ಎಲ್ ಎಸಿ

ಪೂರ್ವ ಲಡಾಖ್‌ನ ಎಲ್‌ಎಸಿಯಲ್ಲಿ ಕರ್ತವ್ಯ ನಿರತ ಯೋಧ ಹುತಾತ್ಮ
ಇಂದು ನಡೆದ ಅಪಘಾತದಲ್ಲಿ ಯೋಧ ಶಂಕರ ರಾವ್ ಗೊತ್ತಾಪು ಅವರಿಗೆ ಮಾರಣಾಂತಿಕ ಗಾಯಗಳಾಗಿತ್ತು ಎಂದು ಅವರು ಹೇಳಿದ್ದಾರೆ. ಆದರೆ, ಅಪಘಾತದ ಸ್ವರೂಪವನ್ನು ವಿವರಿಸಿಲ್ಲ.

ಲಡಾಖ್: LAC ಬಳಿ ಸೇನೆ ಟ್ಯಾಂಕ್ ಅಪಘಾತ; ನೀರಿನಲ್ಲಿ ಕೊಚ್ಚಿ ಹೋಗಿ ಐವರು ಯೋಧರು ಸಾವು!
ಲೇಹ್‌ನಿಂದ 148 ಕಿಲೋಮೀಟರ್ ದೂರದಲ್ಲಿರುವ ಮಂದಿರ್ ಮೋರ್ ಬಳಿ ಬೆಳಗ್ಗೆ 1 ಗಂಟೆ ಸುಮಾರಿಗೆ ಟ್ಯಾಂಕ್ ನೊಂದಿಗೆ ನದಿಯನ್ನು ದಾಟುವ ಅಭ್ಯಾಸ ನಡೆಸುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಚೀನಾದೊಂದಿಗೆ ಎಲ್ ಎಸಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದರೂ ಅನಿರೀಕ್ಷಿತವಾಗಿದೆ: ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ
ಉತ್ತರ ಭಾಗದ ಗಡಿಗಳಲ್ಲಿ ಪರಿಸ್ಥಿತಿ ಸ್ಥಿರವಾಗಿದ್ದರೂ ಅನಿರೀಕ್ಷಿತವಾಗಿದೆ. ಏಳು ಸಮಸ್ಯೆಗಳಲ್ಲಿ ಐದನ್ನು ನಾವು ಪರಿಹರಿಸಲು ಸಾಧ್ಯವಾಯಿತು. ನಾವು ಮಿಲಿಟರಿ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ಮುಂದುವರಿಸುತ್ತೇವೆ. ಯಾವುದೇ ಅನಿಶ್ಚಿತತೆಯನ್ನು ಎದುರಿಸಲು ನಮ್ಮ ಬಳಿ ಸಾಕಷ್ಟು ವ್ಯವಸ್ಥೆಯಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಹೇಳಿದ್ದಾರೆ.

ಎಲ್ಎಸಿ ಬಳಿ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸಕ್ಕೆ ಚೀನಾ ವಿರೋಧ
ವಾಸ್ತವಿಕ ಗಡಿ ನಿಯಂತ್ರಣ ರೇಖೆ(ಎಲ್‌ಎಸಿ) ಬಳಿ ನಡೆಯುತ್ತಿರುವ ಭಾರತ-ಅಮೆರಿಕ ಜಂಟಿ ಸೇನಾ ಯುದ್ಧ ಅಭ್ಯಾಸವನ್ನು ವಿರೋಧಿಸುವುದಾಗಿ ಚೀನಾ ಬುಧವಾರ ಹೇಳಿದೆ.

ಎಲ್ ಎಸಿ ಬಳಿ ಹೆಚ್ಚಿದ ಚೀನಾ ಸೇನೆ ಚಟುವಟಿಕೆ: ಸೇನೆಯಿಂದ ಹದ್ದಿನ ಕಣ್ಣು- ಪೂರ್ವ ಸೇನಾ ಕಮಾಂಡರ್
ವಾಸ್ತವ ನಿಯಂತ್ರಣ ರೇಖೆಯಲ್ಲಿ ಚೀನಾ ಸೇನಾ ಪಡೆಯ ಚಟುವಟಿಕೆ ಹೆಚ್ಚಾಗಿದ್ದು, ಅಲ್ಲಿ ಭಾರತೀಯ ಸೇನೆ ತೀವ್ರ ನಿಗಾವಹಿಸಿದೆ ಎಂದು ಪೂರ್ವ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಮಂಗಳವಾರ ಹೇಳಿದ್ದಾರೆ.

