ಭಾಗಶಃ ಸೇನಾ ಸನ್ನದ್ಧತೆಗೆ ರಷ್ಯಾ ಅಧ್ಯಕ್ಷ ಪುಟಿನ್ ಆದೇಶ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ರಷ್ಯಾದ ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದು, ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ನೀಡಿದ ಈ ರೀತಿಯ ಮೊದಲ ಆದೇಶವಾಗಿದೆ.

ಮಾಸ್ಕೊ: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬುಧವಾರ ರಷ್ಯಾದ ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆಗೆ ಆದೇಶಿಸಿದ್ದು, ಎರಡನೇ ಮಹಾಯುದ್ಧದ ನಂತರ ರಷ್ಯಾ ಅಧ್ಯಕ್ಷರೊಬ್ಬರು ನೀಡಿದ ಈ ರೀತಿಯ ಮೊದಲ ಆದೇಶವಾಗಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದಲ್ಲಿ ಭಾಗಶಃ ಮಿಲಿಟರಿ ಸಜ್ಜುಗೊಳಿಸುವಿಕೆಯನ್ನು ಘೋಷಿಸಿದ್ದು, ಈ ಕುರಿತು ರಷ್ಯಾದ ಆರ್ಟಿ ವರದಿ ಮಾಡಿದೆ.
ಆದೇಶದ ವಿಚಾರವಾಗಿ ಮಾತನಾಡಿರುವ ಪುಟಿನ್, 'ಪಶ್ಚಿಮ ದೇಶಗಳು ರೇಖೆಯನ್ನು ದಾಟಿದ್ದು, ಪಶ್ಚಿಮ ದೇಶಗಳು ರಷ್ಯಾವನ್ನು ದುರ್ಬಲಗೊಳಿಸಲು, ವಿಭಜಿಸಲು ಮತ್ತು ನಾಶಮಾಡಲು ಕರೆ ನೀಡುತ್ತಿದೆ. ರಷ್ಯಾದೊಂದಿಗೆ ಪ್ರಾಕ್ಸಿ (ಪರೋಕ್ಷ) ಯುದ್ಧವನ್ನು ಪ್ರಾರಂಭಿಸಲು ಪಾಶ್ಚಿಮಾತ್ಯ ರಾಷ್ಟ್ರಗಳು ಹುನ್ನಾರ ನಡೆಸಿವೆ. ದೇಶವಾಸಿಗಳಿಗೆ ತಮ್ಮ ಭವಿಷ್ಯವನ್ನು ನಿರ್ಧರಿಸಲು ಬೆಂಬಲ ನೀಡಲು ವಿಶೇಷ ಕಾರ್ಯಾಚರಣೆಯ ಗುರಿಗಳು ಬದಲಾಗದೆ -- LPR ಮತ್ತು DPR ಸಂಪೂರ್ಣವಾಗಿ ವಿಮೋಚನೆಗೊಂಡಿದೆ ಎಂದು RT ವರದಿ ಮಾಡಿದೆ.
ಪಾಶ್ಚಿಮಾತ್ಯ ದೇಶಗಳು ‘ಪರಮಾಣು ಬ್ಲ್ಯಾಕ್‌ಮೇಲ್’ಮುಂದುವರೆಸಿದರೆ ರಷ್ಯಾ ತನ್ನ ಎಲ್ಲ ವಿಶಾಲವಾದ ಶಸ್ತ್ರಾಗಾರದ ಶಕ್ತಿಯೊಂದಿಗೆ ಪ್ರತಿಕ್ರಿಯಿಸುತ್ತದೆ ಎಂದು ಪುಟಿನ್ ಅವರು ಎಚ್ಚರಿಸಿದ್ದಾರೆ.
‘ನಮ್ಮ ದೇಶದ ಪ್ರಾದೇಶಿಕ ಸಮಗ್ರತೆಗೆ ಬೆದರಿಕೆಯೊಡ್ಡಿದರೆ, ನಮ್ಮ ಜನರನ್ನು ರಕ್ಷಿಸಲು ನಾವು ಲಭ್ಯವಿರುವ ಎಲ್ಲಾ ವಿಧಾನಗಳನ್ನು ಅನುಸರಿಸುತ್ತೇವೆ' ಎಂದು ಪುಟಿನ್ ರಾಷ್ಟ್ರವನ್ನು ಉದ್ದೇಶಿಸಿ ಟೆಲಿವಿಜನ್ ಭಾಷಣದಲ್ಲಿ ಹೇಳಿದರು.
ಭಾಗಶಃ ಸೇನೆ ಸಜ್ಜುಗೊಳಿಸುವ ಆದೇಶಕ್ಕೆ ಸಹಿ ಹಾಕಿರುವುದಾಗಿ ಪುಟಿನ್ ತಿಳಿಸಿದರು. ಇದು ಸಂಘರ್ಷವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ. ಪೂರ್ವ ಉಕ್ರೇನ್‌ನ ಡಾನ್‌ಬಾಸ್ ಪ್ರದೇಶವನ್ನು ಸ್ವತಂತ್ರಗೊಳಿಸುವುದು ನನ್ನ ಗುರಿಯಾಗಿದೆ ಎಂದು ಪುಟಿನ್ ಹೇಳಿದರು. ರಷ್ಯಾದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿ ಹೆಚ್ಚಿನ ಜನರು ಕೀವ್‌ನಿಂದ ಆಡಳಿತ ನಡೆಯುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


