ರಾಡಾರ್ ಅಸಂಗತತೆ ಪತ್ತೆ, ಮೊಂಟಾನಾ ವಾಯುಪ್ರದೇಶದಲ್ಲಿ ಯಾವುದೇ ವಸ್ತು ಪತ್ತೆಯಾಗಿಲ್ಲ: ಅಮೆರಿಕ ಮಿಲಿಟರಿ ಸ್ಪಷ್ಟನೆ
ಅಮೆರಿಕಾದ ಮೊಂಟಾನಾ ರಾಜ್ಯದ ಭಾಗದಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದ್ದು ಆಗಸದಲ್ಲಿ ಕಂಡುಬಂದ ಅಸಹಜ ವಸ್ತುವಿನ ಬಗ್ಗೆ ತನಿಖೆ ನಡೆಸಲು ಯುದ್ಧ ವಿಮಾನವನ್ನು ಕಳುಹಿಸಲಾಗಿದೆ ಆದರೆ ವಿಮಾನವು ಆಕಾಶದಲ್ಲಿ ಅಸಾಮಾನ್ಯವಾದದ್ದನ್ನು ಏನೂ ಗುರುತಿಸಿಲ್ಲ ಎಂದು ಅಮೆರಿಕ ಮಿಲಿಟರಿ ಹೇಳಿದೆ.

ವಾಷಿಂಗ್ಟನ್: ಅಮೆರಿಕಾದ ಮೊಂಟಾನಾ ರಾಜ್ಯದ ಭಾಗದಲ್ಲಿ ವಾಯುಪ್ರದೇಶವನ್ನು ಮುಚ್ಚಲಾಗಿದ್ದು ಆಗಸದಲ್ಲಿ ಕಂಡುಬಂದ ಅಸಹಜ ವಸ್ತುವಿನ ಬಗ್ಗೆ ತನಿಖೆ ನಡೆಸಲು ಯುದ್ಧ ವಿಮಾನವನ್ನು ಕಳುಹಿಸಲಾಗಿದೆ ಆದರೆ ವಿಮಾನವು ಆಕಾಶದಲ್ಲಿ ಅಸಾಮಾನ್ಯವಾದದ್ದನ್ನು ಏನೂ ಗುರುತಿಸಿಲ್ಲ ಎಂದು ಅಮೆರಿಕ ಮಿಲಿಟರಿ ಹೇಳಿದೆ.
ಉತ್ತರ ಅಮೆರಿಕಾದ ವಾಯು ರಕ್ಷಣಾ ಪಡೆ, ರೇಡಾರ್ ವೈಪರೀತ್ಯವನ್ನು ಪತ್ತೆಹಚ್ಚಿದೆ. ತನಿಖೆಗಾಗಿ ಯುದ್ಧ ವಿಮಾನವನ್ನು ಕಳುಹಿಸಿದೆ. ಆ ವಿಮಾನಗಳು ರಾಡಾರ್ ಗಳಿಗೆ ಪರಸ್ಪರ ಸಂಬಂಧ ಹೊಂದಲು ಯಾವುದೇ ವಸ್ತುವನ್ನು ಗುರುತಿಸಲಿಲ್ಲ ಎಂದು ಉತ್ತರ ಅಮೆರಿಕಾದ ಏರೋಸ್ಪೇಸ್ ಡಿಫೆನ್ಸ್ ಕಮಾಂಡ್ ಮತ್ತು ಯುಎಸ್ ನಾರ್ದರ್ನ್ ಕಮಾಂಡ್‌ನ ಹೇಳಿಕೆ ತಿಳಿಸಿದೆ.
ಅಧಿಕಾರಿಗಳು ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಯುಎಸ್-ಕೆನಡಾದ ಜಂಟಿ ಕಾರ್ಯಾಚರಣೆಯು ಕೆನಡಾದ ಯುಕಾನ್ ಪ್ರದೇಶದ ಮೇಲೆ ವಸ್ತುವನ್ನು ಹೊಡೆದುರುಳಿಸಿದ ಕೆಲವೇ ಗಂಟೆಗಳ ನಂತರ ಅಮೆರಿಕ ಸರ್ಕಾರ ಈ ಕ್ರಮ ಕೈಗೊಂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