ಚೀನಾ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ: ರಕ್ಷಣಾ ಪಡೆ ಮುಖ್ಯಸ್ಥ ಜ. ಬಿಪಿನ್ ರಾವತ್
ಗಡಿ ವಾಸ್ತವ ರೇಖೆ(ಎಲ್ಎಸಿ)ರ ಪೂರ್ವ ಲಡಾಕ್ ನಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ ಎಂದು ಭಾರತೀಯ ರಕ್ಷಣಾ ಪಡೆ ಮುಖ್ಯಸ್ಥ ಜ.ಬಿಪಿನ್ ರಾವತ್ ಹೇಳಿದ್ದಾರೆ.

ಲಡಾಕ್ ಸಂಘರ್ಷ ಮಧ್ಯೆ ಅಂಧ್ರ ಪ್ರದೇಶದಲ್ಲಿ ಭಾರತದ ಗಡಿಗೆ ಹತ್ತಿರವಾಗಿ ರೈಲ್ವೆ ಸಂಪರ್ಕ ಜಾಲ ನಿರ್ಮಾಣ ಆರಂಭಿಸಿದ ಚೀನಾ!
ಪೂರ್ವ ಲಡಾಕ್ ನಲ್ಲಿ ಗಡಿ ವಿವಾದ ಮಧ್ಯೆ ಅರುಣಾಚಲ ಪ್ರದೇಶದ ಭಾರತದ ಗಡಿಯಲ್ಲಿರುವ ಟಿಬೆಟ್ ನ ಲಿಂಜ್ಹಿಯ ನೈರುತ್ಯ ಸಿಚಿಯಾನ್ ಪ್ರಾಂತ್ಯದ ಯಾನ್ ಮಧ್ಯೆ ಸಿಚುವಾನ್-ಟಿಬೆಟ್ ರೈಲ್ವೆ ಸಂಪರ್ಕಜಾಲವನ್ನು ನಿರ್ಮಿಸಲು ಚೀನಾ ಮುಂದಾಗಿದೆ.

ಎಲ್ ಎಸಿ ಬಳಿ ವಾಯುನೆಲೆಗಳು, ವಾಯು ರಕ್ಷಣಾ ಸ್ಥಾನ, ಹೆಲಿಪೋರ್ಟ್ ಗಳನ್ನು ದ್ವಿಗುಣಗೊಳಿಸುತ್ತಿರುವ ಚೀನಾ: ವರದಿ
2017ರಲ್ಲಿ ಡೊಕ್ಲಾಮ ವಿವಾದ ಸಂಭವಿಸಿದ ನಂತರ ವಾಸ್ತವ ನಿಯಂತ್ರಣ ರೇಖೆ ಬಳಿ ಐದು ಹೆಲಿಪೋರ್ಟ್ ಗಳು, ಐದು ಶಾಶ್ವತ ವಾಯು ರಕ್ಷಣಾ ಸ್ಥಾನಗಳು, ಮೂರು ವಾಯುನೆಲೆಗೆಳು ಸೇರಿದಂತೆ ಕನಿಷ್ಠ 13 ಹೊಸ ಮಿಲಿಟರಿ ಸ್ಥಾನಗಳ ನಿರ್ಮಾಣ ಕಾರ್ಯವನ್ನು ಚೀನಾ ಆರಂಭಿಸಿದೆ ಎಂದು ಜಾಗತಿಕ ಭದ್ರತಾ ಕನ್ಸಲ್ ಟೆನ್ಸಿ ಸ್ಟಾರ್ಟ್ ಫಾರ್ ತಿಳಿಸಿದೆ.

ಚೀನಾ ಸೇನೆಯಿಂದ ಐವರು ಯುವಕರ ಅಪಹರಣ: ಪಿಎಲ್ ಎಗೆ ಭಾರತೀಯ ಸೇನೆಯಿಂದಹಾಟ್ ಲೈನ್ ಸಂದೇಶ
ಅರುಣಾಚಲ ಪ್ರದೇಶದ ಅಪ್ಪರ್ ಸುಬನ್ನಿರಿ ಜಿಲ್ಲೆಯಿಂದ ಐವರು ಯುವಕರನ್ನು ಚೀನಾ ಸೇನೆ ಅಪಹರಿಸಿದ ವರದಿಗಳಿಗೆ ಸಂಬಂಧಿಸಿದಂತೆ ಭಾರತೀ ಸೇನೆ ಈಗಾಗಲೇ ಚೀನಾದ ಪೀಪಲ್ಸ್ ಲಿಬರೇಷನ್ ಆಫ್ ಆರ್ಮಿ(ಪಿಎಲ್ ಎ)ಗೆ ಹಾಟ್ ಲೈನ್ ಸಂದೇಶ ಕಳುಹಿಸಲಾಗಿದೆ ಎಂದು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಭಾನುವಾರ ತಿಳಿಸಿದ್ದಾರೆ.

