ಚುನಾವಣಾ ವಂಚನೆ ಪ್ರಕರಣ: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ, ಬಿಡುಗಡೆ
ಚುನಾವಣಾ ವಂಚನೆ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಬಂಧಿಸಿ, ಜಾರ್ಜಿಯಾ ಜೈಲಿನಲ್ಲಿ ಇಡಲಾಗಿತ್ತು. ತದನಂತರ 200,000 ಡಾಲರ್ ಬಾಂಡ್‌ನಲ್ಲಿ ಜಾಮೀನು ಪಡೆದು ಸುಮಾರು ಜೈಲಿನಿಂದ ಹೊರಗೆ ಬಂದಿದ್ದಾರೆ.

ಅಟ್ಲಾಂಟಾ: ಚುನಾವಣಾ ವಂಚನೆ ಪ್ರಕರಣದಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುರುವಾರ ಬಂಧಿಸಿ, ಜಾರ್ಜಿಯಾ ಜೈಲಿನಲ್ಲಿ ಇಡಲಾಗಿತ್ತು. ತದನಂತರ 200,000 ಡಾಲರ್ ಬಾಂಡ್‌ನಲ್ಲಿ ಜಾಮೀನು ಪಡೆದು ಸುಮಾರು ಜೈಲಿನಿಂದ ಹೊರಗೆ ಬಂದಿದ್ದಾರೆ.
2020 ರ ಚುನಾವಣಾ ಫಲಿತಾಂಶ ರದ್ದತಿಯಲ್ಲಿ ಇತರ 18 ಆರೋಪಿಗಳೊಂದಿಗೆ ಸಹಕರಿಸಿದ ಆರೋಪ ಹೊತ್ತಿರುವ ಟ್ರಂಪ್ ಅವರನ್ನು ಬಂಧಿಸಿ ಅಟ್ಲಾಂಟಾದ ಫುಲ್ಟನ್ ಕೌಂಟಿ ಜೈಲಿನಲ್ಲಿ ಇಡಲಾಗಿತ್ತು. 20 ನಿಮಿಷಗಳ ನಂತರ ಅವರನ್ನು ಜೈಲಿನಿಂದ ಹೊರಗೆ ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ.
ಈ ಪ್ರಕರಣದ ಇತರ ಆರೋಪಿಗಳಂತೆ 77 ವರ್ಷದ ಟ್ರಂಪ್ ಕೂಡಾ ಕಾನೂನಿಗೆ ಶರಣಾಗಿದ್ದಾರೆ. ಅಮೆರಿಕದಲ್ಲಿ ಈ ರೀತಿ ಜೈಲಿಗೆ ಹೋದ ಅಮೆರಿಕದ ಮಾಜಿ ಅಧ್ಯಕ್ಷರಲ್ಲಿ ಟ್ರಂಪ್ ಅವರೇ ಮೊದಲಿಗರಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ಇದು "ಅಮೆರಿಕಕ್ಕೆ ಬಹಳ ದುಃಖದ ದಿನವಾಗಿದೆ. ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ ನಾನು ಯಾವುದೇ ತಪ್ಪು ಮಾಡಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


