ಹದಗೆಟ್ಟ ಪರಿಸ್ಥಿತಿ; ದಿನನಿತ್ಯದ ಕೋವಿಡ್ ಅಂಕಿ-ಸಂಖ್ಯೆಗಳ ಪ್ರಕಟಣೆ ನಿಲ್ಲಿಸಲಿರುವ ಚೀನಾ
ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದ್ದು, ಆರೋಗ್ಯ ವ್ಯವಸ್ಥೆ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೋವಿಡ್-19 ಅಂಕಿ-ಸಂಖ್ಯೆಗಳ ಪ್ರಕಟಣೆಯನ್ನು ನಿಲ್ಲಿಸಲು ಚೀನಾ ಆರೋಗ್ಯ ಆಯೋಗ ನಿರ್ಧರಿಸಿದೆ.

ನವದೆಹಲಿ: ಚೀನಾದಲ್ಲಿ ಕೋವಿಡ್-19 ಪರಿಸ್ಥಿತಿ ಹದಗೆಡುತ್ತಿದ್ದು, ಆರೋಗ್ಯ ವ್ಯವಸ್ಥೆ ಕುಸಿತ ಕಾಣುತ್ತಿದೆ. ಈ ಹಿನ್ನೆಲೆಯಲ್ಲಿ ದಿನನಿತ್ಯದ ಕೋವಿಡ್-19 ಅಂಕಿ-ಸಂಖ್ಯೆಗಳ ಪ್ರಕಟಣೆಯನ್ನು ನಿಲ್ಲಿಸಲು ಚೀನಾ ಆರೋಗ್ಯ ಆಯೋಗ ನಿರ್ಧರಿಸಿದೆ.
ಚೀನಾದ್ಯಂತ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳಲಿ ವಾರ್ಡ್ ಗಳು ಭರ್ತಿಯಾಗಿವೆ. ಔಷಧಗಳ ಕೊರತೆ ಎದುರಾಗಿದೆ. ಇಂದಿನಿಂದ ಕೋವಿಡ್-19 ಸಂಬಂಧಿತ ಮಾಹಿತಿಗಳನ್ನು ದಿನ ನಿತ್ಯ ಪ್ರಕಟಿಸುವುದನ್ನು ನಿಲ್ಲಿಸಲಾಗುವುದು ಎಂದು ಎನ್ ಹೆಚ್ ಸಿ ಹೇಳಿದ್ದು ಇದಕ್ಕಾಗಿ ಸ್ಪಷ್ಟ ಕಾರಣ ನೀಡಿಲ್ಲ.
ಇದನ್ನೂ ಓದಿ: ಕರ್ನಾಕಟದಲ್ಲೂ ಒಮಿಕ್ರಾನ್ BF.7 ಭೀತಿ: ವಿದೇಶದಿಂದ ಬೆಂಗಳೂರಿಗೆ ಬಂದ 7 ಮಂದಿ ಪ್ರಯಾಣಿಕರಿಗೆ ಕೋವಿಡ್ ಸೋಂಕು
ಚೀನಾದಲ್ಲಿ ಸೋಂಕು ಹರಡುತ್ತಿರುವ ವೇಗ ಕೇಸ್ ಲೋಡ್ ಗಳನ್ನು ಪತ್ತೆ ಮಾಡುವುದಕ್ಕೆ ಸಾಧ್ಯವಾಗದ ಸ್ಥಿತಿಗೆ ತಲುಪಿದೆ.
ಎನ್ ಹೆಚ್ ಸಿ ನೀಡಿರುವ ಮಾಹಿತಿಯ ಪ್ರಕಾರ ಚೀನಾದ ರೋಗ ನಿಯಂತ್ರಣ ಹಾಗೂ ತಡೆಗಟ್ಟುವಿಕೆ ಕೇಂದ್ರದಿಂದ ಕೋವಿಡ್-19 ಸಂಬಂಧಿತ ಮಾಹಿತಿ ಪ್ರಕಟವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


