನ್ಎನ್ನಲ್ಲಿ ನೋಡಿದ್ದೇವೆ” ಎಂದು ತಿಳಿಸಿದ್ದಾರೆ.

ಕೌರ್ ಭಾರತ ಮೂಲದ ಕೆನಡಾದ ಕವಯಿತ್ರಿ. ಅವರು ಇನ್ಸ್ಟಾಗ್ರಾಂನಲ್ಲಿ ಪ್ರಕಟಿಸಿದ ಕವನಗಳು ಖ್ಯಾತಿಗಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.