ಎಲ್ಎಸಿ ಬಳಿ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸಕ್ಕೆ ಚೀನಾ ವಿರೋಧ
ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸವನ್ನು ವಿರೋಧಿಸುವುದಾಗಿ ಚೀನಾ ಬುಧವಾರ ಹೇಳಿದೆ.

ಬೀಜಿಂಗ್: ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸವನ್ನು ವಿರೋಧಿಸುವುದಾಗಿ ಚೀನಾ ಬುಧವಾರ ಹೇಳಿದೆ.
ಎಲ್ಎಸಿ ಬಳಿ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸವು ನವದೆಹಲಿ ಮತ್ತು ಬೀಜಿಂಗ್ ನಡುವೆ ಸಹಿ ಮಾಡಿದ ಗಡಿ ಒಪ್ಪಂದಗಳನ್ನು ಉಲ್ಲಂಘಿಸುತ್ತದೆ ಎಂದು ಚೀನಾ ಪ್ರತಿಪಾದಿಸಿದೆ.
18ನೇ ಭಾರತ-ಅಮೆರಿಕ ಜಂಟಿ ಸೇನಾ 'ಯುದ್ಧ ಅಭ್ಯಾಸ' ಪ್ರಸ್ತುತ ಉತ್ತರಾಖಂಡದಲ್ಲಿ ನಡೆಯುತ್ತಿದ್ದು, ಇದು ಎಲ್‌ಎಸಿಯಿಂದ ಸುಮಾರು 100 ಕಿ.ಮೀ. ದೂರದಲ್ಲಿದೆ.
ಇದನ್ನು ಓದಿ: ಚೀನಾ ಮಾಜಿ ಅಧ್ಯಕ್ಷ ಜಿಯಾಂಗ್ ಜೆಮಿನ್ ನಿಧನ
ಎಲ್ಎಸಿ ಹತ್ತಿರ ಭಾರತ ಮತ್ತು ಅಮೆರಿಕ ನಡುವಿನ ಜಂಟಿ ಸೇನಾ ಯುದ್ಧ ಅಭ್ಯಾಸವು 1993 ಮತ್ತು 1996 ರಲ್ಲಿ ಚೀನಾ ಮತ್ತು ಭಾರತ ನಡುವಿನ ಒಪ್ಪಂದದ ಮನೋಭಾವವನ್ನು ಉಲ್ಲಂಘಿಸುತ್ತದೆ" ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯಾನ್ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಇದು ಚೀನಾ ಮತ್ತು ಭಾರತದ ನಡುವಿನ ಪರಸ್ಪರ ನಂಬಿಕೆಗೆ ಪೂರಕವಾಗಿಲ್ಲ ಎಂದು ಪಾಕಿಸ್ತಾನದ ವರದಿಗಾರ ಕೇಳಿದ ಪ್ರಶ್ನೆಗೆ ಲಿಜಿಯಾನ್ ಉತ್ತರಿಸಿದರು.
ಎರಡು ರಾಷ್ಟ್ರಗಳ ಸೇನೆಗಳ ನಡುವೆ ಉತ್ತಮ ಅಭ್ಯಾಸಗಳು, ತಂತ್ರಗಳು ಮತ್ತು ಕಾರ್ಯವಿಧಾನಗಳನ್ನು ವಿನಿಮಯ ಮಾಡಿಕೊಳ್ಳುವ ಉದ್ದೇಶದಿಂದ ಪ್ರತಿ ವರ್ಷ ಭಾರತ ಮತ್ತು ಅಮೆರಿಕ ನಡುವೆ ಸೇನಾ ಸಮರಾಭ್ಯಾಸ ನಡೆಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


