ವಿಶ್ವಸಂಸ್ಥೆಯಲ್ಲಿ ರಷ್ಯಾದಿಂದ ನಿರ್ಣಯ, ಮತದಾನದಿಂದ ದೂರ ಉಳಿದ ಭಾರತ
ಭಾರತ ಸೇರಿದಂತೆ ಇತರ ರಾಷ್ಟ್ರಗಳ ಸದಸ್ಯರು ಮತದಾನದಿಂದ ದೂರ ಉಳಿದರು. ಇದರಿಂದಾಗಿ ನಿರ್ಣಯಕ್ಕೆ ಬುಧವಾರ ಸೋಲಾಯಿತು.

ನ್ಯೂಯಾರ್ಕ್: ಉಕ್ರೇನ್ಗೆ ಸಂಬಂಧಿಸಿದ ಮತ್ತೊಂದು ನಿರ್ಣಯ ಕುರಿತ ಮತದಾನದಿಂದ ಭಾರತ ದೂರ ಉಳಿದಿದೆ. ಉಕ್ರೇನ್ ನಲ್ಲಿ ಅಮೆರಿಕ ಮತ್ತು ಉಕ್ರೇನ್ ಮಿಲಿಟರಿ ಚಟುವಟಿಕೆ ನಡೆಸುತ್ತಿರುವುದು ಜೈವಿಕ ಶಸ್ತ್ರಾಸ್ತ್ರಗಳ ಸಮಾವೇಶದ ಉಲ್ಲಂಘನೆಯಾಗಿದೆ. ಈ ಕುರಿತ ತನಿಖೆಗೆ ಆಯೋಗವೊಂದನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ ವಿಶ್ವ ಸಂಸ್ಥೆ ಭದ್ರತಾ ಮಂಡಳಿಯಲ್ಲಿ ರಷ್ಯಾನಿರ್ಣಯವನ್ನು ಮಂಡಿಸಿತು.
ರಷ್ಯಾ ಮತ್ತು ಚೀನಾದ ಸದಸ್ಯರು ಮತ್ತು ನಿರ್ಣಯ ಮೇಲೆ ಮತ ಹಾಕಿದರು. ಅಮೆರಿಕ, ಇಂಗ್ಲೆಂಡ್ ಮತ್ತು ಫ್ರಾನ್ಸ್ ನಿರ್ಣಯದ ವಿರುದ್ಧ ಮತದಾನ ಮಾಡಿದರು. ಭಾರತ ಸೇರಿದಂತೆ ಇತರ ರಾಷ್ಟ್ರಗಳ ಸದಸ್ಯರು ಮತದಾನದಿಂದ ದೂರ ಉಳಿದರು. ಇದರಿಂದಾಗಿ ನಿರ್ಣಯಕ್ಕೆ ಬುಧವಾರ ಸೋಲಾಯಿತು.
ಜೈವಿಕ ಶಸಾಸ್ತ್ರ ಸಮಾವೇಶಕ್ಕೆ ಭಾರತ ಹೆಚ್ಚಿನ ಒತ್ತು ನೀಡುತ್ತದೆ. ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಭಾರತ ಬದ್ಧವಾಗಿದೆ ಎಂದು ಭಾರತದ ಖಾಯಂ ಪ್ರತಿನಿಧಿ ಎ.ಅಮರನಾಥ್ ತಿಳಿಸಿದರು. ಜೈವಿಕ ಶಸಾಸ್ತ್ರ ಸಮಾವೇಶದ ನಿರ್ಣಯಗಳನ್ನು ಅದರ ಸದಸ್ಯ ರಾಷ್ಟ್ರಗಳು ಅನುಷ್ಠಾನಗೊಳಿಸುವ ಮೂಲಕ ಅದನ್ನು ಬಲಪಡಿಸಬೇಕಾದ ಅಗತ್ಯವಿದೆ. ಹೀಗಾಗಿ ಭಾರತ ನಿರ್ಣಯದಿಂದ ದೂರ ಉಳಿಯಿತು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


