ವಿದೇಶ

ಭಾರತ-ಫ್ರಾನ್ಸ್ 25 ವರ್ಷಗಳ ಬಂಧವನ್ನು ಆಚರಿಸುತ್ತಿವೆ, ಪ್ರೀತಿಯ ಮೋದಿಯವರಿಗೆ...: ಹಿಂದಿಯಲ್ಲಿ ಸ್ವಾಗತ ಕೋರಿದ ಫ್ರಾನ್ಸ್ ಅಧ್ಯಕ್ಷ!

ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಶುಕ್ರವಾರ ಹಿಂದಿಯಲ್ಲಿ ಬರೆದ ವಿಶೇಷ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡಿರುವ ಹೃದಯಸ್ಪರ್ಶಿ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಭಾರತ-ಫ್ರಾನ್ಸ್ 25 ವರ್ಷಗಳ ಬಂಧವನ್ನು ಆಚರಿಸುತ್ತಿವೆ, ಪ್ರೀತಿಯ ಮೋದಿಯವರಿಗೆ...: ಹಿಂದಿಯಲ್ಲಿ ಸ್ವಾಗತ ಕೋರಿದ ಫ್ರಾನ್ಸ್ ಅಧ್ಯಕ್ಷ!
ಪರಸ್ಪರ ಆಲಂಗಿಸಿಕೊಂಡ ಉಭಯ ನಾಯಕರು
Published On :

ಪ್ಯಾರಿಸ್: ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರು ಇಂದು ಶುಕ್ರವಾರ ಹಿಂದಿಯಲ್ಲಿ ಬರೆದ ವಿಶೇಷ ಟ್ವೀಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಅಪ್ಪಿಕೊಂಡಿರುವ ಹೃದಯಸ್ಪರ್ಶಿ ಚಿತ್ರವನ್ನು ಹಂಚಿಕೊಂಡಿದ್ದಾರೆ. ಭಾರತ-ಫ್ರಾನ್ಸ್ ಪಾಲುದಾರಿಕೆಯ 25ನೇ ವರ್ಷಾಚರಣೆ ಸಂದರ್ಭದಲ್ಲಿ ಅವರು ಟ್ವೀಟ್ ಮಾಡಿ, "ಭಾರತ ಮತ್ತು ಫ್ರಾನ್ಸ್ ನಡುವಿನ ರಾಷ್ಟ್ರಗಳ ಕಾರ್ಯತಂತ್ರದ ಪಾಲುದಾರಿಕೆ ವಿಶ್ವಾಸ ಮತ್ತು ಸ್ನೇಹದ ಆಚರಣೆ'' ಎಂದು ಕರೆದಿದ್ದಾರೆ. 

ಆತ್ಮೀಯ ನರೇಂದ್ರ ಮೋದಿಯವರಿಗೆ ಹೃತ್ಪೂರ್ವಕ ಸ್ವಾಗತ" ಎಂದು ಮ್ಯಾಕ್ರೊನ್ ತಮ್ಮ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಎರಡು ದಿನಗಳ ಮಹತ್ವದ ಪ್ರವಾಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ನಿನ್ನೆ ಪ್ಯಾರಿಸ್‌ಗೆ ಆಗಮಿಸಿದ್ದು, 26 ರಫೇಲ್ ಯುದ್ಧವಿಮಾನಗಳು ಮತ್ತು ಸ್ಕಾರ್ಪೀನ್ ಜಲಾಂತರ್ಗಾಮಿ ನೌಕೆಗಳ ಒಪ್ಪಂದದ ಬಗ್ಗೆ ಅವರ ದ್ವಿಪಕ್ಷೀಯ ಮಾತುಕತೆಯಿರುತ್ತದೆ. ಇಂದು ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದಾರೆ. 

ಭಾರತೀಯ ಸೇನೆಗಳ ತ್ರಿ-ಸೇವೆಗಳ 269-ಸದಸ್ಯರ ತುಕಡಿ ಮತ್ತು 3 ರಫೇಲ್ ಜೆಟ್‌ಗಳು ಪರೇಡ್‌ನ ಮೇಲೆ ಫ್ಲೈಪಾಸ್ಟ್ ನ್ನು ಪ್ರದರ್ಶಿಸುತ್ತವೆ, ಇಂದಿನ ಕಾರ್ಯಕ್ರಮವು ಭಾರತಕ್ಕೆ ಹೆಚ್ಚಿನ ಮಹತ್ವದ್ದಾಗಿದೆ.

ನಿನ್ನೆ ಫ್ರಾನ್ಸ್ ತನ್ನ ಅತ್ಯುನ್ನತ ನಾಗರಿಕ ಮತ್ತು ಮಿಲಿಟರಿ ಗೌರವವನ್ನು ಪ್ರಧಾನ ಮಂತ್ರಿ ಮೋದಿಯವರಿಗೆ ಗ್ರ್ಯಾಂಡ್ ಕ್ರಾಸ್ ಆಫ್ ದಿ ಲೀಜನ್ ಆಫ್ ಆನರ್ ನ್ನು ನೀಡಿ ಗೌರವಿಸಿದೆ. ಇದಕ್ಕೆ ಫ್ರಾನ್ಸ್ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿದ ಪ್ರಧಾನಿ, ಇದು ಭಾರತದ 140 ಕೋಟಿ ಜನರಿಗೆ ಗೌರವ ಎಂದು ಕರೆದಿದ್ದಾರೆ. 

ಪ್ಯಾರಿಸ್‌ನ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ನಿನ್ನೆ ಸಾಯಂಕಾಲ "ಭಾರತ್ ಮಾತಾ ಕಿ ಜೈ" ಘೋಷಣೆಗಳ ನಡುವೆ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡುವಾಗ ಪ್ರಧಾನಿಯವರು ತಮ್ಮ ಭೇಟಿಯನ್ನು ಭಾರತ ಮತ್ತು ಫ್ರಾನ್ಸ್ ನಡುವಿನ ಅವಿನಾಭಾವ ಸ್ನೇಹದ ಪ್ರತಿಬಿಂಬ ಎಂದು ಕರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.