ವಿದೇಶ

ರಷ್ಯಾ ವಿರುದ್ಧ ಉಕ್ರೇನ್ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರ ಅಪಹರಣ ಆರೋಪ

ಉಕ್ರೇನ್ ನ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರನ್ನು ರಷ್ಯಾ ಅಪರಹರಣ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ರಷ್ಯಾ ವಿರುದ್ಧ ಉಕ್ರೇನ್ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರ ಅಪಹರಣ ಆರೋಪ
ನ್ಯೂಕ್ಲಿಯರ್ ಘಟಕ
Published On :

ಮಾಸ್ಕೋ: ಉಕ್ರೇನ್ ನ ನ್ಯೂಕ್ಲಿಯರ್ ಘಟಕದ ಮುಖ್ಯಸ್ಥರನ್ನು ರಷ್ಯಾ ಅಪರಹರಣ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. 

ಯೂರೋಪ್ ನ ಅತಿ ದೊಡ್ಡ ಪರಮಾಣು ವಿದ್ಯುತ್ ಸ್ಥಾವರವನ್ನು ಈಗ ರಷ್ಯಾ ಆಕ್ರಮಿಸಿಕೊಂಡಿದ್ದು, ರಷ್ಯಾ ಸೇನಾಪಡೆಗಳು ಝಪೊರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಪ್ರಧಾನ ನಿರ್ದೇಶಕ ಇಹೋರ್ ಮುರಶೋವ್ ಅವರನ್ನು ಶುಕ್ರವಾರ ಸಂಜೆ ಅಪಹರಣ ಮಾಡಿವೆ ಎಂದು ಉಕ್ರೇನ್ ಸರ್ಕಾರಿ ಪರಮಾಣು ಕಂಪನಿ ಎನರ್ಗೋಟಮ್ ಹೇಳಿದೆ.

ಮುರಶೋವ್ ಅವರ ಕಾರನ್ನು ರಷ್ಯಾದ ಪಡೆಗಳು ತಡೆದು, ಕಣ್ಣಿಗೆ ಬಟ್ಟೆ ಕಟ್ಟು, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದು ಪರಮಾಣು ಕಂಪನಿ ಎನರ್ಗೋಟಮ್ ಆರೋಪಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.